ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಭಾರತೀಯ ಕಿಸಾನ್ ಸಂಘದ ,ದಕ್ಷಿಣಾ ಪ್ರಾಂತ್ಯದ ದೊಡ್ಡಬಳ್ಳಾಪುರ ತಾಲ್ಲೂಕು ಪದಾಧಿಕಾರಿಗಳು ಅಯ್ಕೆ ಪ್ರಕ್ರಿಯೆ ನಡೆಯಿತು ಈ ಪ್ರಕ್ರಿಯೆಯಲ್ಲಿ ನೂತನ ಹಂಗಾಮಿ ಅಧ್ಯಕ್ಷರಾಗಿ ನೆಲ್ಲುಗುದಿಗೆ ಚಂದ್ರು ರವರನ್ನು ಸರ್ವಾನುಮತದಿಂದ ಅಯ್ಕೆ ಮಾಡಲಾಯಿತು.
ನಗರದ ಪ್ರವಾಸಿ ಮಂದಿರದಲ್ಲಿ ಪದಾಧಿಕಾರಿಗಳ ಆಯ್ಕೆಯ ಸಂದರ್ಭದಲ್ಲಿ ಭಾರತೀಯ ಕಿಸಾನ್ ಸಂಘದ ಜಿಲ್ಲಾಧ್ಯಕ್ಷ ನಾಗರಾಜಯ್ಯ ನವರ ನೇತೃತ್ವದಲ್ಲಿ ತಾಲ್ಲುಕು ಪದಾಧಿಕಾರಿಗಳನ್ನು ಅಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಭಾರತೀಯ ಕಿಸಾನ್ ಸಂಘದ ಜಿಲ್ಲಾ ಕಾರ್ಯದರ್ಶಿ ಅಂಬಿಕಾ, ಖಜಾಂಚಿ ಚನ್ನಿಗರಾಯಪ್ಪ, ಉಪಾಧ್ಯಕ್ಷ ಅಂಜಿನಪ್ಪ, ತಾಲ್ಲೂಕು ಕಾರ್ಯದರ್ಶಿ ರಾಜಘಟ್ಟ ಗಣೇಶ, ಲಕ್ಷ್ಮೀ ದೇವಿ, ಗೀತಾ ಹಾಗು ಶ್ರೀಜ್ಯೋತಿ ಹಾಜರಿದ್ದರು.