ಚಳ್ಳಕೆರೆ ಪೊಲೀಸರ ಮಿಂಚಿನ ಕಾರ್ಯಾಚರಣೆ ಆರೋಪಿ ಬಂಧನ, 96 ಲಕ್ಷ ವಶ

News Desk

ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಕಳ್ಳತನ ಮಾಡಿದ್ದ 96,96,800 ರೂ ಹಣ, ಈಟಿಯೋಸ್ ಕಾರು ಸೇರಿದಂತೆ ಆರೋಪಿ ಕಾರು ಚಾಲಕನ್ನು ಪೊಲೀಸರು ಬಂಧಿಸಿದ್ದಾರೆ.

ನಿವೃತ್ತ ಸಿಬಿಐ ಎಸ್ಪಿ ಕೆ. ವೈ. ಗುರುಪ್ರಸಾದ್ ಅವರು ತನ್ನ ಹೆಂಡತಿ ಲಲಿತಾ ರವರೊಂದಿಗೆ ಬಳ್ಳಾರಿಯಲ್ಲಿ ಅವರ ಜಮೀನನ್ನು ಮಾರಾಟ ಮಾಡಿ ಅದರಿಂದ ಬಂದಂತಹ ಒಟ್ಟು 97 ಲಕ್ಷ ರೂಪಾಯಿಗಳನ್ನು ಪಡೆದುಕೊಂಡು ಬಾಡಿಗೆ ಕಾರಿನಲ್ಲಿ ಹೋಗುವಾಗ ಆ.25ರ ಮಧ್ಯಾಹ್ನ ಚಳ್ಳಕೆರೆಯ ಉಡುಪಿ ಗಾರ್ಡನ್ ಹೊಟೇಲ್ ನಲ್ಲಿ ಹಣವನ್ನು ಕಾರಿನಲ್ಲಿ ಇಟ್ಟು, ಊಟ ಮಾಡಲು ಹೋಗಿದ್ದು, ಕಾರಿನ ಚಾಲಕ ರಮೇಶ್ ಬೇಗ ಊಟ ಮಾಡಿ ಹೊರಗಡೆ ಹೋಗಿ ತನ್ನ ಫೋನ್ ಸ್ವಿಚ್ ಆಫ್ ಮಾಡಿಕೊಂಡು ಕಾರಿನಲ್ಲಿದ್ದ ಹಣವನ್ನು ಪಿರ್ಯಾದಿಯ ಕಣ್ತಪ್ಪಿಸಿ ಕಳ್ಳತನದಲ್ಲಿ ತೆಗೆದುಕೊಂಡು ಹೋಗಿದ್ದು ಚಳ್ಳಕೆರೆ ಠಾಣೆ ಪ್ರಕರಣ ದಾಖಲಾಗಿತ್ತು.

- Advertisement - 

ಆರೋಪಿ ಪತ್ತೆಗಾಗಿ ಚಿತ್ರದುರ್ಗ ಜಿಲ್ಲಾ ಪೊಲೀಸ್ ಅಧೀಕ್ಷಕ ರಂಜಿತ್ ಕುಮಾರ್ ಬಂಡಾರು ಮತ್ತು ಹೆಚ್ಚುವರಿ ಪೊಲೀಸ್‌ಅಧೀಕ್ಷಕ ಶಿವಕುಮಾರ್ ಆರ್ ಇವರುಗಳ ಮಾರ್ಗದರ್ಶನದಲ್ಲಿ ಚಳ್ಳಕೆರೆ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಟಿ.ಬಿ ರಾಜಣ್ಣರವರ ನೇತೃತ್ವದಲ್ಲಿ ಪೊಲೀಸ್‌ನಿರೀಕ್ಷಕರಾದ ಕುಮಾರ್ ಕೆ, ಪಿಎಸ್ಐ ಈರೇಶ್, ಶಿವರಾಜ್.ಜೆ ಹಾಗೂ ಸಿಬ್ಬಂದಿಯವರ ತಂಡ ರಚಿಸಲಾಗಿತ್ತು. 

ಪತ್ತೆ ತಂಡ ಆ.26 ರಂದು ಆರೋಪಿ ರಮೇಶ.ವಿ ತಂದೆ ವೆಂಕಟರಮಣಪ್ಪ ಇವನನ್ನು 24 ಗಂಟೆಯೊಳಗೆ ಪತ್ತೆ ಮಾಡಿ ದಸ್ತಗಿರಿ ಮಾಡಿದ್ದು, ಆರೋಪಿ ಪಾವಗಡ ತಾಲೂಕ್ ವೀರ್ಲಗೊಂದಿ ಗ್ರಾಮದ ತನ್ನ ಅಜ್ಜಿಯ ಮನೆಯಲ್ಲಿ ಬಚ್ಚಿಟ್ಟಿದ್ದ 96 ಲಕ್ಷ ಹಣ ಮತ್ತು ಇವನ ಹತ್ತಿರ ಉಳಿದ 96,800 ರೂ ಹಣವನ್ನು ವಶಪಡಿಸಿಕೊಂಡಿದ್ದಾರೆ. ಪ್ರಕರಣದಲ್ಲಿ ಒಟ್ಟು 96,96,800 ರೂ ಹಣವನ್ನು ಅಮಾನತ್ತುಪಡಿಸಿಕೊಂಡು ಆರೋಪಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗಿದೆ.

- Advertisement - 

ಆರೋಪಿ ಮತ್ತು ಹಣ ಪತ್ತೆ ಮಾಡಲು ಶ್ರಮಿಸಿದ ಚಳ್ಳಕೆರೆ ಪೊಲೀಸ್ ಠಾಣೆಯ ಪೊಲೀಸ್‌ನಿರೀಕ್ಷಕರಾದ ಕುಮಾರ್ ಕೆ ಪಿಐ ಮತ್ತು ಪಿಎಸ್ಐ ಈರೇಶ್, ಶಿವರಾಜ್.ಜೆ, ರವಿಕುಮಾರ್ ಬಿ.ವಿ ಎಎಸ್ಐ ಹಾಗೂ ಸಿಬ್ಬಂದಿಗಳ ಕಾರ್ಯಕ್ಕೆ ಪೊಲೀಸ್ ಅಧೀಕ್ಷಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

 

 

 

Share This Article
error: Content is protected !!
";