45 ದಿನದಲ್ಲಿ 1.14 ಲಕ್ಷ ರೂ. ಮೌಲ್ಯದ ಗಾಂಜಾ ವಶ

khushihost

 

 

 

ಶಿವಮೊಗ್ಗ : ಜಿಲ್ಲೆಯಲ್ಲಿ ಕಳೆದ ಒಂದೂವರೆ ತಿಂಗಳಲ್ಲಿ ಸುಮಾರು 1.14 ಲಕ್ಷ ರೂ. ಮೌಲ್ಯದ 3 ಕೆಜಿ 875 ಗ್ರಾಮ್ ನಷ್ಟು ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಗಾಂಜಾ ಮಾರಾಟ ಮತ್ತು ಸಾಗಾಟದ 10, ಸೇವನೆಯ 59 ಪ್ರಕರಣ ದಾಖಲಿಸಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಗುರುವಾರ ಈ ವಿಷಯ ಪ್ರಕಟಿಸಿದ ಜಿಲ್ಲಾ ಪೊಲೀಸ್ ವರಿಷ್ಠ ಜಿ ಕೆ. ಮಿಥುನ್ ಕುಮಾರ್,

ಶಿವಮೊಗ್ಗ ಎ ಉಪವಿಭಾಗದಲ್ಲಿ 9 ಸಾವಿರ ರೂ‌ ಬಿ ಉಪವಿಭಾಗದಲ್ಲಿ 97, 500ರೂ. ಭದ್ರಾವತಿಯಲ್ಲಿ 5 ಸಾವಿರ ರೂ, ಸಾಗರದಲ್ಲಿ 3 ಸಾವಿರ ರೂ. ಮೌಲ್ಯದ ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಗಾಂಜಾ ಸೇವನೆಯ 59 ಪ್ರಕರಣದಲ್ಲಿ 68 ಜನರನ್ನು ಬಂಧಿಸಲಾಗಿದೆ ಎಂದರು.

ಸೆ. 3ರಂದು ನಗರದ ಸುಬ್ಬಯ್ಯ ಮೆಡಿಕಲ್ ಕಾಲೇಜು ಹಿಂಭಾಗದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ದಾಳಿ ನಡೆಸಿ ಬಂಧಿಸಲಾಗಿದೆ. ಬಂಧಿತರಿಂದ 70 ಸಾವಿ ರ ರೂ. ಮಾಲ್ಯದ ಗಾಂಜಾ ವಶಪಡಿಕೊಳ್ಳಲಾಗಿದೆ.

ಸಾಗರದ ರಾಮನಗರದ ಅಲ್ತಾಫ್ ಅಲಿಯಾಸ್ ಮಚ್ಚಿ ಮತ್ತು ಶಿವಮೊಗ್ಗ ಜೆ ಪಿ ನಗರದ ತಬ್ರೇಜ್ ಎನ್ನುವವರ ನ್ನು ಬಂಧಿಸಲಾಗಿದೆ ಎಂದರು.

ಅಲ್ತಾಫ್ ವಿರುದ್ಧ ಇಲ್ಲಿಯವರೆಗೆ ಗಾಂಜಾ ಸಂಬಂಧ 5 ಕೇಸು ಇದೆ. ಸಾಗರದಲ್ಲಿ 3 ಕೇಸಿದೆ

ಜೂಜು, ಮಾರಣಾಂತಿಕ ರಸ್ತೆ ಅಪಘಾತ, ದ ಪ್ರಕರಣ ಸಹ ಈತನ ಮೇಲಿದೆ ಎಂದರು.

- Advertisement -  - Advertisement - 
Share This Article
error: Content is protected !!
";