ರಾಜೇಂದ್ರ ಸಿಂಗ್ ಬಾಬು ನಿರ್ದೇಶಕರಾಗಿ 50 ವರ್ಷ ಪೂರ್ಣ, ಸಂಭ್ರಮಾಚರಣೆ

News Desk
- Advertisement -  - Advertisement - 

ರಾಜೇಂದ್ರ ಸಿಂಗ್ ಬಾಬು ನಿರ್ದೇಶಕರಾಗಿ 50 ವರ್ಷ ಪೂರ್ಣ, ಸಂಭ್ರಮಾಚರಣೆ
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ಎಸ್.ವಿ. ರಾಜೇಂದ್ರ ಸಿಂಗ್ ಬಾಬು ಅವರು ನಿರ್ದೇಶಕರಾಗಿ 50 ವರ್ಷ ಪೂರೈಸಿದ ಸಂದರ್ಭದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವರಾದ ಹೆಚ್.ಡಿ ಕುಮಾರಸ್ವಾಮಿ ಪಾಲ್ಗೊಂಡು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕನ್ನಡ ಚಿತ್ರರಂಗದಲ್ಲಿ ಎಸ್. ವಿ. ರಾಜೇಂದ್ರ ಸಿಂಗ್ ಬಾಬು ಅವರು ನಿರ್ದೇಶಕರಾಗಿ 50 ವರ್ಷ ಪೂರೈಸಿದ ಸಂದರ್ಭದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

- Advertisement - 

ನಾನು ನಿರ್ಮಿಸಿದ್ದ ಚಂದ್ರ ಚಕೋರಿಸಿನಿಮಾಗೆ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರ ಮಗ ಆದಿತ್ಯ ಹೀರೋ ಆಗಬೇಕಿತ್ತು. ಎಸ್ ನಾರಾಯಣ್ ಅವರು ಆದಿತ್ಯ ಅವರನ್ನೇ ಆಯ್ಕೆ ಮಾಡಿದ್ದರು. ಆದರೆ ತಮ್ಮದೇ ಬ್ಯಾನರ್‌ನಲ್ಲಿ ಮಗನನ್ನು ಲಾಂಚ್ ಮಾಡುವುದಾಗಿ ರಾಜೇಂದ್ರ ಸಿಂಗ್ ಬಾಬು ಅವರು ಆಗ ಹೇಳಿದ್ದರು. ಹಾಗಾಗಿ, ನಾವು ಶ್ರೀಮುರಳಿಯನ್ನ ಆಯ್ಕೆ ಮಾಡಿದೆವು ಎಂದು ಎಚ್ ಡಿ ಕುಮಾರಸ್ವಾಮಿ ಅವರು ಹೇಳಿದರು.

ನಮ್ಮಲ್ಲಿ ಉತ್ತಮ ನಿರ್ದೇಶಕರು, ಉತ್ತಮ ಕಥೆಗಳು ಲಭ್ಯ ಇರುವುದರಿಂದ ನಮ್ಮವೇ ಚಿತ್ರಗಳು ದೊಡ್ಡ ಸಂಖ್ಯೆಯಲ್ಲಿ ಬರಲಿ ಎನ್ನುವುದು ನನ್ನ ಆಶಯ. ಆದರೆ ಟಿವಿಯಲ್ಲಿ ಈಗ ಜಾಸ್ತಿ ಡಬ್ಬಿಂಗ್ ಸಿನಿಮಾಗಳು ಬರುತ್ತಿವೆ. ಇತ್ತೀಚೆಗೆ ಕಾಂತಾರ ಚಿತ್ರವು ವಿಶ್ವದಲ್ಲೇ ದಾಖಲೆಗಳನ್ನು ಬರೆದಿದೆ. ಒಂದು ಕಡೆ ಜಾಗತಿಕವಾಗಿ ಕನ್ನಡ ಚಿತ್ರರಂಗ ಗುರುತಿಸಿಕೊಳ್ಳುತ್ತಿದ್ದರೆ, ಇನ್ನೊಂದೆಡೆ ಸಂಕಷ್ಟಗಳನ್ನು ಎದುರಿಸುತ್ತಿದೆ ಎಂದು ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು.

- Advertisement - 

ಸದ್ಯ ಡಬ್ಬಿಂಗ್‌ಗೆ ಕಡಿವಾಣವಿಲ್ಲ. ಹಿಂದೆ ರಾಜಕುಮಾರ್ ಅವರು ಇದ್ದಾಗ ಅದಕ್ಕೆ ಕಡಿವಾಣ ಇತ್ತು. ಇವತ್ತು ಕನ್ನಡ ಚಿತ್ರರಂಗ ಎತ್ತರದ ಸಾಧನೆಗಳನ್ನು ಮಾಡುತ್ತಿದೆ. ಉತ್ತಮ ಸಿನಿಮಾಗಳು ಬರುತ್ತಿವೆ. ಭಾರತೀಯ ಚಿತ್ರರಂಗ ನಮ್ಮನ್ನು ಬೆರಗಿನಿಂದ ನೋಡುತ್ತಿದೆ. ಆದರೂ ಕನ್ನಡ ಚಿತ್ರಗಳು ಇನ್ನು ಹೆಚ್ಚಿನ ಸಂಖೆಯಲ್ಲಿ ಯಶಸ್ಸು ಸಾಧಿಸಬೇಕು ಹಾಗೂ ನಿರ್ಮಾಪಕರು ಉತ್ತಮ ಚಿತ್ರಗಳನ್ನು ನಿರ್ಮಿಸಲು ಅವಕಾಶ ಆಗಬೇಕು ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಹೇಳಿದರು.

ಈ ಸಮಾರಂಭದಲ್ಲಿ ಮಾಜಿ ಉಪ ಮುಖ್ಯಮಂತ್ರಿ ಡಾ. ಸಿ.ಎನ್ ಅಶ್ವತ್ಥನಾರಾಯಣ, ಮಾಜಿ ಸಚಿವ ಮುನಿರತ್ನ, ನಾಯಕ ನಟರಾದ ಕಿಚ್ಚ ಸುದೀಪ್, ಬ್ರಹ್ಮಾಂಡ ಗುರೂಜಿ, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಕೃಷ್ಣೇಗೌಡ, ಪ್ರಕಾಶಕರಾದ ವೀರಕಪುತ್ರ ಶ್ರೀನಿವಾಸ ಮೊದಲಾದವರು ಭಾಗಿಯಾಗಿದ್ದರು. ಚಿತ್ರರಂಗದ ಅನೇಕ ಗಣ್ಯರು ಹಾಜರಿದ್ದರು.

Share This Article
error: Content is protected !!
";