ನಾನೇನು ತಪ್ಪು ಮಾಡಿರುವೆ ಎಂದು ಕಣ್ಣೀರಿಟ್ಟ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ

News Desk

ಚಂದ್ರವಳ್ಳಿ ನ್ಯೂಸ್, ಚನ್ನಪಟ್ಟಣ:
ಸತತ ಎರಡು ಚುನಾವಣೆಯಲ್ಲಿ ಸೋತಿರುವೆ. ರಾಜಕೀಯ ಷಡ್ಯಂತ್ರಕ್ಕೆ ನಾನು ಬಲಿಯಾಗಿದ್ದೇನೆ. ನಾನು ಏನು ತಪ್ಪು ಮಾಡಿದ್ದೇನೆಂದು ಗೊತ್ತಾಗುತ್ತಿಲ್ಲ ಎಂದು ಚನ್ನಪಟ್ಟಣ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಗುರುವಾರ ಭಾವುಕಾರಿ ಕಣ್ಣೀರು ಹಾಕಿದರು.

ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕನ್ನಮಂಗಲ ಗ್ರಾಮದಲ್ಲಿ ಚುನಾವಣಾ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದ ನಿಖಿಲ್ ಕುಮಾರಸ್ವಾಮಿ,

ನನಗೆ ಜನರು ಮತ ಹಾಕಿದ್ದಾರೆ. ಆದರೆ ನಾನು ರಾಜಕೀಯ ಷಡ್ಯಂತ್ರಕ್ಕೆ ಬಲಿಯಾಗಿದ್ದೇನೆ. ಇದರಿಂದ ನನಗೆ ತೀವ್ರ ನೋವಾಗಿದೆ. ಪಕ್ಷದ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಲು ಈ ಬಾರಿ ಚುನಾವಣೆಯಲ್ಲಿ ನಿಂತಿದ್ದೇನೆ. ನೀವೆಲ್ಲರೂ ಈ ಯುವಕನಿಗೆ ಗೆಲ್ಲುವ ಅವಕಾಶ ನೀಡಬೇಕೆಂದು ಕಣ್ಣೀರು ಹಾಕುತ್ತಾ ಮನವಿ ಮಾಡಿದರು.

ನಾನೇನು ತಪ್ಪು ಮಾಡಿದ್ದೆನೋ ಗೊತ್ತಿಲ್ಲ. ಬಹುಶಃ ಮಾಜಿ ಪ್ರಧಾನಿಯ ಮೊಮ್ಮಗನಾಗಿ ಮತ್ತು ಮಾಜಿ ಮುಖ್ಯಮಂತ್ರಿಯ ಮಗನಾಗಿ ಹುಟ್ಟಿರುವುದು ನನ್ನ ದುರದೃಷ್ಟನೋ ಗೊತ್ತಿಲ್ಲ ಎಂದು ಭಾವುಕರಾದರು.
ಚುನಾವಣೆಯಲ್ಲಿ ಕಣ್ಣೀರು ಹಾಕಬಾರದು ಎಂದು ನಿರ್ಧರಿಸಿದ್ದೆ. ಆದರೆ ತುಂಬಾ ನೋವುಗಳಿವೆ ಎಂದು ನಿಖಿಲ್ ಕುಮಾರಸ್ವಾಮಿ ಕಣ್ಣೀರು ಹಾಕಿದರು.

ಕಳೆದ ಲೋಕಸಭಾ ಚುನಾವಣೆ ವೇಳೆ ಮಂಡ್ಯದಲ್ಲಿ ನಡೆದ ನೋವಿನ ಘಟನೆಗಳನ್ನು ನೆನಪಿಸಿಕೊಂಡ ನಿಖಿಲ್, ನನ್ನ ಮೂಲಕ ಉತ್ತರ ಕೊಡ್ಬೇಕು ಅಂತ ಕಾರ್ಯಕರ್ತರ ಭಾವನೆಯಾಗಿತ್ತು ಅಂಬೇಡ್ಕರ್ ಭವನದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಏನಾಗಿತ್ತು ಅಂತ ಎಲ್ಲರಿಗೂ ಗೊತ್ತು ಎಂದು ನಿಖಿಲ್ ಕುಮಾರಸ್ವಾಮಿ ಹೇಳಿದರು.

ದೇವೇಗೌಡರಿಗೆ ಒಮ್ಮೆ ನಾನು ಪ್ರಾದೇಶಿಕ ಪಕ್ಷ ಕಟ್ಟುವುದೇ ಕಷ್ಟ ಬೇಡ ಎಂದು ಮನವಿ ಮಾಡಿದ್ದೆ. ಮತದಾರರ ಬೆಂಬಲದಿಂದಾಗಿ ರಾಜ್ಯದಲ್ಲಿ ಜೆಡಿಎಸ್ ಉಳಿದಿದೆ. ಆದರೆ ರೈತ ಪರವಾಗಿ ಕಾಳಜಿ ಇಟ್ಟ್ಕೊಂಡು ಈ ಪಕ್ಷ ಕಟ್ಟಿದ್ದಾರೆ. ನಂತರ ಕುಮಾರಣ್ಣ ಅವರು ಅಧಿಕಾರ ಇರಲಿ ಇಲ್ಲದೆ ಇರಲಿ ರೈತರ ಪರವಾಗಿ ನಿರಂತರವಾಗಿ ಸಾಲ ಮನ್ನಾ ಮಾಡಿದ್ದಾರೆ. ಅನೇಕ ಅಭಿವೃದ್ಧಿ ಕೆಲಸಗಳು ಮಾಡಿದ್ದಾರೆ ಎಂದು ನಿಖಿಲ್ ಕುಮಾರಸ್ವಾಮಿ ತಿಳಿಸಿದರು.

 

 

- Advertisement -  - Advertisement -  - Advertisement - 
Share This Article
error: Content is protected !!
";