ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸುರಕ್ಷಿತ ಆರ್ಥಿಕ ಭದ್ರತೆ ಮತ್ತು ಪಾರದರ್ಶಕ ಅರ್ಜಿ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳುವುದು ನಮ್ಮ ಕೈಗಾರಿಕಾ ಬೆಳವಣಿಗೆಯ ಮಾರ್ಗಸೂಚಿಯ ತಿರುಳು. ಸ್ಪಷ್ಟ ಮಾರ್ಗಸೂಚಿಗಳು ಮತ್ತು ಸುವ್ಯವಸ್ಥಿತ ಅನುಮೋದನೆಗಳೊಂದಿಗೆ, ನಾವು ಸದೃಢವಾದ, ಸ್ವಾವಲಂಬಿ ಭಾರತಕ್ಕೆ ದಾರಿ ಮಾಡಿಕೊಡುತ್ತಿದ್ದೇವೆ ಎಂದು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಹೆಚ್.ಡಿ ಕುಮಾರಸ್ವಾಮಿ ತಿಳಿಸಿದ್ದಾರೆ ಎಂದು ಜೆಡಿಎಸ್ ತಿಳಿಸಿದ್ದಾರೆ.
ಇಂಗಾಲ ಹೊರಸೂಸುವಿಕೆಯನ್ನು 2070ರ ಹೊತ್ತಿಗೆ ನಿವ್ವಳ ಶೂನ್ಯಕ್ಕೆ ಇಳಿಸುವ ನಿಟ್ಟಿನಲ್ಲಿ ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಅವರು ಬದ್ಧರಾಗಿದ್ದಾರೆ. ಅವರ ಸಹಕಾರದೊಂದಿಗೆ ಕೇಂದ್ರ ಉಕ್ಕು ಮತ್ತು ಭಾರೀ ಕೈಗಾರಿಕೆ ಸಚಿವರಾದ ಹೆಚ್.ಡಿ ಕುಮಾರಸ್ವಾಮಿ ಅವರು ಇವಿ ಉತ್ಪಾದನೆಯಲ್ಲಿ ಭಾರತವನ್ನು ಜಾಗತಿಕ ಹಬ್ ಆಗಿಸಲು ಶ್ರಮಿಸುತ್ತಿದ್ದಾರೆ ಎಂದು ಜೆಡಿಎ ತಿಳಿಸಿದೆ.