ಲಲಿತಕಲಾ ಅಕಾಡೆಮಿಯ ಪುಸ್ತಕ ಬಹುಮಾನಕ್ಕಾಗಿ ಅರ್ಜಿ ಆಹ್ವಾನ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕ ಲಲಿತಕಲಾ ಅಕಾಡೆಮಿಯು ಪ್ರತಿ ವರ್ಷದಂತೆ 2023ನೇ ಸಾಲಿನ ಪುಸ್ತಕ ಬಹುಮಾನ ಯೋಜನೆಗಾಗಿ ವಿವಿಧ ಪ್ರಕಾರಗಳ ಚಿತ್ರಕಲೆಗೆ ಸಂಬಂಧಿಸಿದ ಕನ್ನಡ ಪುಸ್ತಕಗಳನ್ನು ಆಹ್ವಾನಿಸಿದೆ.

ಪ್ರತಿ ಪ್ರಕಾರದಲ್ಲಿ ತೀರ್ಪುಗಾರರು ಆಯ್ಕೆ ಮಾಡುವ ಒಂದು ಪುಸ್ತಕಕ್ಕೆ ಬಹುಮಾನ ನೀಡಲಾಗುವುದು. ಬಹುಮಾನಕ್ಕೆ ಸಲ್ಲಿಸುವ ಪುಸ್ತಕಗಳು 2023 ಜನವರಿ 01 ರಿಂದ 2023ರ ಡಿಸೆಂಬರ್ 31ರೊಳಗೆ ಪ್ರಥಮ ಆವೃತ್ತಿಯಾಗಿ ಪ್ರಕಟವಾಗಿರುವ ಪುಸ್ತಕಗಳಾಗಿರಬೇಕು. ಪುಸ್ತಕದ ತಾಂತ್ರಿಕ ಪುಟದಲ್ಲಿ ಪ್ರಥಮ ಮುದ್ರಣ 2023 ಎಂದು ಮುದ್ರಿತವಾಗಿರಬೇಕು.

2023ನೇ ಸಾಲಿನ ಚಿತ್ರಕಲೆಗೆ ಸಂಬಂಧಿಸಿದ ಪ್ರಕಟಿತ ಅತ್ಯುತ್ತಮ ಪುಸ್ತಕಕ್ಕೆ ಬಹುಮಾನ
ಪುಸ್ತಕ ಬಹುಮಾನದ ಮೊತ್ತ ರೂ. 25,000. ಪುಸ್ತಕ ಬಹುಮಾನಕ್ಕೆ ಕಳುಹಿಸುವ ಪುಸ್ತಕವು ಪುನರ್ ಮುದ್ರಣವಾಗಿರಬಾರದು, ಮೊದಲ ಆವೃತ್ತಿಯಲ್ಲಿ ಪ್ರಕಟಗೊಂಡಿರಬೇಕು. ಪುಸ್ತಕ ಬಹುಮಾನಕ್ಕೆ ಕಳುಹಿಸುವ ಪುಸ್ತಕಗಳು ಯಾವುದೇ ತರಗತಿಗಳಿಗೆ ಹಾಗೂ ವಿಶ್ವ ವಿದ್ಯಾಲಯದ ಪಠ್ಯಪುಸ್ತಕವಾಗಿರಬಾರದು.

ಪುಸ್ತಕವು ಲೇಖಕರ ಸ್ವಂತ ರಚನೆಯಾಗಿರಬೇಕು. ಸಂಪಾದಿತ ಕೃತಿಯಾಗಿರಬಾರದು. ಹಾಗೂ ಪುಸ್ತಕವನ್ನು ಅಕ್ಟೋಬರ್ 30 ರೊಳಗಾಗಿ ಒಳಗಾಗಿ ಅಕಾಡೆಮಿಗೆ ತಲುಪಿಸಬೇಕು. ಪುಸ್ತಕ ಬಹುಮಾನಕ್ಕೆ ಆಯ್ಕೆಯಾದ ಪುಸ್ತಕದ ಲೇಖಕರಿಗೆ ಈ ಬಹುಮಾನ ನೀಡಲಾಗುವುದು.

ಬಹುಮಾನಕ್ಕೆ ಪರಿಗಣಿಸಲು ಕನಿಷ್ಠ ಮೂರು ಜನ ಲೇಖಕರು ಸ್ಪರ್ಧೆಯಲ್ಲಿ ಭಾಗವಹಿಸಬೇಕು. ಒಂದೇ ಪ್ರಕಾರದಲ್ಲಿ ಎರಡು ಬಾರಿ ಪುಸ್ತಕ ಬಹುಮಾನ ಪಡೆದವರ ಪುಸ್ತಕಗಳನ್ನು ಅದೇ ಪ್ರಕಾರದಲ್ಲಿ ಮತ್ತೆ ಬಹುಮಾನಕ್ಕೆ ಪರಿಗಣಿಸಲಾಗುವುದಿಲ್ಲ. ವಿವಿಧ ಸರ್ಕಾರಿ ಸಂಸ್ಥೆಗಳು, ವಿಶ್ವವಿದ್ಯಾಲಯಗಳು, ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಪುಸ್ತಕ ಪ್ರಾಧಿಕಾರ, ಇತರೆ ಎಲ್ಲಾ ಅಕಾಡೆಮಿಗಳು, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಇನ್ನೂ ಮುಂತಾದ ಅನುದಾನ ಸಂಸ್ಥೆಗಳಿಂದ ಅನುದಾನ ಪಡೆದು ತಾವೇ ಪ್ರಕಟಿಸಿದ ಅಥವಾ ಅಂತಹ ಸಂಸ್ಥೆಗಳಿಂದ ಬರೆಸಿ ಪ್ರಕಟಿಸಿದ ಕೃತಿಗಳನ್ನು ಪ್ರಶಸ್ತಿಗೆ ಪರಿಗಣಿಸುವುದಿಲ್ಲ.

ಲಲಿತಕಲೆಗೆ ಸಂಬಂಧಪಟ್ಟ ಸಾಂಪ್ರದಾಯಕ, ಸಮಕಾಲೀನ, ಚಿತ್ರ, ಭಿತ್ತಿಚಿತ್ರಕಲೆ ಗ್ರಾಫಿಕ್ಸ್  ಯಾವುದೇ ಪ್ರಕಾರದ ಲಲಿತಕಲೆಗೆ ಸಂಬಂಧಪಟ್ಟದ್ದಾಗಿರಬೇಕು. ಶೈಕ್ಷಣಿಕ ಅಧ್ಯಯನಕ್ಕಾಗಿ ಪಿಹೆಚ್.ಡಿ, ಡಿ.ಲಿಟ್, ಪ್ರಬಂಧ ಅಥವಾ ಅಧ್ಯಯನಕ್ಕಾಗಿ ಮಾಡಿದಂತಹ ಪುಸ್ತಕಗಳನ್ನು ಪರಿಗಣಿಸುವುದಿಲ್ಲ. ಕೃತಿ, ಪುಸ್ತಕವು ಕನಿಷ್ಠ 100 ಪುಟಗಳಿಗೂ ಹೆಚ್ಚಿನ ಪುಟಗಳನ್ನು ಹೊಂದಿರತಕ್ಕದ್ದು. ಒಬ್ಬ ಲೇಖಕರು ಪುಸ್ತಕ ಬಹುಮಾನಕ್ಕೆ ಆಯ್ಕೆಯಾಗಿ ಬಹುಮಾನ ಪಡೆದ ನಂತರ ಆ ಲೇಖಕರು ಮತ್ತೆ 2 ವರ್ಷಗಳವರೆಗೆ ಅಕಾಡೆಮಿಯಿಂದ ಬಹುಮಾನ ಪಡೆಯಬಾರದು. ಪುಸ್ತಕ ಬಹುಮಾನಕ್ಕೆ ಅರ್ಜಿ ಸಲ್ಲಿಸುವ ಲೇಖಕರು ತಾವು ಕಳುಹಿಸುವ ಪುಸ್ತಕದ  4 ಪ್ರತಿಗಳನ್ನು ಉಚಿತವಾಗಿ ಕರ್ನಾಟಕ ಲಲಿತಕಲಾ ಅಕಾಡೆಮಿಗೆ ಕಡ್ಡಾಯವಾಗಿ ನೀಡಬೇಕು.

ಪುಸ್ತಕಗಳನ್ನು ಯಾವುದೇ ಕಾರಣಕ್ಕೂ ಹಿಂದಿರುಗಿಸುವುದಿಲ್ಲ. ಕನ್ನಡ ಭಾಷೆಯ ಪುಸ್ತಕಗಳನ್ನು ಮಾತ್ರ ಪರಿಗಣಿಸಲಾಗುವುದು. ತೀರ್ಪುಗಾರರು ಆಯ್ಕೆಮಾಡಿದ ಒಂದು ಪುಸ್ತಕಕ್ಕೆ ಬಹುಮಾನ ನೀಡಲಾಗುವುದು. ಅಕಾಡೆಮಿಯಲ್ಲಿ  ಪ್ರಸಕ್ತ ಸಾಲಿನಲ್ಲಿ ಸ್ವೀಕೃತವಾದ ಪುಸ್ತಕಗಳನ್ನು  3 ಮಂದಿ ವಿಷಯ ತಜÐರಿಗೆ ಕಳುಹಿಸಿಕೊಟ್ಟು ಅವರು ಶಿಫಾರಸ್ಸು ಮಾಡಿದ ಪುಸ್ತಕಗಳನ್ನು ಅಕಾಡೆಮಿಯ ಸಭೆಯಲ್ಲಿ ಮಂಡಿಸಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ. ಅಕಾಡೆಮಿಯ ತೀರ್ಮಾನವೇ ಅಂತಿಮ ತೀರ್ಮಾನವಾಗಿರುತ್ತದೆ. ಪುಸ್ತಕ ಬಹುಮಾನಕ್ಕೆ ಕಳುಹಿಸುವ ಪುಸ್ತಕಗಳು ಸರ್ಕಾರಿ ರಜಾದಿನಗಳನ್ನು ಹೊರತು ಪಡಿಸಿ ನವೆಂಬರ್ 30 ರ ಒಳಗಾಗಿ  ಖುದ್ದಾಗಿ ಅಥವಾ ಅಂಚೆ ಮೂಲಕ ಕರ್ನಾಟಕ ಲಲಿತಕಲಾ ಅಕಾಡೆಮಿಗೆ ಸಲ್ಲಿಸಬಹುದಾಗಿದೆ.

2023 ಜನವರಿ 01 ರಿಂದ 2023ರ ಡಿಸೆಂಬರ್ 31 ರ ಅವಧಿಯಲ್ಲಿ ಪ್ರಕಟವಾದ ಪುಸ್ತಕಗಳ ತಲಾ 4 ಪ್ರತಿಗಳನ್ನು ರಿಜಿಸ್ಟ್ರಾರ್, ಕರ್ನಾಟಕ ಲಲಿತಕಲಾ ಅಕಾಡೆಮಿ, ಕನ್ನಡ ಭವನ, 2 ನೇಮಹಡಿ, ಜೆ.ಸಿ.ರಸ್ತೆ, ಬೆಂಗಳೂರು-580 002, ಇವರಿಗೆ ಕಳುಹಿಸಿ ಕೊಡಬೇಕು. ಹಾಗೂ ಪುಸ್ತಕದ ಮೇಲೆ ಮತ್ತು ಪುಸ್ತಕದ ಶೀರ್ಷಿಕೆ ಪುಟದಲ್ಲಿ ಯಾವ ಚಿತ್ರಕಲಾ ಪ್ರಕಾರಕ್ಕೆ ಸೇರುತ್ತದೆ ಎನ್ನುವುದನ್ನು ಸ್ಪಷ್ಟವಾಗಿ ನಮೂದಿಸಿರಬೇಕು ಎಂದು ಕರ್ನಾಟಕ ಲಲಿತಕಲಾ ಅಕಾಡೆಮಿಯ ರಿಜಿಸ್ಟ್ರಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.                                                                            

- Advertisement -  - Advertisement - 
Share This Article
error: Content is protected !!
";