ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
“ಡಿಕೆಶಿಯ ಕೊನೆಯ ಅಸ್ತ್ರವೇ ಜಾತಿ” ಪೆನ್ನು ಪೇಪರ್‌ಕೇಳಿ ಅಧಿಕಾರ ಪಡೆದ ಡಿ.ಕೆ ಶಿವಕುಮಾರ್ ಅವರು ಇಂದು ಅಧಿಕಾರದ ಹಪಾಹಪಿಗೆ ಜಾತಿ ಅಸ್ತ್ರ ಬಳಸಿ, ಸಮುದಾಯವನ್ನು ಹಾಗೂ ನಾಯಕರನ್ನು ದೂಷಿಸುತ್ತಿರುವುದು ನಾಚಿಕೆಗೇಡು ಎಂದು ಜೆಡಿಎಸ್ ವಾಗ್ದಾಳಿ ಮಾಡಿದೆ.
ಡಿಕೆಶಿ ಅವರೇ, ನಿಮಗೆ ರಾಜಕೀಯ ಶಕ್ತಿ ತುಂಬಿರುವ ಸಮುದಾಯದ ಜನರನ್ನು ವೇದಿಕೆಯಲ್ಲಿ ನಿಂದಿಸುವುದು ಶೋಭೆ ತರುವುದಿಲ್ಲ. ಇದೇ ಸಮುದಾಯದ ಜನರು ನಿಮಗೆ ಬುದ್ಧಿ ಕಲಿಸುವ ದಿನಗಳು ದೂರವಿಲ್ಲ.
ಸ್ವಾರ್ಥಕ್ಕೆ ಇದೇ ಸಮುದಾಯದ ಎಷ್ಟು ಜನರ ವಿರುದ್ಧ, ಎಷ್ಟು ಕುತಂತ್ರಗಳನ್ನು ಮಾಡಿದ್ದೀರಲ್ಲವೇ, ನಿಮ್ಮ ರಾಜಕೀಯ ದಾಹಕ್ಕೆ ವಿನಾಕಾರಣ ಸಮುದಾಯವನ್ನು ಎಳೆದು ತರಬೇಡಿ ಎಂದು ಜೆಡಿಎಸ್ ಎಚ್ಚರಿಸಿದೆ.

