ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಒಕ್ಕಲಿಗ ಸಮುದಾಯದ ಕುಲಬಾಂಧವರಲ್ಲಿ ಮನವಿ :
ಕರ್ನಾಟಕ ರಾಜ್ಯದ ಜಾತಿ ಜನಗಣತಿಯ ಬಗ್ಗೆ ಕಾಂತರಾಜು ಆಯೋಗ ನೀಡಿರುವ ವರದಿಯನ್ನು ದಿನಾಂಕ 11-04-2025 ರಂದು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಕರ್ನಾಟಕ ಸರ್ಕಾರದ ಮಾನ್ಯ ಸಚಿವರುಗಳ ಪರಾಮರ್ಶೆಗೆ ನೀಡಲಾಗಿರುತ್ತದೆ. ಈ ಕುರಿತು ಅಂತಿಮ ನಿರ್ಧಾರವನ್ನು ಕೈಗೊಳ್ಳಲು ದಿನಾಂಕ 17.4.2025 ರಂದು ಘನ ಕರ್ನಾಟಕ ಸರ್ಕಾರವು ರಾಜ್ಯ ಸಚಿವ ಸಂಪುಟದ ವಿಶೇಷ ಸಭೆಯನ್ನು ಏರ್ಪಡಿಸಲಾಗಿದೆ.
ಈ ಬಗ್ಗೆ ರಾಜ್ಯ ಒಕ್ಕಲಿಗರ ಸಂಘವು ಜಾತಿ ಗಣತಿಯ ಕುರಿತು ಅಂತಿಮ ನಿರ್ಣಯವನ್ನು ಕೈಗೊಳ್ಳುವ ಸಲುವಾಗಿ ದಿನಾಂಕ 15-04-2025 ರ ಮಂಗಳವಾರ 12 ಗಂಟೆಗೆ ತುರ್ತು ಕಾರ್ಯಕಾರಿ ಸಮಿತಿ ಸಭೆಯನ್ನು ಕರೆಯಲಾಗಿದೆ. ಸಭೆಯಲ್ಲಿ ಸಮಾಜದ ಕುಲ ಗುರುಗಳ ಮತ್ತು ಪಕ್ಷಬೇಧ ಮರೆತು ಎಲ್ಲಾ ರಾಜಕೀಯ ಮುಖಂಡರುಗಳ ಅಭಿಪ್ರಾಯ ಮತ್ತು ಅನಿಸಿಕೆಗಳನ್ನು ಒಟ್ಟುಗೂಡಿಸಿಕೊಂಡು ಒಕ್ಕಲಿಗರ ಸಮುದಾಯದ ಹಿತ ಕಾಪಾಡಿಕೊಳ್ಳಲು ಅಗತ್ಯವಿರುವ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಿದ್ದೇವೆ.
ಈ ಬಗ್ಗೆ ಸಮಾಜದ ಯಾರೊಬ್ಬರೂ ಆತಂಕಕ್ಕೆ ಒಳಗಾಗಬಾರದೆಂದು ರಾಜ್ಯ ಒಕ್ಕಲಿಗರ ಸಂಘ ತಮ್ಮಲ್ಲಿ ಮನವಿ ಮಾಡಿದೆ.
ಜಾತಿ ಗಣತಿ ವಿಷಯದಲ್ಲಿ ರಾಜ್ಯ ಒಕ್ಕಲಿಗರ ಸಂಘವು ಸಮುದಾಯದ ಹಿತ ರಕ್ಷಣೆಗಾಗಿ ಸಮುದಾಯದ ಕುಲಗುರುಗಳು ಮತ್ತು ರಾಜಕೀಯ ಮುಖಂಡರುಗಳ ಎಲ್ಲರ ವಿಶ್ವಾಸವನ್ನು ಪಡೆದು ಈ ಸಂಕಷ್ಟದ ಸಂದರ್ಭವನ್ನು ಸಮರ್ಥವಾಗಿ ಸಮುದಾಯದ ಪ್ರತಿಯೊಬ್ಬರ ನಂಬಿಕೆ ಮತ್ತು ವಿಶ್ವಾಸಕ್ಕೆ ಧಕ್ಕೆ ಬಾರದ ರೀತಿ ಕ್ರಮವಹಿಸಲಾಗುತ್ತದೆ. ಸಮುದಾಯದ ಸಂಕಷ್ಟದ ಸಮಯದಲ್ಲಿ, ಸಮುದಾಯದ ಬೆಂಬಲ ನಿರೀಕ್ಷಿಸುವ : ಟಿ.ಕೋನಪ್ಪ ರೆಡ್ಡಿ, ಪ್ರಧಾನ ಕಾರ್ಯದರ್ಶಿ, ರಾಜ್ಯ ಒಕ್ಕಲಿಗರ ಸಂಘ.