ರೈಲು ಸೇವೆಗಳ ರದ್ದು ಹಾಗೂ ಮರುನಿಗದಿ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರೈಲು ಸೇವೆಗಳ ರದ್ದು, ನಿಯಂತ್ರಣ ಹಾಗೂ ಮರುನಿಗದಿ-

ಸೊಮಲಾಪುರಂರಾಯದುರ್ಗ ರೈಲು ನಿಲ್ದಾಣಗಳ ನಡುವೆ ಬದನಹಲ್ಲುಯಲ್ಲಿ ಹೊಸ ಕ್ರಾಸಿಂಗ್ ನಿಲ್ದಾಣ ನಿರ್ಮಾಣ ಕಾರ್ಯಕ್ಕಾಗಿ ಕಟ್ ಹಾಗೂ ಕನೆಕ್ಷನ್ ಕೆಲಸಗಳನ್ನು ನಡೆಸಲು ಲೈನ್ ಬ್ಲಾಕ್ ಮತ್ತು ಪವರ್ ಬ್ಲಾಕ್ ಕೈಗೊಳ್ಳಲಾಗಿರುವುದರಿಂದ ಕೆಳಗಿನ ರೈಲು ಸೇವೆಗಳು ಎರಡು ದಿನಗಳ ಕಾಲ ರದ್ದುಗೊಳ್ಳುತ್ತವೆ,

- Advertisement - 

ನಿಯಂತ್ರಣಕ್ಕೊಳಪಡುತ್ತವೆ ಮತ್ತು ಮರುನಿಗದಿಗೊಳ್ಳುತ್ತವೆ. ರದ್ದುಪಡಿಸಲಾದ ರೈಲುಗಳು:
ರೈಲು ಸಂಖ್ಯೆ
57415 ಗುಂತಕಲ್ ಚಿಕ್ಕಜಾಜೂರು ಪ್ಯಾಸೆಂಜರ್ ದಿನಾಂಕ 02.09.2025 ಮತ್ತು 09.09.2025 ರಂದು ರದ್ದುಗೊಳ್ಳುತ್ತದೆ.

ರೈಲು ಸಂಖ್ಯೆ 57416 ಚಿಕ್ಕಜಾಜೂರು ಗುಂತಕಲ್ ಪ್ಯಾಸೆಂಜರ್ ದಿನಾಂಕ 02.09.2025 ಮತ್ತು 09.09.2025 ರಂದು ರದ್ದುಗೊಳ್ಳುತ್ತದೆ.
ನಿಯಂತ್ರಿತ ಮತ್ತು ಮರುನಿಗದಿಪಡಿಸಲಾದ ರೈಲುಗಳು-

- Advertisement - 

ರೈಲು ಸಂಖ್ಯೆ 57405 ತಿರುಪತಿ ಕದಿರಿದೇವರಪಳ್ಳಿ ಪ್ಯಾಸೆಂಜರ್ ದಿನಾಂಕ 01.09.2025 ಮತ್ತು 08.09.2025 ರಂದು ಮಾರ್ಗಮಧ್ಯದಲ್ಲಿ 60 ನಿಮಿಷ ನಿಯಂತ್ರಿಸಲಾಗುವುದು.

ರೈಲು ಸಂಖ್ಯೆ 57406 ಕದಿರಿದೇವರಪಳ್ಳಿ ತಿರುಪತಿ ಪ್ಯಾಸೆಂಜರ್ ದಿನಾಂಕ 02.09.2025 ಮತ್ತು 09.09.2025 ರಂದು ಕದಿರಿದೇವರಪಳ್ಳಿಯಿಂದ 60 ನಿಮಿಷ ಮರುನೀಗದಿಗೊಳಿಸಲಾಗುತ್ತದೆ ಎಂದು ಮೈಸೂರು ವಿಭಾಗದ ನೈಋತ್ಯ ರೈಲೈ ವಿಭಾಗೀಯ ಹಣಕಾಸು ವ್ಯವಸ್ಥಾಪಕರು ಹಾಗೂ ಸಾರ್ವಜನಿಕ ಸಂಪರ್ಕ ಅಧಿಕಾರಿ ಪೃಥ್ವಿ ಎಸ್ ಹುಲ್ಲತ್ತಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿ ತಿಳಿಸಿದ್ದಾರೆ.

 

Share This Article
error: Content is protected !!
";