ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಎಐಸಿಸಿಯ ವಿಸ್ತರಿತ ರೂಪವನ್ನು ಆಲ್ ಇಂಡಿಯಾ ಕಮಿಷನ್ ಕಮಿಟಿ ಎಂಬುದಾಗಿ ಬದಲಾಯಿಸುವುದೊಳಿತು. ದೇಶದ ಯಾವುದೇ ರಾಜ್ಯದಲ್ಲೂ ಚುನಾವಣೆ ನಡೆಯಲಿದ್ದರೂ ಅಲ್ಲಿಗೆ ಅಕ್ರಮ ಹಣ ರವಾನೆಯಾಗುವುದು ಕೆಪಿಸಿಸಿಯಿಂದ ಎಂದು ಬಿಜೆಪಿ ಗಂಭೀರ ಆರೋಪ ಮಾಡಿದೆ.
ತೆಲಂಗಾಣ, ಮಹಾರಾಷ್ಟ್ರದ ಬಳಿಕ ದೆಹಲಿ ಚುನಾವಣೆಗೂ ಕಾಂಗ್ರೆಸ್ ಹೈಕಮಾಂಡ್ ಕರ್ನಾಟಕ ಕಾಂಗ್ರೆಸ್ ಸರ್ಕಾರಕ್ಕೆ ಕಮಿಷನ್ ಟಾಸ್ಕ್ ನೀಡಿದೆ. ಪರಿಣಾಮವಾಗಿ ಇಲ್ಲಿ ಪ್ರತಿಯೊಂದು ಕಡತ ವಿಲೇವಾರಿಗೂ ಶೇ.60 ಕಮಿಷನ್ ಕಡ್ಡಾಯವಾಗಿದೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಟೀಕಾಪ್ರಹಾರ ಮಾಡಿದೆ.
ಸಿಎಂ ಸಿದ್ದರಾಮಯ್ಯ ಅವರು ಸ್ಕ್ಯಾಮ್ ರಾಮಯ್ಯ ಆಗಿ ಪರಿವರ್ತನೆಗೊಂಡು ರಾಜ್ಯದಲ್ಲಿ ಶೇ.60 ಕಮಿಷನ್ ಸರ್ಕಾರ ಮುನ್ನೆಸುತ್ತಿದ್ದಾರೆ ಎಂದು ಬಿಜೆಪಿ ಹರಿಹಾಯ್ದಿದೆ.