ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ದೊಡ್ಡಬಳ್ಳಾಪುರದ ನಗರಸಭೆ ನಿಧಿ ವತಿಯಿಂದ ಎಲ್ಐಸಿ ಕಚೇರಿ ಕಟ್ಟಡದ ಪಕ್ಕದಲ್ಲಿ ನಗರಸಭಾ ವಾಣಿಜ್ಯ ಸಂಕೀರ್ಣದ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ನಗರಸಭೆ ಆಯುಕ್ತ ಕಾರ್ತಿಕ್ ಈಶ್ವರ್, ನಗರಸಭಾ ಅಧ್ಯಕ್ಷೆ ಸುಮಿತ್ರ ಆನಂದ್, ಉಪಾಧ್ಯಕ್ಷ ಮಲ್ಲೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ರವಿಕುಮಾರ್, ಸದಸ್ಯರಾದ ತ.ನ ಪ್ರಧುದೇವ್, ಬಂತಿ ವೆಂಕಟೇಶ್, ಎಸ್ ಪದ್ಮನಾಭ, ಭಾಸ್ಕರ್, ಶಿವರಾಜ್, ಲಕ್ಷ್ಮೀಪತಿ, ಹಂಸಪ್ರಿಯ, ವತ್ಸಲ, ಇಂದ್ರಾಣಿ, ಪ್ರಭಾ ನಾಗರಾಜ್ ಮತ್ತು ಪ್ರಮುಖರು ಉಪಸ್ಥಿತರಿದ್ದರು.