ಶ್ರೀಮಂತರ, ಉದ್ಯಮಿಗಳ ಸಾಲ ಮನ್ನಾ ಮಾಡಿದ ಕೇಂದ್ರ ಸರ್ಕಾರ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ 2023-24 ನೇ ಆರ್ಥಿಕ ವರ್ಷದಲ್ಲಿ₹ 1,70,262 ಕೋಟಿ ಶ್ರೀಮಂತರ, ಉದ್ಯಮಿಗಳ ಸಾಲ ಮನ್ನಾ ಮಾಡಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

- Advertisement - 

 ರಾಜ್ಯ ಕಾಂಗ್ರೆಸ್ ಸರ್ಕಾರ ಕರ್ನಾಟಕದ ಜನಸಾಮಾನ್ಯರಿಗಾಗಿ 5 ಗ್ಯಾರಂಟಿ ಯೋಜನೆಗಳಿಗೆ ವರ್ಷಕ್ಕೆ  56,000 ಕೋಟಿ ವೆಚ್ಚ ಮಾಡುತ್ತಿದೆ.

- Advertisement - 

ಗ್ಯಾರಂಟಿ ಯೋಜನೆಗಳಿಗೆ ನಮ್ಮ ಸರ್ಕಾರ ವೆಚ್ಚ ಮಾಡುವ ಹಣದ ಮೂರು ಪಟ್ಟಿಗಿಂತ ಹೆಚ್ಚು ಶ್ರೀಮಂತರ, ಉದ್ಯಮಿಗಳ ಸಾಲ ಮನ್ನಾ ಮಾಡಿದೆ ಮೋದಿ ಸರ್ಕಾರ! ಎಂದು ಕಾಂಗ್ರೆಸ್ ವಾಗ್ದಾಳಿ ಮಾಡಿದೆ.

ಈ ಲೆಕ್ಕಾಚಾರ ಸ್ಪಷ್ಟವಾಗಿ ಹೇಳುತ್ತದೆ, ಬಿಜೆಪಿ ಸಿರಿವಂತರ ಪರವಾಗಿದೆ, ಹಾಗಾಗಿ ಜನಸಾಮಾನ್ಯರ ಹಣವನ್ನು ಶ್ರೀಮಂತರಿಗೆ ಸಾಲ ನೀಡಿ ನಂತರ ಮನ್ನಾ ಮಾಡುತ್ತದೆ.

- Advertisement - 

ಕಾಂಗ್ರೆಸ್ ಬಡವರ ಪರವಾಗಿದೆ, ಜನರ ಹಣವನ್ನು ಗ್ಯಾರಂಟಿಗಳ ರೂಪದಲ್ಲಿ ಜನರಿಗೇ ಕೊಡುತ್ತಿದೆ.

ಆದರೂ ಬಿಜೆಪಿ ಗ್ಯಾರಂಟಿಗಳನ್ನು ಪ್ರಶ್ನಿಸುತ್ತದೆ, ಗ್ಯಾರಂಟಿಗಳನ್ನು ಅಪಹಾಸ್ಯ ಮಾಡುತ್ತದೆ, ಗ್ಯಾರಂಟಿಗಳ ವಿರುದ್ಧ ಅಪಪ್ರಚಾರ ಮಾಡುತ್ತದೆ..! ಎಂದು ಕಾಂಗ್ರೆಸ್ ಆರೋಪಿಸಿದೆ.

 

Share This Article
error: Content is protected !!
";