ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ಜನಜಾಗೃತಿ ವೇದಿಕೆ ನವಜೀವನ ಸಮಿತಿ ಶೌರ್ಯ ತಂಡ ದೊಡ್ಡಬಳ್ಳಾಪುರ ತಾಲೂಕು ಇವರ ಸಂಯುಕ್ತಾಶ್ರಯದಲ್ಲಿ ಅನಾಥಾಶ್ರಮದಲ್ಲಿ ಅನ್ನಸಂತರ್ಪಣೆ, ದಿನಸಿ ಕಿಟ್ ವಿತರಣೆ,ಮಕ್ಕಳಿಗೆ ಪೆನ್ ಪುಸ್ತಕ ವಿತರಣೆ,ಗ್ರಾಮ ದೇವತೆ ಮುತ್ಯಾಲಮ್ಮ ದೇಗುಲ ದಲ್ಲಿ ವಿಶೇಷ ಪೂಜೆ, ಅನ್ನಸಂತರ್ಪಣೆ ,
ಹಾಡೋನಹಳ್ಳಿ ವಲಯದ ಚೌಡೇಶ್ವರಿ ದೇಗುಲದಲ್ಲಿ ಸಿಬ್ಬಂದಿಗಳು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು,ಮದುರೆ ಶನೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಹಾಗೂ ಅನ್ನಸಂತರ್ಪಣೆ ಮುಂತಾದ ಹಲವು ಸೇವಾ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ವೀರೇಂದ್ರ ಹೆಗ್ಗಡೆಯವರ ಜನ್ಮದಿನ ಆಚರಿಸಲಾಯಿತು.
ಜನ ಜಾಗೃತಿ ಜಿಲ್ಲಾ ಉಪಾಧ್ಯಕ್ಷರಾದ ನಾಗೇಶ್, ಜಿಲ್ಲಾ ನಿರ್ದೇಶಕರಾದ ಉಮಾರಬ್ಬ,ಮಾಜಿ ತಾ.ಪ.ಅಧ್ಯಕ್ಷರಾದ ಕೃಷ್ಣಮೂರ್ತಿ,ಧರ್ಮೆಂದ್ರ,ಮಮಮತ, ಪುಷ್ಪ,ವಾಣಿ, ರಮೇಶ್ ತಾಲೂಕು ಯೋಜನಾಧಿಕಾರಿಗಳಾದ ದಿನೇಶ್ ತಾಲೂಕಿನ ಎಲ್ಲಾ ಮೇಲ್ವಿಚಾರಕ ಶ್ರೇಣಿ ಸಿಬ್ಬಂದಿಗಳು, ಕಛೇರಿ ಸಿಬ್ಬಂದಿಗಳು ತಾಲೂಕಿನ ಸೇವಾಪ್ರತಿನಿದಿಗಳು ಶೌರ್ಯ ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು.

