ಅಂಬಿಗರ ಚೌಡಯ್ಯ ಜಯಂತಿ ಆಚರಣೆ

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ರಾಷ್ಟ್ರೀಯ ಹಬ್ಬಗಳ  ಆಚರಣಾ ಸಮಿತಿಯಿಂದ ನಗರದ ತಾಲೂಕು  ಕಚೇರಿಯ ಸಭಾಂಗಣದಲ್ಲಿ   ನಿಜಶರಣ ಅಂಬಿಗರ ಚೌಡಯ್ಯ ಜಯಂತಿಯನ್ನು ಆಚರಿಸಲಾಯಿತು.

ಕಾರ್ಯಕ್ರಮ ದಲ್ಲಿ ತಾಲೂಕು ಕಸಾಪ ನಿಕಟ ಪೂರ್ವ ಅಧ್ಯಕ್ಷೆ ಪ್ರಮೀಳಾ ಮಹೇದೇವ್ ಮಾತನಾಡಿ, ಅಂಬಿಗರ ಚೌಡಯ್ಯ 12 ನೇ ಶತಮಾನದಲ್ಲಿ ಜೀವಿಸಿದ್ಧ ಶಿವಶರಣ ಹಾಗೂ ವಚನಕಾರರು. ಉಳಿದೆಲ್ಲ ವಚನಕಾರರಿಗಿಂತ ಭಿನ್ನ ಹಾಗೂ ವಿಶಿಷ್ಟ ವ್ಯಕ್ತಿತ್ವ ಇವರದು. ವೃತ್ತಿಯಿಂದ ಅಂಬಿಗ, ಪ್ರವೃತ್ತಿಯಲ್ಲಿ ಅನುಭಾವಿ. ನೇರ ನಿರ್ಭೀತ ನುಡಿಗಳಿಂದ ವಚನಗಳನ್ನು ಬರೆದಿರುವುದು ಗೋಚರಿಸುವುದಲ್ಲದೆ.

- Advertisement - 

ತಾನು ಕೇವಲ ತುಂಬಿದ ಹೊಳೆಯಲ್ಲಿ ದೋಣಿಗೆ ಹುಟ್ಟುಹಾಕುವ ಅಂಬಿಗ ಮಾತ್ರವಲ್ಲ, ಭವಸಾಗರದಲ್ಲೂ ಹುಟ್ಟು ಹಾಕುವ ಕೌಶಲವುಳ್ಳವ ಎಂದು ಹೇಳಿಕೊಳ್ಳುವುದಲ್ಲದೆ  ತನ್ನ ವಚನಗಳ ಮೂಲಕ ಸಮಾಜದ ಸುಧಾರಣೆಗೆ ಶ್ರಮಿಸಿದವರು. ಅಸಮಾನತೆ, ಶೋಷಣೆಗಳ ವಿರುದ್ಧ ತನ್ನ ವಚನಗಳ ಮೂಲಕ ದನಿ ಎತ್ತಿದ್ದ ಮಹಾಶರಣ ಸಮಾಜದ ಡಾಂಬಿಕತೆಯನ್ನು ತಡೆಯಲು ಯತ್ನಿಸಿದರು.

ವಚನಕಾರ ಚೌಡಯ್ಯ ಕೇವಲ ನದಿ ದಾಟಿಸುವ ಅಂಬಿಗರಲ್ಲ. ಬದಲಿಗೆ ಬದುಕಿನ ಅನೇಕ ಸಂಶಯಗಳನ್ನು ನಿವಾರಿಸಿ ದೇವರನ್ನು ಕಾಣುವ ಪಯಣದಲ್ಲಿ ಗುರಿ ತಲುಪಿಸುವ ಅಂಬಿಗರಾಗಿದ್ದಾರೆ ಎಂದರು.

- Advertisement - 

ಕಂದಾಯ ಇಲಾಖೆಯ ನರಸಿಂಹಮೂರ್ತಿ, ಮುಖಂಡರಾದ ಪಲಾವ್‌ ರಾಮಣ್ಣ ನಾಗರತ್ನಮ್ಮ, ವಿಶ್ವನಾಥ್‌, ವೆಂಕಟರಮಣಪ್ಪ ಮುನಿಸ್ವಾಮಿ, ಅರಸಪ್ಪ ಸೇರಿದಂತೆ ಮುಖಂಡರು ಹಾಜರಿದ್ದರು.

 

Share This Article
error: Content is protected !!
";