ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ 2023-24 ನೇ ಆರ್ಥಿಕ ವರ್ಷದಲ್ಲಿ₹ 1,70,262 ಕೋಟಿ ಶ್ರೀಮಂತರ, ಉದ್ಯಮಿಗಳ ಸಾಲ ಮನ್ನಾ ಮಾಡಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ರಾಜ್ಯ ಕಾಂಗ್ರೆಸ್ ಸರ್ಕಾರ ಕರ್ನಾಟಕದ ಜನಸಾಮಾನ್ಯರಿಗಾಗಿ 5 ಗ್ಯಾರಂಟಿ ಯೋಜನೆಗಳಿಗೆ ವರ್ಷಕ್ಕೆ 56,000 ಕೋಟಿ ವೆಚ್ಚ ಮಾಡುತ್ತಿದೆ.
ಗ್ಯಾರಂಟಿ ಯೋಜನೆಗಳಿಗೆ ನಮ್ಮ ಸರ್ಕಾರ ವೆಚ್ಚ ಮಾಡುವ ಹಣದ ಮೂರು ಪಟ್ಟಿಗಿಂತ ಹೆಚ್ಚು ಶ್ರೀಮಂತರ, ಉದ್ಯಮಿಗಳ ಸಾಲ ಮನ್ನಾ ಮಾಡಿದೆ ಮೋದಿ ಸರ್ಕಾರ! ಎಂದು ಕಾಂಗ್ರೆಸ್ ವಾಗ್ದಾಳಿ ಮಾಡಿದೆ.
ಈ ಲೆಕ್ಕಾಚಾರ ಸ್ಪಷ್ಟವಾಗಿ ಹೇಳುತ್ತದೆ, ಬಿಜೆಪಿ ಸಿರಿವಂತರ ಪರವಾಗಿದೆ, ಹಾಗಾಗಿ ಜನಸಾಮಾನ್ಯರ ಹಣವನ್ನು ಶ್ರೀಮಂತರಿಗೆ ಸಾಲ ನೀಡಿ ನಂತರ ಮನ್ನಾ ಮಾಡುತ್ತದೆ.
ಕಾಂಗ್ರೆಸ್ ಬಡವರ ಪರವಾಗಿದೆ, ಜನರ ಹಣವನ್ನು ಗ್ಯಾರಂಟಿಗಳ ರೂಪದಲ್ಲಿ ಜನರಿಗೇ ಕೊಡುತ್ತಿದೆ.
ಆದರೂ ಬಿಜೆಪಿ ಗ್ಯಾರಂಟಿಗಳನ್ನು ಪ್ರಶ್ನಿಸುತ್ತದೆ, ಗ್ಯಾರಂಟಿಗಳನ್ನು ಅಪಹಾಸ್ಯ ಮಾಡುತ್ತದೆ, ಗ್ಯಾರಂಟಿಗಳ ವಿರುದ್ಧ ಅಪಪ್ರಚಾರ ಮಾಡುತ್ತದೆ..! ಎಂದು ಕಾಂಗ್ರೆಸ್ ಆರೋಪಿಸಿದೆ.