ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಹಳದಿ ಮೆಟ್ರೋಗೆ ಪ್ರಧಾನಿ ಮೋದಿ ಕೊಡುಗೆ ಹೆಚ್ಚಿದೆ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಪ್ರತಿಕ್ರಿಯೆ ಚಿತ್ರದುರ್ಗದಲ್ಲಿ ಸಚಿವ ಎಂ.ಬಿ. ಪಾಟೀಲ್ ಪ್ರತಿಕ್ರಿಯೆ ನೀಡಿದರು.
ಮೆಟ್ರೋ ಯೋಜನೆಯಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಪಾಲಿರುತ್ತದೆ. ಬರೀ ಕೇಂದ್ರದ ಪಾಲಿದ್ರೆ ಬೇರೆ, ಕೇಂದ್ರದ ಜೊತೆ ನಮ್ಮ ಪಾಲಿದೆ. ರಾಜ್ಯದ ತೆರಿಗೆ ಹಣದಲ್ಲೂ ನಮಗೆ ಅನ್ಯಾಯವಾಗಿದೆ. 14 & 15 ಕಮಿಷನ್ ನಲ್ಲಿ ನಮಗೆ ಅನ್ಯಾಯವಾಗಿದೆ. ಪ್ರಧಾನಿ ಮೋದಿಯವರಿಂದ ಆ ಹಣವನ್ನ ಮೊದಲು ಕೊಡಿಸೋದಕ್ಕೆ ಹೇಳಿ ಎಂದು ಎಂ.ಬಿ ಪಾಟೀಲ್ ತಿಳಿಸಿದರು.
ನಮ್ಮ ಹಸಿರು ಮೆಟ್ರೋ ಯೋಜನೆ ರಾಜ್ಯ ಮತ್ತು ಕೇಂದ್ರ ಸರ್ಕಾರ ಸಹಭಾಗಿತ್ವದಲ್ಲಿ ಇರುವ ಯೋಜನೆ. ದೇಶದಲ್ಲಿ ನಾವು ತೆರಿಗೆ ನೀಡುವಲ್ಲಿ ಎರಡನೇ ಸ್ಥಾನದಲ್ಲಿ ಇದ್ದೇವೆ ಎಂದು ಸಚಿವರು ತಿಳಿಸಿದರು.
2014 ರ ಬಳಿಕ ಬಿಜೆಪಿಯವರೇ ದೇಶ ಕಟ್ಟಿದ್ದಾರ? ಎಂದು ಖಾರವಾಗಿ ಪ್ರಶ್ನಿಸಿದ ಸಚಿವರು, ರಾಹುಲ್ ಗಾಂಧಿ ಮತಗಳ್ಳತನ ದೂರು ಕೊಡಲಿ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಎಂಬಿ ಪಾಟೀಲ್ ಪ್ರತಿಕ್ರಿಯೆ ನೀಡಿ, ರಾಹುಲ್ ಗಾಂಧಿ ಸಂಸತ್ ಸದಸ್ಯರು, ಸಂವಿಧಾನಾತ್ಮಕವಾಗಿ ಪ್ರಮಾಣವಚನ ಸ್ವೀಕರಿಸಿ ಬಂದಿದ್ದಾರೆ.
ಮತ್ತಮ್ಮೆ ಅವರು ದೂರು ಕೊಡೋದೇನಿದೆ. ಸಂವಿಧಾನದ ಅಡಿಯಲ್ಲಿ ವಿಪಕ್ಷ ನಾಯಕರಾಗಿದ್ದಾರೆ. ದೂರು, ಅಫಿಡೇವಿಡ್ ನೀಡಿ ಎನ್ನುವ ಮುನ್ನ ಸಂವಿಧಾನ ತಿಳಿದು ಮಾತನಾಡಲಿ ಎಂದು ಸಚಿವರು ತಾಕೀತು ಮಾಡಿದರು.
ಚುನಾವಣಾ ಆಯೋಗಕ್ಕೆ ರಾಹುಲ್ ಗಾಂಧಿ ಅವರು ಡಿಜಿಟಲ್ ಲೆಕ್ಕವನ್ನ ಕೇಳುತ್ತಿದ್ದಾರೆ, ಮೊದಲು ಅದನ್ನ ಕೊಡಲಿ. ಇಡೀ ದೇಶದಲ್ಲಿ ನಡೆದ ಮತ ಕಳ್ಳತನ ಬಗ್ಗೆ ಗೊತ್ತಾಗುತ್ತದೆ. ಚುನಾವಣಾ ಆಯೋಗ ಎಲ್ಲೋ ಒಂದ್ಕಂಡೆ ಸಂಸಯಾಸ್ಪದವಾಗಿ ನಡೆದುಕೊಳ್ಳುತ್ತಿದೆ ಎಂದು ಎಂ.ಬಿ ಪಾಟೀಲ್ ದೂರಿದರು.
ಬಿಹಾರದಲ್ಲೂ ಡಿಜಿಟಲ್ ಇತ್ತು, ಅಲ್ಲಿ ಕೂಡಾ ತೆಗೆದಿದ್ದಾರೆ. ಬಿಜೆಪಿಯನ್ನ ಪ್ರಶ್ನೆ ಮಾಡಿದ್ರೆ ಅಪ್ರಭುದ್ದರಾಗುತ್ತಾರ? ಎಂದು ಪ್ರಶ್ನಿಸಿದ ಸಚಿವರು, ಡಿಜಿಟಲ್ ಮೊದಲು ಕೊಡಿ, ಪಾರದರ್ಶಕತೆ ಇದ್ದರೆ ಕೊಡಿಎಂದು ತಾಕೀತು ಮಾಡಿದರು.

