ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕುಲ ಕುಲ ವೆಂದು ಹೊಡೆದಾಡದಿರಿ ಆ ಕುಲದ ನೆಲೆ ಏನೆಂದು ಬಲ್ಲಿರಾ ಬಲ್ಲಿರಾ ಈ ಪದಗಳ ಸಾಲುಗಳ ಗೀತೆಯನ್ನು ರಚಿಸಿದವರು ಕನಕದಾಸರು.
ಸರಿಸುಮಾರು 500 ವರ್ಷಗಳ ಹಿಂದೆಯೇ ಮಾನವರಿಗೆ ಸಹಬಾಳ್ವೆಯ ಜ್ಞಾನವನ್ನು ತುಂಬಿದ್ದ ತತ್ವಜ್ಞಾನಿ ಕನಕದಾಸರು. ಜಾತಿ ಜಾತಿಗಳ ಹಾಗೂ ಧರ್ಮ ಧರ್ಮಗಳ ನಡುವೆ ಸಾಮರಸ್ಯದ ಬದುಕಿನ ಆ ಮಹತ್ವದ ವಿಚಾರ ಈ ಕಾಲಮಾನದ ಜನರಿಗೂ ಜ್ಞಾನದ ಭೋದನೆಯಾಗಿಯೇ ಉಳಿದಿದೆ. ಜನರ ಸಾಮರಸ್ಯದ ಬದುಕಿಗೆ ಮಹತ್ವದ ಸಂದೇಶವನ್ನು ಸಾರುತ್ತದೆ.
ಕನ್ನಡ ನಾಡಿನ ಸಮಸ್ತ ಜನತೆಗೆ ಮಹಾನ್ ದಾರ್ಶನಿಕ ಕವಿ ದಾಸ ಶ್ರೇಷ್ಠ ಶ್ರೀಶ್ರೀಶ್ರೀ ಕನಕದಾಸರ ಜಯಂತಿಯ ಭಕ್ತಿಪೂರ್ವಕ ಶುಭಕಾಮನೆಗಳು. ಮಾನವೀಯ ಮೌಲ್ಯಗಳ ನಡುವಳಿಕೆಗಳಲ್ಲಿ ನ್ಯಾಯ. ಸತ್ಯ , ಕರುಣೆ ಇವುಗಳ ತಳಹದಿಯಲ್ಲಿ ಬದುಕನ್ನು ಕಟ್ಟಿಕೊಳ್ಳಲು ಮನುಷ್ಯರು ಮುಂದಾಗಬೇಕಿದೆ.
ಈ ಒಂದು ಮಹತ್ವದ ಸಾಮಾಜಿಕ ಚಿಂತನೆಗಳ ವಿಷಯಗಳನ್ನು ಹಾಡಿನ ಭಾವನೆಗಳ ಸಾಲಿನಲ್ಲಿ ಗೀತೆಯನ್ನು ರಚಿಸಿದರು ಕನಕದಾಸರು, ಕುಲ ಜಾತಿಗಳ ಸಂಕೋಲೆಗಳನ್ನು ಬೇರುಸಹಿತ ಕಿತ್ತಾಕುವ ಜ್ಞಾನದ ಗೀತೆಗಳು ನಾಡಿನ ಜನತೆಗೆ ಸಲಹೆಗಳಾಗಿವೆ .
ಭಗವಂತನ ದೃಷ್ಟಿಯಲ್ಲಿ ಮಾನವರು ಎಲ್ಲರೂ ಒಂದೇ ಮರದ ಹಣ್ಣುಗಳು ಎಂಬ ಮಹತ್ವದ ಸಂದೇಶವಾಗಿದೆ. ಕನಕದಾಸರ ಸಮಾಜಮುಖಿ ಬೋಧನೆಗಳು ಹಾಗೂ ಆಧ್ಯಾತ್ಮಿಕ ಚಿಂತನೆಗಳು ಸಮಸ್ತ ಮಾನವರ ಕುಲಕ್ಕೆ ಆದರ್ಶ ಪ್ರಾಯವಾಗಿರುವ ನುಡಿಮುತ್ತುಗಳು ಇವುಗಳ ಪಾಲನೆಯಲ್ಲಿ ಮನುಷ್ಯರ ಬದುಕಿನಲ್ಲಿ ಸಾರ್ಥಕತೆ ಕಾಣಬಹುದು.
ಲೇಖನ:ರಘು ಗೌಡ 9916101265