ಬ್ಲ್ಯಾಕ್ ಮೇಲ್ ರಾಜಕಾರಣ ಮಾಡುತ್ತಿರುವ ಸಿ.ಡಿ ಫ್ಯಾಕ್ಟರಿ ಮಾಲೀಕ
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮಿಸ್ಟರ್ ಡಿ.ಕೆ ಶಿವಕುಮಾರ,
ಜೆಡಿಎಸ್ ಹಾಗೂ ಪಕ್ಷದ ವರಿಷ್ಠರಾದ ಹೆಚ್.ಡಿ. ದೇವೇಗೌಡರ ಬಗ್ಗೆ ಮಾತಾಡುವಾಗ ನಾಲಿಗೆ ಮೇಲೆ ಹಿಡಿತವಿರಲಿ ಎಂದು ಜೆಡಿಎಸ್ ಎಚ್ಚರಿಸಿದೆ.
ನಿಮ್ಮ ರೀತಿ ಬ್ಲ್ಯಾಕ್ ಮೇಲ್ ರಾಜಕಾರಣ ಮಾಡಿಕೊಂಡು ಪಕ್ಷ ಕಟ್ಟಿದವರಲ್ಲ. ದೇವೇಗೌಡರು ತಳಮಟ್ಟದ ಹೋರಾಟದಿಂದ ಸ್ವಂತ ಪರಿಶ್ರಮ ಮತ್ತು ಬಲದಿಂದ ಪಕ್ಷವನ್ನು , ಕಾರ್ಯಕರ್ತರ ಪಡೆಯನ್ನು ಕಟ್ಟಿ, ನಾಯಕರನ್ನು ಹುಟ್ಟುಹಾಕಿದ್ದಾರೆ.
ಕರ್ನಾಟಕ ಕಾಂಗ್ರೆಸ್ ಪಕ್ಷದಲ್ಲಿ ಇರುವವರೆಲ್ಲರೂ ಜೆಡಿಎಸ್ ಪಕ್ಷದಿಂದ ವಲಸೆ ಹೋದವರೇ ಹೊರತು, ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ನಾಯಕನನ್ನು ಬೆಳೆಸುವ ಯೋಗ್ಯತೆ ಇಲ್ಲ.
ಸಿಎಂ ಹುದ್ದೆಗೇರಲು ಶಾಸಕರ ಬೆಂಬಲವೇ ಇಲ್ಲದ ಡಿಕೆಶಿ, ಮಸಾಜ್ ಪಾರ್ಲರ್ʼನಲ್ಲಿ ರಹಸ್ಯ ಕ್ಯಾಮೆರಾ ಫಿಕ್ಸ್ ಮಾಡಿ ಸಚಿವರು, ಶಾಸಕರ 46ಕ್ಕೂ ಹೆಚ್ಚು ಖಾಸಗಿ ವಿಡಿಯೋ ಚಿತ್ರೀಕರಿಸಿ “ಬ್ಲ್ಯಾಕ್ ಮೇಲ್ ರಾಜಕಾರಣ” ಮಾಡುತ್ತಿರುವ ಸಿ.ಡಿ ಫ್ಯಾಕ್ಟರಿ ಮಾಲೀಕ ನೀನು.
ಸ್ವಂತ ಬಲದ ಮೇಲೆ ಪ್ರಾದೇಶಿಕ ಪಕ್ಷ ಕಟ್ಟಿ 3 ಸೀಟು ಗೆಲ್ಲುವ ಯೋಗ್ಯತೆ ಇಲ್ಲದ ಡಿಕೆಶಿಗೆ ಏಕೆ ಜೆಡಿಎಸ್ ಪಕ್ಷದ ಚಿಂತೆ ? ಎಂದು ಪ್ರಶ್ನಿಸಿದೆ.