ಸಿಎಂ ಕುರ್ಚಿ ಚರ್ಚೆಯನ್ನು ಮಾಧ್ಯಮಗಳು ದೂರ ಇಡಬೇಕು: ಚಲುವರಾಯಸ್ವಾಮಿ

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದಲ್ಲಿ ಸಿ.ಎಂ‌. ಕುರ್ಚಿ ಚರ್ಚೆ ವಿಚಾರವನ್ನು ಮಾಧ್ಯಮಗಳು ಕೆಲ ದಿನಗಳು ದೂರ ಇಡಬೇಕು ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ಮಂಡ್ಯ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಪತ್ರಿಕಾ ಗೋಷ್ಠಿ ನಡೆಸಿ ಮಾತನಾಡಿದ ಅವರು ಸಚಿವ ಸಂಪುಟ ಪುನರಚನೆ ಬಗ್ಗೆ ಸಿ.ಎಂ. ಮಾತನಾಡಿದ್ದಾರೆ ಅಷ್ಟೇ ಪಕ್ಷದ ಹೈಕಮಾಂಡ್ ಈ ಬಗ್ಗೆ ಪರಿಶೀಲಿಸಿ ಸ್ಪಷ್ಟವಾಗಿ ತಿರ್ಮಾನ ಮಾಡುತ್ತದೆ ಎಂದು ಹೇಳಿದರು.

- Advertisement - 

ರಾಜಕೀಯ ಪಕ್ಷಗಳಲ್ಲಿ ಇದು ಸರ್ವೇ ಸಾಮಾನ್ಯ ಎಂದು ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ಅವರು ಹೇಳಿದರು.
ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ ಸಿಎಂ ಹಾಗೂ ಡಿಸಿಎಂ ಜೊತೆಯಲ್ಲೆ ಇದ್ದಾರೆ ಆದರೆ ಬಿಜೆಪಿಯಲ್ಲಿ ಯಾವುದೇ ನಾಯಕರಲ್ಲಿ ಸಮನ್ವಯತೆ ಇಲ್ಲ. ಶಾಸಕರು ದೆಹಲಿಗೆ ಹೋಗಿರುವುದು ಸಚಿವ ಸ್ಥಾನದ ಆಕಾಂಕ್ಷೆಯಿಂದ ಎಂದು ಹೇಳಿದರು.

ಡಿಕೆ ಶಿವಕುಮಾರ್ ನನಗೂ ಒಂದು ಬಾರಿ ಸಿ ಎಂ ಆಗುವ ಅವಕಾಶ ಕೇಳಿದ್ದಾರೆ. ನಮ್ಮ ಪಕ್ಷದ ಹೈ ಕಮಾಂಡ್ ಈ ಬಗ್ಗೆ ತೀರ್ಮಾನ ಮಾಡುತ್ತೆ. ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ ಎಲ್ಲವು ಸರಿ ಹೋಗುತ್ತೆ. ಶೀಘ್ರವಾಗಿ ಪಕ್ಷದ ಹೈಕಮಾಂಡ್ ಎಲ್ಲವನ್ನು ಸರಿ ಮಾಡುತ್ತಾರೆ. ಸಿಎಂ.ಕುರ್ಚಿ ಕಿತ್ತಾಟ ಎಲ್ಲಾ ಮಾಧ್ಯಮಗಳ ಸೃಷ್ಟಿ ಅಷ್ಟೆ ಎಂದು ಹೇಳಿದರು. 

- Advertisement - 

ಸಭೆಯಲ್ಲಿ ಮೈಶುಗರ್ ಅಧ್ಯಕ್ಷ ಸಿ ಡಿ ಗಂಗಾಧರ್,ಅಂಜನಾ ಶ್ರೀಕಾಂತ್,ಡಿಸಿಸಿ ಬ್ಯಾಂಕ್ ನಿರ್ದೇಶಕ ಅಶೋಕ್,ವಸಂತ್ ರಾಜ್ ಇದ್ದರು.

 

Share This Article
error: Content is protected !!
";