ಚಂದ್ರವಳ್ಳಿ ನ್ಯೂಸ್, ಹರಿಹರ:
ನಗರದ ತುಂಗಭದ್ರಾ ಲಾರಿ ಚಾಲಕರ ಮತ್ತು ಕ್ಲೀನರ್ ಗಳ ಶ್ರೇಯೋಭಿವೃದ್ಧಿ ಸಂಘದ ವತಿಯಿಂದ ಪ್ರಥಮ ವರ್ಷದ ಗಣೇಶ ಮೂರ್ತಿಯನ್ನು ವಿಜೃಂಭಣೆಯಿಂದ ಪ್ರತಿಷ್ಠಾಪಿಸಿ ಸಂಭ್ರಮದ ಗಣೇಶೋತ್ಸವ ಆಚರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಹಿಂದೂ,ಮುಸ್ಲಿಂಸೇರಿದಂತೆ ಸರ್ವ ಧರ್ಮದ ಸದಸ್ಯರು ಸೇರಿ ಭಾವೈಕ್ಯತೆಯ ಸಂಕೇತವಾಗಿ ತುಂಗಭದ್ರಾ ಲಾರಿ ಚಾಲಕರ ಸಂಘದ ಕಚೇರಿಯಲ್ಲಿ ಶನಿವಾರ ಆಚರಿಸಲಾಯಿತು.
ಇದೆ ವೇಳೆ ಸುದ್ದಿಗಾರರೊಂದಿಗೆ ಅಧ್ಯಕ್ಷ ಸಯ್ಯದ್ ಯೂಸುಫ್ ಮಾತನಾಡಿ ನಮ್ಮ ಸಂಘದಲ್ಲಿ 81 ಜನ ಸದಸ್ಯರಿದ್ದು ಅದರಲ್ಲಿ ಮುಸ್ಲಿಮರು 81 ಹಾಗು 16 ಜನ ಹಿಂದುಗಳು ಸದಸ್ಯರಿದ್ದಾರೆ. ನಾವೆಲ್ಲರೂ ಸೇರಿ ಗಣೇಶ್ ಉತ್ಸವವನ್ನು ಈ ವರ್ಷದಿಂದ ಏಕೆ ಆಚರಣೆ ಮಾಡಬಾರದು ಎಂದು ಯೋಚಿಸಿ ಪ್ರಥಮವಾಗಿ ಈ ವರ್ಷ ಆಚರಣೆಗೆ ಆರಂಭಿಸಿದ್ದೇವೆ.
ಈ ಬಾರಿಯ ಗಣೇಶೋತ್ಸವದ ಆಚರಣೆಯಲ್ಲಿ ಹಿಂದೂ ಸಂಪ್ರದಾಯಗಳ ಎಲ್ಲಾ ಕಾರ್ಯಕ್ರಮಗಳನ್ನು ನಮ್ಮಲ್ಲಿರುವ ಹಿಂದೂ ಸದಸ್ಯರು ಮಾಡಿದರೆ,ಉಳಿದ ಅಲಂಕಾರ ಇತರೆ ಕೆಲಸ ಗಳನ್ನು ಮುಸ್ಲಿಂ ಸದಸ್ಯರು ಮಾಡುತ್ತಿದ್ದೇವೆ ಎಲ್ಲರೂ ಭಾವೈಕ್ಯತೆ ಯಿಂದ ಸಹೋದರರಂತೆ ಕೆಲಸ ಮಾಡುತ್ತಿರುವುದರಿಂದ ಉತ್ಸವದ ಕಾರ್ಯಕ್ಕೆ ಯಾವುದೇ ರೀತಿಯ ಅಡಚಣೆ ಆಗುತ್ತಿಲ್ಲ.ಇನ್ನು ಮುಂದೆ ಗಣೇಶೋತ್ಸವವನ್ನು ಪ್ರತಿ ವರ್ಷ ನಿರಂತರವಾಗಿ ನಡೆಯಲಿದೆ ಎಂಬ ವಿಶ್ವಾಸ ನನಗಿದೆ ಎಂದು ಹೇಳಿದರು.
ಈ ಸಮಯದಲ್ಲಿ ಸಂಘದ ಪದಾಧಿಕಾರಿಗಳಾದ ಗೌರವಾಧ್ಯಕ್ಷ ರಾಜು ಬಸಪ್ಪ,ಅದ್ಯಕ್ಷ ಸೈಯದ್ ಯೂಸೂಫ್,ಉಪಾಧ್ಯಕ್ಷ ಫಯಾಜ್ ಅಹಮದ್,ಕಾರ್ಯದರ್ಶಿ ಜಂಬಯ್ಯ ಮಡಿವಾಳ, ಕಾನೂನು ಸಲಹೆಗಾರ ಶಶಿ ನಾಯಕ್,ಜಕಾವುಲ್ಲಾ,ವಾಸು,ಪಾಂಡು, ದಾದಾಪೀರ್,ಎಂ.ಹೈದರ್‌ಅಲೀ,ಮಜಿಬ್‌ವುಲ್ಲಾ, ಸೇರಿದಂತೆ ಸಂಘದ ಸದಸ್ಯರು,ಮೇಕನಿಕ್‌ಗಳು ಮತ್ತು ಲಾರಿ ಚಾಲಕರುಗಳು ಗಣೇಶೋತ್ಸವದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ತುಂಗಭದ್ರಾ ಲಾರಿ ಚಾಲಕರ ಶ್ರೇಯೋಭಿವೃದ್ಧಿ ಸಂಘದಲ್ಲಿ ಒಟ್ಟು 97 ಸದಸ್ಯರುಗಳಿದ್ದು ಇದರಲ್ಲಿ 16 ಹಿಂದೂ ಸದಸ್ಯರು ಮತ್ತು 81 ಜನ ಮುಸ್ಲಿಂ ಸದಸ್ಯರುಗಳಿರುವುದು ವಿಶೇಷ ವಾಗಿದೆ.