ಶ್ರದ್ದಾ ಭಕ್ತಿಗಳಿಂದ ಹನುಮ ಜಯಂತಿ ಆಚರಣೆ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಹನುಮ ಜಯಂತಿಯ ಪ್ರಯುಕ್ತ ತಾಲೂಕಿನ ಹಲವಾರು ಆಂಜನೇಯ ಸ್ವಾಮಿ ದೇವಾಲಯಗಳಲ್ಲಿ ಹನುಮ ಜಯಂತಿಯನ್ನು ಶ್ರದ್ದಾ ಭಕ್ತಿಗಳಿಂದ ಆಚರಿಸಲಾಯಿತು. ನಗರದ ನೆಲದಾಂಜನೇಯ ಸ್ವಾಮಿ ದೇಗುಲದಲ್ಲಿ ಶ್ರೀ ತಾರಕ ಹೋಮ
, ಸುರುಭಿ ಭಜನಾ ಮಂಡಳಿಯಿಂದ ಭಜನೆ, ಪೂಜೆಗಳು ನಡೆದವು.

ರೋಜಿಪುರ ಶ್ರೀ ಪ್ರಸನ್ನ ವೀರ ಆಂಜನೇಯ ದೇಗುಲದಲ್ಲಿ ಸೀತಾರಾಮ ಕಲ್ಯಾಣೋತ್ಸವ ಹಾಗು ತೃತೀಯ ವರ್ಷದ ಸೀತಾರಾಮ ರಥೋತ್ಸವ ನಡೆಯಿತು. ಕಳೆದ ಹನ್ನೊಂದು ದಿನಗಳಿಂದ ವಿವಿಧ ಭಜನಾ ತಂಡಗಳಿಂದ ಅಖಂಡ ಭಜನೆ ನಡೆದಿದ್ದು ಹನುಮ ಜಯಂತಿಯೊಂದಿಗೆ ಸಂಪನ್ನ ಗೊಂಡಿತು. ಬಕ್ತಾದಿಗಳಿಗೆ ಅನ್ನ ಸಂತರ್ಪಣೆ ಕಾರ್ಯ ಏರ್ಪಡಿಸಲಾಗಿತ್ತು.

          ಅರಳುಮಲ್ಲಿಗೆ ಬಾಗಿಲು ಸರ್. ಎಂ. ವಿಶ್ವೇಶ್ವರಯ್ಯ ವೃತ್ತದ ಶ್ರೀ ಪ್ರಸನ್ನ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಬೆಳಿಗ್ಗೆ ವಿಷ್ಣು ಸಹಸ್ರ ನಾಮ ಪಾರಾಯಣ, ಭಜನೆ ವಿಶೇಷ ಪೂಜಾ ಕಾರ್ಯಗಳೊಂದಿಗೆ ಸಂಜೆ ಉತ್ಸವ ನಡೆಯಿತು. ರಾಜಘಟ್ಟ ಹನುಮ ದೇಗುಲ,

ರೈಲ್ವೇ ಸ್ಟೇಷನ್ ಬಳಿಯ ಪ್ರಸನ್ನ ಆಂಜನೇಯ ಸ್ವಾಮಿ ದೇಗುಲಗಳಲ್ಲಿ ವಿಶೇಷ ಹೂವಿನ ಹಾಗು ದೀಪಾಲಂಕಾರ, ಸಂಜೆ ವಿವಿಧ ಕಲಾ ತಂಡಗಳೊಂದಿಗೆ ಉತ್ಸವ ನಡೆಯಿತು. ರಂಗಪ್ಪ ಸರ್ಕಲ್ ರಾಮಣ್ಣ ಬಾವಿ ಬಳಿಯ ಆಲಿಂಗನ ರಾಮಾಂಜನೇಯ ದೇಗುಲ, ದರ್ಗಾಪುರದ ಭಕ್ತಆಂಜನೇಯ ದೇಗುಲ,

ತ್ಯಾಗರಾಜ ನಗರದ ಅಭಯ ಆಂಜನೇಯ ಸ್ವಾಮಿ ದೇವಸ್ಥಾನ, ನಾಗರ ಕೆರೆ ಏರಿ, ಅರಳುಮಲ್ಲಿಗೆ ಕೆರೆ ಏರಿ, ಶಿವಪುರ ಗೇಟ್, ರಾಘರಾಯನ ಗುಟ್ಟೆ ಸೇರಿದಂತೆ ಗ್ರಾಮಾಂತರ ಬಾಗಗಳಲ್ಲಿ ಹನುಮ ಜಯಂತಿಯನ್ನು ಅತಿ ವಿಜೃಂಭಣೆಯಿಂದ ಆಚರಿಸಲಾಯಿತು.

 

- Advertisement -  - Advertisement - 
Share This Article
error: Content is protected !!
";