ಚಂದನ್ ಅವಂಟಿ ಅವರ “ಆಲೋಚನೆಯ ದೀಪಗಳು” ಶ್ಲಾಘನೆ

News Desk

ಚಂದ್ರವಳ್ಳಿ ನ್ಯೂಸ್, ಯಾದಗಿರಿ:
ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರ 134ನೇ ಜಯಂತ್ಯೋತ್ಸವದ ಅಂಗವಾಗಿ ಶಹಾಪುರದ ವೈಷ್ಣವಿ ಫಂಕ್ಷನ್ ಹಾಲ್‌ನಲ್ಲಿ ಜಿಲ್ಲಾ ಮಟ್ಟದ ಕವಿಗೋಷ್ಠಿ ಏರ್ಪಡಿಸಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ಅನೇಕ ಗಣ್ಯ ಕವಿಗಳು ಭಾಗವಹಿಸಿ
, ಅಂಬೇಡ್ಕರ್ ರವರ ಆದರ್ಶಗಳು, ಸಮಾಜ ಪರಿವರ್ತನೆ ಹಾಗೂ ಮಾನವೀಯ ಮೌಲ್ಯಗಳನ್ನು ಪ್ರತಿಬಿಂಬಿಸುವ ಕವಿತೆಗಳನ್ನು ವಾಚಿಸಿದರು.

ಈ ಸಂದರ್ಭದಲ್ಲಿ ಚಂದನ್ ಅವಂಟಿ ಅವರು ವಾಚಿಸಿದ ಆಲೋಚನೆಯ ದೀಪಗಳುಎಂಬ ಶೀರ್ಷಿಕೆಯಲ್ಲಿರುವ ತಮ್ಮ ಕವಿತೆಯ ಮೂಲಕ ಗಮನ ಸೆಳೆದರು. ಈ ಕವನದಲ್ಲಿ ಅವರು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಚಿಂತನೆಗಳು ನಮ್ಮ ಸಮಾಜಕ್ಕೆ ಬೆಳಕು ನೀಡುವ ದೀಪಗಳಾಗಿವೆ ಎಂಬ ಗಂಭೀರ ಅರ್ಥವನ್ನು ನುಡಿಮುತ್ತುಗಳಾಗಿ ಬಿಂಬಿಸಿದ್ದಾರೆ.

ಅಂಬೇಡ್ಕರ್ ರಂತಹ ತತ್ವಜ್ಞರ ತತ್ವಗಳನ್ನು ನಾವೆಲ್ಲರೂ ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅವರ ಚಿಂತನೆಗಳೇ ನಮ್ಮನ್ನು ಮುನ್ನಡೆಸುವ ಆಲೋಚನೆಯ ದೀಪಗಳು,” ಎಂದು ಚಂದನ್ ಅವರು ಭಾವಪೂರ್ಣವಾಗಿ ಅಭಿಪ್ರಾಯಪಟ್ಟರು.

ಈ ಕವಿಗೋಷ್ಠಿಯು ಕೇವಲ ಸಾಹಿತ್ಯದ ವೇದಿಕೆಯಾಗದೇ, ಸಾಮಾಜಿಕ ಜಾಗೃತಿಗೆ ಶಕ್ತಿದಾಯಕ ಹಾದಿ ನೀಡಿದ ಉದಾಹರಣೆಯಾಯಿತು. ಭಾಗವಹಿಸಿದ ಪ್ರತಿಯೊಬ್ಬ ಕವಿಯೂ ತಮ್ಮದೇ ಆದ ಶೈಲಿಯಲ್ಲಿ ಅಂಬೇಡ್ಕರ್ ಪರಂಪರೆಯನ್ನು ಶ್ಲಾಘಿಸಿದರು.

ಕಾರ್ಯಕ್ರಮದಲ್ಲಿ ಪ್ರಾದೇಶಿಕ ಮಟ್ಟದ ಸಾಕಷ್ಟು ಸಾಹಿತ್ಯಾಭಿಮಾನಿಗಳು, ಯುವಕವಿಗಳು ಹಾಗೂ ಸಾರ್ವಜನಿಕರು ಭಾಗಿಯಾಗಿದ್ದರು. ಸಮಾರೋಪದಲ್ಲಿ ಆಯೋಜಕರು ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದರು.

 

Share This Article
error: Content is protected !!
";