ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ತಾಲ್ಲೂಕಿನ ಕಸಬಾ ಹೋಬಳಿಯ ಕೊನಘಟ್ಟ ಗ್ರಾಮ ಪಂಚಾಯ್ತಿಯ ಜ್ಯೋತಿರಮೇಶ್ ರಾಜೀನಾಮೆಯಿಂದ ತೆರವಾಗಿದ್ದ ಹಿನ್ನೆಲೆ ಶುಕ್ರವಾರ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ಚಾಂದಿನಿಸತೀಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿಯಾದ ತಾಲ್ಲೂಕು ಪಂಚಾಯತಿ ಈ.ಓ ಮಂಜುನಾಥ ಹರ್ತಿ ಅವಿರೋಧ ಆಯ್ಕೆಯನ್ನ ಪ್ರಕಟಿಸಿದರು.
ನೂತನ ಅಧ್ಯಕ್ಷ ರನ್ನು ಅಭಿನಂದಿಸಿ ಮಾತನಾಡಿದ ಕೆಪಿಸಿಸಿ ಸದಸ್ಯ ಜಿ.ಲಕ್ಷ್ಮೀಪತಿ ಕೊನಘಟ್ಟ ಗ್ರಾಮ ಪಂಚಾಯತಿಯಲ್ಲಿ ಕಾಂಗ್ರೆಸ್ ಬಿಜೆಪಿ ಮುಖಂಡರು ಅನೋನ್ಯದಿಂದ ಇದ್ದೇವೆ. ಮೈತ್ರಿಯಿಂದಾಗಿ ಅವಿರೋಧ ಆಯ್ಕೆಗೆ ಸಹಕರಿಸಿದ ಎಲ್ಲ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದರು.
ನೂತನ ಅಧ್ಯಕ್ಷೆ ಚಾಂದಿನಿಸತೀಶ್ ಮಾತನಾಡಿ ಗ್ರಾಮ ಪಂಚಾಯತಿಯ ವ್ಯಾಪ್ತಿಯ ಕ್ಷೇತ್ರದ ಸಮಸ್ಯೆಗಳ ಪರಿಹಾರಕ್ಕಾಗಿ ಶ್ರಮಿಸುತ್ತೇನೆ. ಪಕ್ಷಾತೀತ ನೆಲೆಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಹಂತ ಹಂತವಾಗಿ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು. ಸಿಕ್ಕಿರುವ ಅಲ್ಪಾವಧಿ ಸಮಯದಲ್ಲಿ ಸೂಕ್ತವಾಗಿ ಅಭಿವೃದ್ಧಿ ಮಾಡಲು ಕ್ರಮವಹಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಕೆ.ಕೆ ಆಂಜಿನಪ್ಪ, ಕೃಷ್ಣಪ್ಪ, ಜಿ.ಲಕ್ಷ್ಮೀಪತಿ, ಅಶ್ವಥ್ ನಾರಾಯಣಸ್ವಾಮಿ, ಚೈತ್ರಾ, ಮಂಜುಳಾ, ಸೋಮಶೇಖರ್, ಪುಷ್ಪಶಿವಶಂಕರ್, ಸಿದ್ದಲಿಂಗಯ್ಯ, ಪ್ರಕಾಶ್, ರಮೇಶ್, ಪಿಡಿಓ ರಶ್ಮಿ ಮತ್ತಿತರರು ಹಾಜರಿದ್ದರು.

