ಕಿಸಾನ್ ಸಂಘದ ಅಧ್ಯಕ್ಷರಾಗಿ ಚಂದ್ರಶೇಖರ್ ಆಯ್ಕೆ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಕೃಷಿ ಆಧಾರಿತ ಭಾರತ ರೈತರೇ ದೇಶದ ಬೆನ್ನೆಲುಬು
60 ರಿಂದ 65 ರಷ್ಟು ಭಾಗ ಕೃಷಿಗೆ ಪ್ರಾಮುಖ್ಯತೆ ಕೂಡುವ ರೈತರ ಕಲ್ಯಾಣವನ್ನು ಕಡಿಮೆ ಮಾಡುವ ಕೃಷಿ ಉತ್ಪಾದಕತೆ. ಇವುಗಳು ಆತ್ಮಹತ್ಯೆ, ದೀರ್ಘಕಾಲದ ಮಾನಸಿಕ ಒತ್ತಡಗಳು ಮತ್ತು ಕಡಿಮೆ ಆರ್ಥಿಕ ಸ್ಥಿರತೆ ಗಳಿಗೆ ಕಾರಣವಾಗುತ್ತವೆ ಎಂದು ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ನಾಗರಾಜಯ್ಯ ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ ಭಾರತೀಯ ಕಿಸಾನ್ ಸಂಘದ ದೊಡ್ಡಬಳ್ಳಾಪುರ ಘಟಕದ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು 

- Advertisement - 

ಕೃಷಿ ಉತ್ಪನ್ನಗಳಿಗೆ ಕಡಿಮೆ ಬೆಲೆ, ಸಾಲದ ಹೊರೆ, ಕೃಷಿ ಭೂಮಿಯ ವಿಭಜನೆ ಮತ್ತು ಅಸಮಾನ ಆದಾಯ, ರೈತರು ಎದುರಿಸುವ ಇತರ ಸಮಸ್ಯೆಗಳು ಕೈಗಾರಿಕಾ ಅಪಾಯಗಳು, ಕಡಿಮೆ ಶಿಕ್ಷಣ ಮತ್ತು ಕೃಷಿಯಲ್ಲಿ ತಾಂತ್ರಿಕ ಕೊರತೆ, ಮತ್ತು ಹವಾಮಾನ ಬದಲಾವಣೆಗಳನ್ನು ಒಳಗೊಂಡಿವೆ. ಹಲವು ಸಮಸ್ಯೆ ಎದುರಿಸುತ್ತಿರುವ ರೈತ ತಮ್ಮ ಪಾಲಿನ ಹಕ್ಕಿಗಾಗಿ ಸಂಘಟಿರಾಗಿ ಹೋರಾಟ ಮಾಡುವ ಪರಿಸ್ಥಿತಿ ಎದುರಾಗಿದೆ ಎಂದರು.

 ಭಾರತೀಯ ಕಿಸಾನ್ ಸಂಘದ ನೂತನ ತಾಲೂಕ್ ಅಧ್ಯಕ್ಷ ಚಂದ್ರಶೇಖರ್, ಪ್ರಧಾನ ಕಾರ್ಯದರ್ಶಿ ಡಾ.ಕುಮಾರ ನಾಯ್ಕ್, ಸಹಕಾರ್ಯದರ್ಶಿ ಸಾನಂದ,

- Advertisement - 

ಉಪಾಧ್ಯಕ್ಷರಾಗಿ ಕುರುವಿಗೆರೆ ರಮೇಶ, ರಾಧಮಣಿ, ತಾಲೂಕ್ ಪ್ರಮುಖ ಅನಂದ್ ಕುಮಾರ, ಲಕ್ಷ್ಮೀದೇವಿ, ಹಾಡೋನಹಳ್ಳಿ ಪ್ರಕಾಶ್, ಅನುಷಾ, ಅರುಣ್ ಕುಮಾರ್ ರವರನ್ನು ಆಯ್ಕೆ ಮಾಡಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಅಂಬಿಕಾ, ಜಿಲ್ಲಾ ಪ್ರಮುಖ ಅಂಜಿನಪ್ಪ ಹಾಜರಿದ್ದರು.

 

 

Share This Article
error: Content is protected !!
";