ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಎಸ್.ಜೆ.ಎಂ. ವಿದ್ಯಾಪೀಠದ ಆಶ್ರಯದಲ್ಲಿ ನಡೆಯುತ್ತಿರುವ ನಗರದ ಚಂದ್ರವಳ್ಳಿಯ ಎಸ್.ಜೆ.ಎಂ. ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯಕ್ಕೆ ನ್ಯಾಕ್‌ನ ೪ನೇ ಸೈಕಲ್‌ನ ಮರುಮೌಲ್ಯೀಕರಣ ಪರಿಶೀಲನೆಯಲ್ಲಿ ಕಾಲೇಜಿಗೆ ಬಿ++ ಗ್ರೇಡ್ (ಸಿಜಿಪಿಎ-೨.೯೦) ಮಾನ್ಯತೆ ಲಭಿಸಿದೆ ಎಂದು ಪ್ರಾಚಾರ್ಯ ಡಾ. ಎಸ್.ಹೆಚ್. ಪಂಚಾಕ್ಷರಿ ತಿಳಿಸಿದ್ದಾರೆ.
ಡಾ. ಜಗದೀಶ್‌ಕುಮಾರ್ ಪಟ್ನಾಯಕ್, ಉಪಕುಲಪತಿಗಳು, ನಾಗಾಲ್ಯಾಂಡ್ ಕೇಂದ್ರೀಯ ವಿಶ್ವವಿದ್ಯಾಲಯ, ನಾಗಾಲ್ಯಾಂಡ್ ಇವರ ಅಧ್ಯಕ್ಷತೆಯಲ್ಲಿ ಮೆಂಬರ್ ಕೋ-ಆರ್ಡಿನೇಟರ್ ಡಾ. ನರೇಂದ್ರಕುಮಾರ್ ಪಾಂಡೆ, ಡೀನರು, ಭೌತಶಾಸ್ತ್ರ ವಿಭಾಗ, ಲಕ್ನೋ ವಿಶ್ವವಿದ್ಯಾಲಯ, ಲಕ್ನೋ, ಉತ್ತರಪ್ರದೇಶ ಮತ್ತು ಸದಸ್ಯರಾದ ಡಾ. ಜೋಸೆಫ್ ದುರೈ, ವಿಶ್ರಾಂತ ಪಾಚಾರ್ಯರು, ಪ್ರೆಸಿಡೆನ್ಸಿ ಕಾಲೇಜು ಚೆನ್ನೈ ಅವರನ್ನೊಳಗೊಂಡ ನ್ಯಾಕ್ ಸಮಿತಿಯು ಡಿಸೆಂಬರ್ ೧೯ ಮತ್ತು ೨೦ರಂದು ಮಹಾವಿದ್ಯಾಲಯಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿತ್ತು.
ಅದರನುಸಾರ ಇಂದು ಫಲಿತಾಂಶ ಪ್ರಕಟವಾಗಿದ್ದು, ಆಡಳಿತ ಮಂಡಳಿಯ ಅಧ್ಯಕ್ಷರಾದ ಶಿವಯೋಗಿ ಸಿ.ಕಳಸದ, ಸದಸ್ಯರಾದ ಡಾ. ಬಸವಕುಮಾರ ಸ್ವಾಮಿಗಳು, ಡಾ.ಪಿ.ಎಸ್. ಶಂಕರ್, ಎಸ್.ಎನ್. ಚಂದ್ರಶೇಖರ್ ಅವರುಗಳು ಕಾಲೇಜಿಗೆ ಉತ್ತಮ ಫಲಿತಾಂಶ ಬರಲು ಶ್ರಮಿಸಿದ ಕಾಲೇಜಿನ ಪ್ರಾಂಶುಪಾಲರು, ಐ.ಕ್ಯೂ.ಎ.ಸಿ. ಸಂಚಾಲಕರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯನ್ನು ಅಭಿನಂದಿಸಿದ್ದಾರೆ.