ಚಂದ್ರವಳ್ಳಿ ನ್ಯೂಸ್, ಚಿಕ್ಕಮಗಳೂರು:
ಸರ್ಕಾರಿ ಶಾಲೆಗೆ ಹೈಟೆಕ್ ಸ್ಪರ್ಶ ನೀಡುವ ಮೂಲಕ ಕರ್ನಾಟಕದ ರಾಜ್ಯದ ಉದ್ದಗಲಕ್ಕೂ ಸಂಚರಿಸಿ ಚಾಲುಕ್ಯ ಫೌಂಡೇಶನ್ ಕೆಲಸ ಮಾಡುತ್ತ ಬಂದಿದ್ದು ಇದರ ಮುಂದುವರಿದ ಭಾಗವಾಗಿ ರಿವರ್ ಬೆಡ್ ಬೆಂಗಳೂರಿನ ಸಂಸ್ಥೆಯ ಸಾಮಾಜಿಕ ಹೊಣೆಗಾರಿಕೆಯ ಜೊತೆಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಎ ರಂಗಾಪುರ ಎಂಬುವ ಒಂದು ಸಣ್ಣ ಹಳ್ಳಿಯ ಸರ್ಕಾರಿ ಶಾಲೆಗೆ ಭೇಟಿ ನೀಡಿ
ಅಲ್ಲಿನ ಮಕ್ಕಳಿಗೆ ಬ್ಯಾಗ್ ಸಮವಸ್ತ್ರ ಗಳು, ಸ್ಮಾರ್ಟ್ ಟಿವಿ ಹಾಗೂ ಶಾಲೆಯ ಕಾಂಪೌಂಡ್ ಗೋಡೆ ಗ್ರೀಲ್ ಕೆಲಸ ಮಾಡಿಸಿ ಶಾಲೆಯ ಬಣ್ಣ ಬಳೆಯುವ ಮೂಲಕ ಶಾಲೆಯ ಸುಂದರಿಕರಣ ಹಾಗೂ ಎಲ್ಲ ಮಕ್ಕಳಿಗೂ ಶಿಕ್ಷಣ ಪರಿಕರಗಳು ಸ್ಪೀಕರ್ ಗ್ರೀನ್ ಬೋರ್ಡ್ ಕ್ರೀಡಾ ಸಾಮಗ್ರಿ ಗಳು ಬೆಂಚುಗಳು ಶಿಕ್ಷಕರಿಗೆ ಚೇರ್ ಹಾಗೂ ಟೇಬಲ್ ಗಳು ಲ್ಯಾಬ್ ಸಲಕರಣೆಗಳು ಇನ್ನೂ ಮುಂತಾದ 6 ಲಕ್ಷ ರೂಪಾಯಿ ವೆಚ್ಚದಲ್ಲಿ ಸಾಮಗ್ರಿಗಳ ವಿತರಿಸಲಾಯಿತು.
ಸಮಯದಲ್ಲಿ ಶಾಲೆಯ ಎಲ್ಲ ಶಿಕ್ಷಕರು ರಿವರ್ ಬೆಡ್ ಸಂಸ್ಥೆಯ ಮೇಘನಾ ಹಾಗೂ ಚಾಲುಕ್ಯ ಫೌಂಡೇಶನ್ ಸಂಸ್ಥಾಪಕ ಚಿನ್ನಯ್ ಹರೀಶ್ ಆಡಿಟರ್ ವಸುಧ ಹಾಗೂ ಮೇಘನಾ ಚಿನ್ನಯ ಉಪಸ್ಥಿತರಿದ್ದರು.
ಇದು ಚಾಲುಕ್ಯ ಫೌಂಡೇಶನ್ 23 ನೇ ಶಾಲೆಯಾಗಿದ್ದು ಇನ್ನೂ ರಾಜ್ಯದಾದ್ಯಂತ ಪ್ರವಾಸ ಮಾಡಿ ಸರ್ಕಾರಿ ಶಾಲೆಗಳ ಉಳಿಸಿ ಬೆಳೆಸುವ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ದೊಡ್ಡ ಪ್ರಮಾಣದಲ್ಲಿ ಕ್ರಾಂತಿ ಮಾಡುವ ಉದ್ದೇಶದಿಂದ ಈ ಯೋಜನೆ ಅನುಷ್ಠಾನಕ್ಕೆ ತಂದಿದೆ ಎಂದು ಹರೀಶ್ ಆಡಿಟರ್ ಮಾತನಾಡಿ ಹೇಳಿದರು. ಈ ವರ್ಷ ಮಕ್ಕಳು ಮೊಬೈಲ್ ಬಳಸಿ ಬಳಸಿ ಶಿಕ್ಷಣದ ಗುಣಮಟ್ಟ ಕಡಿಮೆಯಾಗುತ್ತಿದೆ ಹಾಗಾಗಿ ಇನ್ನು ಮುಂದೆ ಹೆಚ್ಚಿನ ಪ್ರಮಾಣದಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಮೌಲ್ಯ ತಿಳಿಸುವ ಪ್ರಯತ್ನ ನಡೆಯುತ್ತಿದೆ ಎಂದು ಹೇಳಿದರು.