ಚಳ್ಳಕೆರೆ ಮತ್ತು ಪಾವಗಡ ಕೆರೆಗಳಿಗೆ ವರ್ಷದೊಳಗೆ ಭದ್ರಾ ನೀರು-ಎಂಡಿ ಸಣ್ಣ ಚಿತ್ತಯ್ಯ

News Desk

ಚಂದ್ರವಳ್ಳಿ ನ್ಯೂಸ್, ಪರಶುರಾಂಪುರ:
ಭದ್ರಾ ಮೇಲ್ದಂಡೆ ಯೋಜನೆ ಅಡಿಯಲ್ಲಿ ಚಳ್ಳಕೆರೆ ಮತ್ತು ಪಾವಗಡ ಭಾಗದ ಕೆರೆಗಳಿಗೆ ಮುಂದಿನ ವರ್ಷದೊಳಗೆ ನೀರು ಹರಿಸುವ ವಿಶ್ವಾಸವಿದೆ ಎಂದು ವಿಶ್ವೇಶ್ವರ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕ ಸಣ್ಣ ಚಿತ್ತಯ್ಯ ವಿಶ್ವಾಸ ವ್ಯಕ್ತಪಡಿಸಿದರು.

ಪರಶುರಾಂಪುರ ಹೋಬಳಿ ವ್ಯಾಪ್ತಿ ಸೇರಿದಂತೆ ಚಳ್ಳಕೆರೆ ಮತ್ತು ಪಾವಗಡ ಭಾಗದ ಕೆರೆಗಳಿಗೆ ಭದ್ರಾ ನೀರು ಹರಿಸುವ ನಿಟ್ಟಿನಲ್ಲಿ ಪಿ.ಮಹದೇವಪುರ, ಗೋಸಿಕೆರೆ, ಕ್ಯಾದಿಗುಂಟೆ, ಲಿಂಗದಹಳ್ಳಿ, ಬೆಳ್ಳಿಬಟ್ಟಲು, ಶೈಲಾಪುರ, ವದನ ಕಲ್ಲು ಒಳಗೊಂಡಂತೆ ಇನ್ನೂ ಹಲವಾರು ಹಳ್ಳಿಗಳಿಗೆ ರೈತರ ಜಮೀನುಗಳಿಗೆ ಶನಿವಾರ ತಡ ರಾತ್ರಿವರೆಗೂ ಭೇಟಿ ನೀಡಿ ಕಾಮಗಾರಿ ಪರಿಶೀಸಿ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಈ ವೇಳೆ ಕಾಮಗಾರಿಯಲ್ಲಿ ಇದ್ದ ಅಡ್ಡಿ, ಆತಂಕ, ಆಕ್ಷೇಪಣೆಗಳಿಗೆ ಸ್ಪಂದಿಸಿ ರೈತರ ಜಮೀನುಗಳಿಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ಆಲಿಸಿ, ರೈತರ ಮನವೊಲಿಸಿ ಸಣ್ಣ ಚಿತ್ತಯ್ಯ ರೈತಪರ ಕಾಳಜಿ ವ್ಯಕ್ತಪಡಿಸಿದರು.

 ಇದೇ ಸಂದರ್ಭದಲ್ಲಿ ಅಖಂಡ ಕರ್ನಾಟಕ ರಾಜ್ಯ ರೈತ ಸಂಘದ ಸೋಮಗದ್ದು ರಂಗಸ್ವಾಮಿ ಅವರು ಕೆಲ ಸಲಹೆ ಸೂಚನೆಗಳನ್ನು ನೀಡಿದರು.

ಕಾಂಗ್ರೆಸ್ ಪಕ್ಷದ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ಎ.ನಾಗರಾಜ್ ಪರಶುರಾಂಪುರ ಮಾತನಾಡಿ, ಭದ್ರಾ ಮೇಲ್ದಂಡೆ ಯೋಜನೆಯಿಂದ ಪೈಪ್ ಲೈನ್ ಹೋಗುವ ಮಾರ್ಗದಲ್ಲಿ ಬರುವ ರೈತರಿಗೆ ಯಾವುದೇ ತೊಂದರೆಯಾಗದ ರೀತಿ ಸಮಸ್ಯೆಗಳನ್ನು ಆಲಿಸಿ ಬಗೆಹರಿಸಿಕೊಡುತ್ತಾರೆಂಬ ವಿಶ್ವಾಸ  ವ್ಯಕ್ತಪಡಿಸಿದರು.

ವ್ಯವಸ್ಥಾಪಕ ನಿದೇ೯ಶಕರು ಪಾವಗಡ ತಾಲೂಕಿನ ಕುಗ್ರಾಮದಿಂದ ಬಂದವಾರಿದ್ದು ರೈತರ ಸಮಸ್ಯೆಗಳ ಆಳ, ಅರಿವು, ಸಾಕಷ್ಟು ತಿಳುವಳಿಕೆ ಇರುವುದರಿಂದ ಸಮಸ್ಯೆಗಳ ಬಗ್ಗೆ ಹೆಚ್ಚು ಗಮನ ಹರಿಸಿ ಹಾಗೆ ರೈತರಿಗೆ ಬರಬೇಕಾದ ಬೆಳೆ ಪರಿಹಾರ ಹಾಗೂ ಭೂಮಿ ಪರಿಹಾರ ಮೂರ್ನಾಲ್ಕು ತಿಂಗಳೊಳಗೆ ಕೊಡಿಸಿ ಕೊಡಬೇಕೆಂದು ಮನವಿ ಮಾಡಿದರು.

ಜೊತೆಗೆ ಅತಿ ತುರ್ತಾಗಿ ಕೆರೆಗಳಿಗೆ ನೀರುಣಿಸಿದರೆ ಈ ಭಾಗದ ರೈತರು ಕೃಷಿಯಲ್ಲಿ ತೊಡಗಿ ಆರ್ಥಿಕವಾಗಿ  ಸದೃಢವಾಗುವುದರ ಮುಖಾಂತರ ರೈತರೇ ಈ ದೇಶದ ಬೆನ್ನೆಲುಬು ಎಂಬ ನಾಣ್ಣುಡಿಯಂತೆ ಸ್ವಾವಲಂಬನೆ ಬದುಕು, ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಮೈಲಿಗಲ್ಲಾಗುವರು ಎಂದು ನಾಗರಾಜ್ ತಿಳಿಸಿದರು.

 ಈ ಸಂದರ್ಭದಲ್ಲಿ ಭದ್ರಾ ಮೇಲ್ದಂಡೆಯ ಅಧಿಕಾರಿ ಮುಖ್ಯ ಇಂಜಿನಿಯರ್ ಪಾಟೀಲ್, ಕಾರ್ಯಪಾಲಕ ಅಭಿಯಂತರ ಮಧುಸೂದನ್, ಸಹಾಯಕ ಕಾರ್ಯಪಾಲಕ ಅಭಿಯಂತರ ಜನಾರ್ದನ್, ಇಂಜಿನಿಯರ್ ಅಮೋಘ, ರೈತರಾದ ರಾಮಣ್ಣ, ಈರಣ್ಣ, ಚಿತ್ತಯ್ಯ, ರವಿ, ವದನಕಲ್ಲು ಪಾಪಣ್ಣ ಒಳಗೊಂಡಂತೆ ಇನ್ನಿತರರು ಉಪಸ್ಥಿತರಿದ್ದರು.

 

- Advertisement -  - Advertisement - 
Share This Article
error: Content is protected !!
";