ಗಾಂಧೀಜಿ ಅಧ್ಯಕ್ಷತೆಯ ಕಾಂಗ್ರೆಸ್ ಪಕ್ಷಕ್ಕೆ 100 ವರ್ಷಗಳ ಸಂಭ್ರಮ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಗಾಂಧೀಜಿ ಅಧ್ಯಕ್ಷತೆಯ ಕಾಂಗ್ರೆಸ್ ಪಕ್ಷಕ್ಕೆ 100 ವರ್ಷಗಳ ಸಂಭ್ರಮ. ಕೆಪಿಸಿಸಿ ಯಿಂದ ಮಹತ್ವದ ಅಧಿಸೂಚನೆ.

 ದೇಶದ ಸ್ವಾತಂತ್ರ್ಯದ ಸಲುವಾಗಿ ಬೆಳಗಾವಿಯಲ್ಲಿ ನಡೆದ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಅಧಿವೇಶನಕ್ಕೆ ಮಹಾತ್ಮ ಗಾಂಧಿಯವರು ಅಧ್ಯಕ್ಷರಾಗಿದ್ದ ಅವಧಿ ಇದೆ ವರ್ಷದ ಡಿಸೆಂಬರ್ 26.27ಕ್ಕೆ 100 ವರ್ಷಗಳು ಪೂರೈಸುತ್ತದೆ. ಈ ಒಂದು ಮಹತ್ವಪೂರ್ಣ ಕಾರ್ಯದ ಸವಿನೆನಪಿಗಾಗಿ  ಗಾಂಧೀಜಿ ಅವರ ಜನ್ಮದಿನವಾದ  ಅಕ್ಟೋಬರ್ 2ಕ್ಕೆ , ಅಖೀಲ ಭಾರತ ಕಾಂಗ್ರೆಸ್ ಸಮಿತಿಯ ಅಧಿವೇಶನದ 100 ವರ್ಷಗಳ ಶತಮಾನೋತ್ಸವದ ಸಂಭ್ರಮವನ್ನು ಅರ್ಥಪೂರ್ಣವಾಗಿ ಕೆಪಿಸಿಸಿ ವತಿಯಿಂದ ಆಚರಿಸಲಾಗುತ್ತದೆ.

 ಅಕ್ಟೋಬರ್ 2 ರ ನಾಳೆ ಬೆಳಗ್ಗೆ 9 ಗಂಟೆಗಳ ಸಮಯಕ್ಕೆ ಸರಿಯಾಗಿ ಚಿತ್ರದುರ್ಗ ನಗರದ ಗಾಂಧಿ ವೃತ್ತದಿಂದ ಗಾಂಧಿ ಭಾರತ ಹೆಸರಿನಲ್ಲಿ ಪಾದಯಾತ್ರೆಯ ಮೂಲಕ ಡಿಸಿ ವೃತ್ತದಲ್ಲಿರುವ ಕಾಂಗ್ರೆಸ್ ಭವನಕ್ಕೆ ಆಗಮಿಸಿ ಸ್ವಾತಂತ್ರ್ಯದ ಇತಿಹಾಸದೊಂದಿಗೆ 

ಗಾಂಧಿಯವರ ನಾಯಕತ್ವದ ವಿಚಾರಗಳನ್ನು ಸಂಪೂರ್ಣವಾಗಿ ನೆನೆದು ಭಕ್ತಿಯ ಭಾವೈಕ್ಯತೆಯ ಮನದಲ್ಲಿ ಗಾಂಧಿ ಜಯಂತಿ ಆಚರಣೆ ಮಾಡಲಾಗುತ್ತದೆ. ಚಿತ್ರದುರ್ಗ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರದಲ್ಲಿ ಆಯಾ ಕ್ಷೇತ್ರದ ಶಾಸಕರ ಮುಂದಾಳತ್ವದಲ್ಲಿ ಸಾರ್ವಜನಿಕವಾಗಿ ಪಾದಯಾತ್ರೆಯನ್ನು ಮಾಡಲಾಗುತ್ತದೆ.

ಈ ಒಂದು ಶುಭಗಳಿಗೆಯ ಸಂದರ್ಭದಲ್ಲಿ ಕಾಂಗ್ರೆಸ್ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಕೆಪಿಸಿಸಿ ಉಪಾಧ್ಯಕ್ಷರು. ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಮುಖಂಡರಾದ ಶ್ರೀ ಮುರಳಿದರ್ ಹಾಲಪ್ಪನವರು ಹಾಗೂ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ತಾಜ್ ಪೀರ್ ಅವರು ಮನವಿ ಮಾಡಿದ್ದಾರೆ.

 ಜಿಲ್ಲಾ ಕಾಂಗ್ರೆಸ್ ಸಮಿತಿ ಹಾಗೂ ಎಲ್ಲಾ ಬ್ಲಾಕ್ ಕಾಂಗ್ರೆಸ್ ಸಮಿತಿಯ ಮುಖಂಡರುಗಳು ಹಾಗೂ ಪದಾಧಿಕಾರಿಗಳು  ಗಾಂಧಿಜಿಯವರ ಭಾವ ಚಿತ್ರದೊಂದಿಗೆ ಸುಮಾರು 1 ಕಿಲೋಮೀಟರ್ ಅಂತರಕ್ಕು ಹೆಚ್ಚು ದೂರ ಪಾದಯಾತ್ರೆಯ ಮೆರವಣಿಗೆ ಪಾಲ್ಗೊಳ್ಳಬೇಕು ಆ ಸಮಯದಲ್ಲಿ ರಾಷ್ಟ್ರೀಯ ಧ್ವಜವನ್ನು ಮಾತ್ರವೇ ಉಪಯೋಗಿಸಬೇಕು.

ಬಿಳಿ ವಸ್ತ್ರ ಹಾಗೂ ಗಾಂಧಿ ಟೋಪಿ ಹಾಕಿಕೊಂಡು ಗಾಂಧೀಜಿಯವರು ರಚಿಸಿದ ರಘು ಪತಿ ರಾಘವ ರಾಜಾರಾಂ ಪತಿತ=ಪಾವನ ಸೀತಾರಾಮ್ ಎಂಬ ಗೀತೆಯನ್ನು ಪಠಿಸುತ್ತಾ ಗಾಂಧಿ ತತ್ವಗಳಾದ ನ್ಯಾಯ. ನೀತಿ. ಧರ್ಮ. ಕರುಣೆ ಈ ಎಲ್ಲಾ ಪಾಲನೆಗಳ ಬಗ್ಗೆ ಜಯಘೋಷಗಳು ಮೊಳಗಬೇಕು, ಕಳ್ಳತನ. ಮೋಸ. ನಂಬಿಕೆ ದ್ರೋಹ . ಹಿಂಸೆ. ಸುಳ್ಳು ಈ ಕೆಟ್ಟ ಕಾರ್ಯಗಳಿಂದ ಜನಪ್ರತಿನಿಧಿಗಳು ಹಾಗೂ ಸಮಾಜಸೇವೆಕರು ದೂರ ಇರಬೇಕು ಈ ವಿಚಾರದಲ್ಲಿ ರಾಜ್ಯದ ಸಮಸ್ತ ಕಾಂಗ್ರೆಸ್ ಮುಖಂಡತ್ವಕ್ಕೆ ಕೆಪಿಸಿಸಿ ವತಿಯಿಂದ ಮನವಿ ಅರ್ಪಿಸಿದೆ.

 ಏನಾದರೂ ಹಾಗೂ ಮೊದಲು ಮಾನವನಾಗು. ಜಯತೆ ಜಯತೆ ಸತ್ಯಮೇವ ಜಯತೆ ಇದು ಗಾಂಧೀಜಿಯವರ ತತ್ವ=ಸಿದ್ಧಾಂತದ ನುಡಿ ಮುತ್ತುಗಳು.
ಕಿರು ಲೇಖನ-ರಘು ಗೌಡ 9916101265

 

 

 

- Advertisement -  - Advertisement -  - Advertisement - 
Share This Article
error: Content is protected !!
";