ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ನಿರಂತರ ಅನ್ನದಾಸೋಹ ಸಮಿತಿಯ ಸಹಯೋಗದೊಂದಿಗೆ ಹಸಿದವರಿಗೆ ಆಹಾರ ವಿತರಣೆ ಹಾಗೂ ಕಡುಬಡವರಿಗೆ ಬಟ್ಟೆ ವಿತರಣೆ ಮಾಡುವ ಮೂಲಕ ಮಾನವ ಹಕ್ಕುಗಳ ಪ್ರಚಾರ ಸಂಸ್ಥೆ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಹಾಗೂ ಪ್ರಜಾ ವಿಮೋಚನಾ ಚಳುವಳಿ ತಾಲ್ಲೂಕು ಅಧ್ಯಕ್ಷರಾದ ಎಚ್. ಶಿವಕುಮಾರ್ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.
ತಾಲ್ಲೂಕಿನ ದರ್ಗಾಜೋಗಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನೆಡೆಯುತ್ತಿರುವ 1878 ನೇ ದಿನದ ನಿರಂತರ ಅನ್ನದಾಸೋಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಡು ಬಡವರಿಗೆ ನಿರಾಶ್ರಿತರಿಗೆ ಆಹಾರ ವಿತರಣೆ ಮತ್ತು ಬಟ್ಟೆ ವಿತರಣೆ ಮಾಡಿ ಮಾತನಾಡಿದ ಅವರು ಪ್ರತಿ ವರ್ಷವೂ ಸಾರ್ವಜನಿಕರಿಗೆ ಸೇವೆ ಮಾಡುವ ಮೂಲಕ ನನ್ನ ಹುಟ್ಟು ಹಬ್ಬವನ್ನು ಆಚರಣೆ ಮಾಡಲಾಗುತ್ತಿದೆ , ಅಂತೆಯೇ ಇಂದು ವಿಶೇಷವಾಗಿ ನಿರಂತರ ಅನ್ನದಾಸೋಹ ಸಮಿತಿಯೊಟ್ಟಿಗೆ ನನ್ನ ಹುಟ್ಟುಹಬ್ಬವನ್ನು ಕಡುಬಡವರಿಗೆ ಆಹಾರ ವಿತರಣೆ ಮತ್ತು ಬಟ್ಟೆ ವಿತರಣೆ ಮಾಡುವ ಮೂಲಕ ಆಚರಿಸಿಕೊಳ್ಳುತ್ತಿರುವುದು ಸಂತಸ ತಂದಿದೆ ಎಂದರು.
ಒಂದು ಹೊತ್ತಿನ ಊಟಕ್ಕೂ ಕಷ್ಟಪಡುವ ಇಂತಹ ಜನರ ಮಧ್ಯೆ ಆಹಾರ ವಿತರಣೆ ಮಾಡುವ ಮೂಲಕ ಸಂಭ್ರಮಿಸುವುದು ಅತ್ಯಂತ ಅರ್ಥಪೂರ್ಣ ಎಂಬುದು ನನ್ನ ಭಾವನೆ, ಸಮಾಜದಲ್ಲಿ ದುಂದು ವೆಚ್ಚ ಮಾಡಿ ಹುಟ್ಟುಹಬ್ಬವನ್ನು ಶುಭ ಸಮಾರಂಭಗಳನ್ನು ಆಚರಿಸುವ ಸಮುದಾಯಕ್ಕೆ ಈ ಮೂಲಕ ಮನವಿ ಮಾಡುತ್ತಿದ್ದೇನೆ , ತಮ್ಮ ಸಂಭ್ರಮಾಚರಣೆ ಹಸಿದ ಹೊಟ್ಟೆಗಳಿಗೆ ಆಹಾರ ನೀಡುವ ಮೂಲಕ ಆಚರಣೆಯಾಗಲಿ ಎಂದರು.
ಸಮಾಜ ಸೇವಕರದ ರಫೀಕ್ ಪಾಷಾ ಮಾತನಾಡಿ ಆತ್ಮೀಯ ಗೆಳೆಯರು ಯುವ ಮುಖಂಡರಾದ ಶಿವುರವರು ತಮ್ಮ ಹುಟ್ಟುಹಬ್ಬವನ್ನು ಹಸಿದವರಿಗೆ ಆಹಾರ ವಿತರಣೆ ಮಾಡುವ ಮೂಲಕ ಹಾಗೂ ಕಡುಬಡವರಿಗೆ ಬಟ್ಟೆ ವಿತರಣೆ ಮಾಡುವ ಮೂಲಕ ಆಚರಿಸುತ್ತಿರುವುದು ಶ್ಲಾಘನೀಯ ವಿಷಯವಾಗಿದೆ, ದೇಶ ಮುಂದುವರೆದಿದೆ ಎಂದು ಹೇಳುವ ರಾಜಕಾರಣಿಗಳು ಇಂತಹ ಸ್ಲಂ ಗಳಿಗೆ ಬಂದು ಭೇಟಿ ಮಾಡಬೇಕು, ಬಡವರ ಜೀವನ, ಕಷ್ಟ ಕುರಿತಂತೆ ಅರಿವು ಪಡೆಯಬೇಕು , ಸರ್ಕಾರದ ಯೋಜನೆಗಳು ಶ್ರೀಮಂತರ ಜೇಬು ತುಂಬಿಸುವುದು ಬಿಟ್ಟು, ಬಡವರ ಹೊಟ್ಟೆ ತುಂಬಿಸಲಿ ಎಂದರು.
ಮಾನವ ಹಕ್ಕುಗಳ ಪ್ರಚಾರ ಸಂಸ್ಥೆ ರಾಜ್ಯಕಾರ್ಯಧ್ಯಕ್ಷರು ಹಾಗೂ ಪ್ರಜಾ ವಿಮೋಚನ ಚಳುವಳಿಯ ಜಿಲ್ಲಾಧ್ಯಕ್ಷ ಅಧ್ಯಕ್ಷ H ರಾಘವವೇಂದ್ರ ಮಾತನಾಡಿ ಇಂದಿನ ವಿಶೇಷ ದಿನವನ್ನು ಅರ್ಥಪೂರ್ಣವಾಗಿ ಶಿವಕುಮಾರ್ ಮತ್ತು ಕುಟುಂಬದವರಿಗೆ ಶುಭವಾಗಲಿ , ಇಂತಹ ಕಾರ್ಯಕ್ರಮಗಳ ಮೂಲಕ ನಿರಾಶ್ರಿತ ಕಡುಬಡವರ ಕಷ್ಟಗಳಲ್ಲಿ ನಾವು ಸ್ವಲ್ಪ ಮಟ್ಟಿಗೆ ಭಾಗಿಯಾಗುವ ಮೂಲಕ ಸ್ಪಂದಿಸಿದ್ದೇವೆ ಎಂಬುದೇ ಒಂದು ರೀತಿಯ ಸಂತಸದ ವಿಷಯ,
ಅಭಿವೃದ್ಧಿ ಪಥದಲ್ಲಿ ಸಾಗುತ್ತಿರುವ ನಗರ ಪ್ರದೇಶದಲ್ಲಿ ಇಂದಿಗೂ ಇಂತಹ ಕಡು ಬಡವರು ಇದ್ದಾರೆ ಎಂಬುದೇ ದುಃಖದ ಸಂಗತಿ, ಸರ್ಕಾರದ ಯೋಜನೆಗಳು ಸೂಕ್ತ ರೀತಿಯಲ್ಲಿ ದೊರೆಯಲಿ, ದಾನಿಗಳು ತಮ್ಮ ವಿಶೇಷ ದಿನಗಳನ್ನು ನಿರಂತರ ಅನ್ನದಾಸೋಹ ಸಮಿತಿಯೊಟ್ಟಿಗೆ ಆಚರಿಸಲಿ ಎಂಬುದೇ ನನ್ನ ಆಶಯ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಅಶೋಕ್, ವಿಜಯ್, ರಾಜ್ಯ ವಿಜಯ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಎಚ್.ಮಂಜುನಾಥ್, ಉದಯ್ ಕುಮಾರ್, ಅನ್ನ ದಾಸೋಹಿ ಮಲ್ಲೇಶ್, ಸೇರಿದಂತೆ ಹಲವು ಗಣ್ಯರು ಹಾಜರಿದ್ದರು.