ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಅಧಿಕಾರದ ಮದದಲ್ಲಿ ಮೆರೆಯುತ್ತಿರುವ ಲೂಟಿಕೋರ ಕರ್ನಾಟಕ ಕಾಂಗ್ರೆಸ್ ಸರ್ಕಾರ, ಮೈದಾನ ಸರಿಪಡಿಸಿ ಎಂದು ಕೇಳಿದ ಅಥ್ಲಿಟ್‌ಮೇಲೆ ಕೇಸ್‌ದಾಖಲಿಸಿ, ವಾಕ್‌ಸ್ವಾತಂತ್ರ್ಯ ಹತ್ತಿಕ್ಕುವ ಕೆಲಸ ಮಾಡುತ್ತಿದೆ ಎಂದು ವಿಪಕ್ಷಗಳು ಟೀಕಿಸಿವೆ.
ಉದ್ಯೋಗ ಕೇಳಿದ ಯುವಕರಿಗೆ ಲಾಠಿ ಏಟು ನೀಡುವ ಭಂಡ ಸರ್ಕಾರ, ಸೌಲಭ್ಯ ಕೇಳುವ ಅಥ್ಲಿಟ್‌ಗಳನ್ನು ಅಪರಾಧಿಗಳಂತೆ ಕಾಣುತ್ತಿದೆ. ಕಲ್ಯಾಣ ಕರ್ನಾಟಕದ ಭಾಗದ ಕ್ರೀಡಾ ಅಭಿವೃದ್ಧಿಗೆ ಶ್ರಮಿಸುವ ಬದಲು, ಕ್ರೀಡಾಪಟುಗಳನ್ನೂ ಜೈಲಿಗೆ ಅಟ್ಟುವ ಹುನ್ನಾರ ನಡೆಸಿದೆ ಎಂದು ಆತಂಕ ವ್ಯಕ್ತಪಡಿಸಿವೆ.
ಕಾಂಗ್ರೆಸ್ ಆಡಳಿತದಲ್ಲಿ..
ಸೌಲಭ್ಯ ಕೇಳಿದ್ರೆ ಕೇಸ್ ದಾಖಲಿಸಲಾಗುತ್ತೆ, ಸರ್ಕಾರದ ವೈಫಲ್ಯ ಟೀಕಿಸಿದ್ರೆ ದ್ವೇಷ ಭಾಷಣ ಎಂದು ಜೈಲಿಗೆ ಅಟ್ಟಲಾಗುತ್ತದೆ ಯಾದಗಿರಿ ಜಿಲ್ಲಾ ಉಸ್ತುವಾರಿ ಶರಣಬಸಪ್ಪ ದರ್ಶನಾಪುರ ಅವರೇ…
ಯಾದಗಿರಿ ಜಿಲ್ಲೆಯಲ್ಲಿ ಪ್ರಜಾಪ್ರಭುತ್ವ ಉಳಿದಿದೆಯೇ.? ಅಘೋಷಿತ ತುರ್ತು ಪರಿಸ್ಥಿತಿ ಜಾರಿಗೊಳಿಸಲಾಗಿದೆಯೇ.? ಬಡ ಕ್ರೀಡಾಪಟುಗಳ ಮೇಲೆ ದೌರ್ಜನ್ಯ ಮೆರೆಯುವ ಹಾಗೂ ನಾಡಿನ ಯುವಕರ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿರುವ ಸಂವಿಧಾನ ವಿರೋಧಿ ಕಾಂಗ್ರೆಸ್‌ಸರ್ಕಾರದ ಕೊನೆಯ ದಿನಗಳು ಸಮೀಪಿಸುತ್ತಿವೆ.! ಶಾಂತವಾಗುವ ಹೊತ್ತಲ್ಲಿ ದೀಪ ಹೊತ್ತಿ ಉರಿದಂತೆ ಕಾಂಗ್ರೆಸ್ ಸರ್ಕಾರ ದರ್ಪದಲ್ಲಿ ಮೆರೆಯುತ್ತಿದೆ…! ಎಂದು ವಿರೋಧ ಪಕ್ಷಗಳ ನಾಯಕರು ವಾಗ್ದಾಳಿ ಮಾಡಿದ್ದಾರೆ.

