ರೈಲು ಸೇವೆಗಳಲ್ಲಿ ಬದಲಾವಣೆ ಮತ್ತು ರದ್ದು

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಸುರಕ್ಷತಾ ಕ್ರಮಗಳು ಮತ್ತು ಬೆಂಗಳೂರು ಪೂರ್ವ ಮತ್ತು ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣಗಳ ನಡುವೆ ನಡೆಯುತ್ತಿರುವ ರಸ್ತೆ ಕೆಳಸೇತುವೆ ಕಾಮಗಾರಿಗಳ ಹಿನ್ನೆಲೆಯಲ್ಲಿ, ಕೆಳಗಿನ ರೈಲು ಸೇವೆಗಳಲ್ಲಿ ಬದಲಾವಣೆಗಳನ್ನು ಮಾಡಲಾಗುತ್ತಿದೆ:

- Advertisement - 

ರೈಲುಗಳ ಸಂಚಾರ ಭಾಗಶಃ ರದ್ದು:
1. ಫೆಬ್ರವರಿ 24 ಮತ್ತು 27, 2025 ರಂದು ರೈಲು ಸಂಖ್ಯೆ 16521 ಬಂಗಾರಪೇಟೆ-ಕೆಎಸ್ಆರ್ ಬೆಂಗಳೂರು ಮೆಮು ರೈಲು ಬೈಯ್ಯಪ್ಪನಹಳ್ಳಿ ಮತ್ತು ಕೆಎಸ್ಆರ್ ಬೆಂಗಳೂರು ನಡುವೆ ಭಾಗಶಃ ರದ್ದಾಗಿದೆ. ಇದು ಬೈಯ್ಯಪ್ಪನಹಳ್ಳಿಯಲ್ಲಿ ಕೊನೆಗೊಳ್ಳುತ್ತದೆ.

- Advertisement - 

2. ಫೆಬ್ರವರಿ 24 ಮತ್ತು 27, 2025 ರಂದು ರೈಲು ಸಂಖ್ಯೆ 56520 ಹೊಸಪೇಟೆ-ಕೆಎಸ್ಆರ್ ಬೆಂಗಳೂರು ಡೈಲಿ ಪ್ಯಾಸೆಂಜರ್ ರೈಲು ಯಶವಂತಪುರ ಮತ್ತು ಕೆಎಸ್ಆರ್ ಬೆಂಗಳೂರು ನಡುವೆ ಭಾಗಶಃ ರದ್ದಾಗಿದೆ. ಇದು ಯಶವಂತಪುರದಲ್ಲಿ ಕೊನೆಗೊಳ್ಳುತ್ತದೆ.
3. ಫೆಬ್ರವರಿ 25 ಮತ್ತು 28 ರಂದು ರೈಲು ಸಂಖ್ಯೆ 17391 ಕೆಎಸ್ಆರ್ ಬೆಂಗಳೂರು-ಎಸ್ಎಸ್ಎಸ್ ಹುಬ್ಬಳ್ಳಿ ಡೈಲಿ ಎಕ್ಸ್ ಪ್ರೆಸ್ ರೈಲು ಕೆಎಸ್ಆರ್ ಬೆಂಗಳೂರು ಮತ್ತು ಯಶವಂತಪುರ ನಡುವೆ ಭಾಗಶಃ ರದ್ದಾಗಿದೆ. ಈ ರೈಲು ಕೆಎಸ್ಆರ್ ಬೆಂಗಳೂರಿನ ಬದಲು ಯಶವಂತಪುರದಿಂದ ಪ್ರಾರಂಭವಾಗಲಿದೆ.

4. ಫೆಬ್ರವರಿ 23 ಮತ್ತು 26, 2025 ರಂದು ಹೊರಡುವ ರೈಲು ಸಂಖ್ಯೆ 07339 ಎಸ್ಎಸ್ಎಸ್ ಹುಬ್ಬಳ್ಳಿ-ಕೆಎಸ್ಆರ್ ಬೆಂಗಳೂರು ಡೈಲಿ ಎಕ್ಸ್ ಪ್ರೆಸ್ ವಿಶೇಷ ರೈಲು ಯಶವಂತಪುರ ಮತ್ತು ಕೆಎಸ್ಆರ್ ಬೆಂಗಳೂರು ನಡುವೆ ಭಾಗಶಃ ರದ್ದಾಗಿದೆ. ಈ ರೈಲು ಯಶವಂತಪುರದಲ್ಲಿ ಕೊನೆಗೊಳ್ಳುತ್ತದೆ.
5. ಫೆಬ್ರವರಿ 24 ಮತ್ತು 27, 2025 ರಂದು ಹೊರಡುವ ರೈಲು ಸಂಖ್ಯೆ 07340 ಕೆಎಸ್ಆರ್ ಬೆಂಗಳೂರು-ಎಸ್ಎಸ್ಎಸ್ ಹುಬ್ಬಳ್ಳಿ ಡೈಲಿ ಎಕ್ಸ್ ಪ್ರೆಸ್ ವಿಶೇಷ ರೈಲು ಕೆಎಸ್ಆರ್ ಬೆಂಗಳೂರು ಮತ್ತು ಯಶವಂತಪುರ ನಡುವೆ ಭಾಗಶಃ ರದ್ದಾಗಿದೆ. ಈ ರೈಲು ಕೆಎಸ್ಆರ್ ಬೆಂಗಳೂರಿನ ಬದಲು ಯಶವಂತಪುರದಿಂದ ಹೊರಡಲಿದೆ.

- Advertisement - 

ರೈಲುಗಳ ಮಾರ್ಗ ಬದಲಾವಣೆ-
1. ಫೆಬ್ರವರಿ 24 ಮತ್ತು 27, 2025 ರಂದು ಹೊರಡುವ ರೈಲು ಸಂಖ್ಯೆ 12658 ಕೆಎಸ್ಆರ್ ಬೆಂಗಳೂರು-ಡಾ.ಎಂಜಿಆರ್ ಚೆನ್ನೈ ಸೆಂಟ್ರಲ್ ಡೈಲಿ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ರೈಲು ಕೆಎಸ್ಆರ್ ಬೆಂಗಳೂರು, ಯಶವಂತಪುರ, ಹೆಬ್ಬಾಳ, ಬಾಣಸವಾಡಿ, ಎಸ್ಎಂವಿಟಿ ಬೆಂಗಳೂರು, ಕೃಷ್ಣರಾಜಪುರಂ ಮತ್ತು ಬಂಗಾರಪೇಟೆ ನಿಲ್ದಾಣಗಳ ಮೂಲಕ ಸಂಚರಿಸಲಿದೆ.

2. ಫೆಬ್ರವರಿ 24 ಮತ್ತು 27, 2025 ರಂದು ಹೊರಡುವ ರೈಲು ಸಂಖ್ಯೆ 16593 ಕೆಎಸ್ಆರ್ ಬೆಂಗಳೂರು-ನಾಂದೇಡ್ ಡೈಲಿ ಎಕ್ಸ್ ಪ್ರೆಸ್ ರೈಲು ಕೆಎಸ್ಆರ್ ಬೆಂಗಳೂರು, ಯಶವಂತಪುರ ಮತ್ತು ಯಲಹಂಕ ನಿಲ್ದಾಣಗಳ ಮೂಲಕ ಸಂಚರಿಸಲಿದೆ.
3. ಫೆಬ್ರವರಿ 24 ಮತ್ತು 27, 2025 ರಂದು ಹೊರಡುವ ರೈಲು ಸಂಖ್ಯೆ 06270 ಎಸ್ಎಂವಿಟಿ ಬೆಂಗಳೂರು-ಮೈಸೂರು ಡೈಲಿ ಪ್ಯಾಸೆಂಜರ್ ಸ್ಪೆಷಲ್ ರೈಲು ಎಸ್ಎಂವಿಟಿ ಬೆಂಗಳೂರು, ಬಾಣಸವಾಡಿ, ಯಶವಂತಪುರ ಮತ್ತು ಕೆಎಸ್ಆರ್ ಬೆಂಗಳೂರು ನಿಲ್ದಾಣಗಳ ಮೂಲಕ ಸಂಚರಿಸಲಿದೆ.

4. ಫೆಬ್ರವರಿ 24 ಮತ್ತು 27, 2025 ರಂದು ಹೊರಡುವ ರೈಲು ಸಂಖ್ಯೆ 16022 ಮೈಸೂರು-ಡಾ.ಎಂಜಿಆರ್ ಚೆನ್ನೈ ಸೆಂಟ್ರಲ್ ಡೈಲಿ ಎಕ್ಸ್ ಪ್ರೆಸ್ ರೈಲು  ಕೆಎಸ್ಆರ್ ಬೆಂಗಳೂರು, ಯಶವಂತಪುರ, ಲೊಟ್ಟೆಗೊಲ್ಲಹಳ್ಳಿ, ಬಾಣಸವಾಡಿ, ಬೈಯಪ್ಪನಹಳ್ಳಿ ಮತ್ತು ಕೃಷ್ಣರಾಜಪುರಂ ಮೂಲಕ ಸಂಚರಿಸಲಿದೆ.
5. ಫೆಬ್ರವರಿ 24 ಮತ್ತು 27, 2025 ರಂದು ಹೊರಡುವ ರೈಲು ಸಂಖ್ಯೆ 06269 ಮೈಸೂರು-ಎಸ್ಎಂವಿಟಿ ಬೆಂಗಳೂರು ಡೈಲಿ ಪ್ಯಾಸೆಂಜರ್ ಸ್ಪೆಷಲ್ ರೈಲು ಕೆಎಸ್ಆರ್ ಬೆಂಗಳೂರು, ಯಶವಂತಪುರ, ಬಾಣಸವಾಡಿ ಮತ್ತು ಎಸ್ಎಂವಿಟಿ ಬೆಂಗಳೂರು ನಿಲ್ದಾಣಗಳ ಮೂಲಕ ಸಂಚರಿಸಲಿದೆ.

ಈ ಮೇಲಿನ ರೈಲುಗಳು (12658, 16593, 06270, 16022 ಮತ್ತು 06269) ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣದಲ್ಲಿ ನಿಗದಿತ ನಿಲುಗಡೆ ಇರುವುದಿಲ್ಲ.6. ಫೆಬ್ರವರಿ 23 ಮತ್ತು 26, 2025 ರಂದು ರೈಲು ಸಂಖ್ಯೆ 11013 ಲೋಕಮಾನ್ಯ ತಿಲಕ್-ಕೊಯಮತ್ತೂರು ಡೈಲಿ ಎಕ್ಸ್ ಪ್ರೆಸ್ ರೈಲು ಗೌರಿಬಿದನೂರು, ಯಲಹಂಕ, ಲೊಟ್ಟೆಗೊಲ್ಲಹಳ್ಳಿ, ಯಶವಂತಪುರ, ಹೆಬ್ಬಾಳ, ಬಾಣಸವಾಡಿ, ಕಾರ್ಮೆಲಾರಾಮ್ ಮತ್ತು ಹೊಸೂರು ಮಾರ್ಗವಾಗಿ ಸಂಚರಿಸಲಿದೆ. ಮಾರ್ಗ ಬದಲಾವಣೆಯಿಂದ ಈ ರೈಲು ಬೆಂಗಳೂರು ಪೂರ್ವ, ಬೆಂಗಳೂರು ಕಂಟೋನ್ಮೆಂಟ್, ಕೆಎಸ್ಆರ್ ಬೆಂಗಳೂರು ಮತ್ತು ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣಗಳಲ್ಲಿ ನಿಯಮಿತ ನಿಲುಗಡೆ ತಪ್ಪಿರುತ್ತದೆ.

ರೈಲುಗಳ ಮರು ವೇಳಾಪಟ್ಟಿ:
1. ಫೆಬ್ರವರಿ 24 ಮತ್ತು 27, 2025 ರಂದು ಹೊರಡುವ ರೈಲು ಸಂಖ್ಯೆ 12658 ಕೆಎಸ್ಆರ್ ಬೆಂಗಳೂರು-ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ ಡೈಲಿ ಎಕ್ಸ್ ಪ್ರೆಸ್ ರೈಲು ಬೆಂಗಳೂರಿನಿಂದ 45 ನಿಮಿಷ ತಡವಾಗಿ ಹೊರಡಲಿದೆ.
2. ಫೆಬ್ರವರಿ 24 ಮತ್ತು 27, 2025 ರಂದು ಹೊರಡುವ ರೈಲು ಸಂಖ್ಯೆ 16593 ಕೆಎಸ್ಆರ್ ಬೆಂಗಳೂರು-ನಾಂದೇಡ್ ಡೈಲಿ ಎಕ್ಸ್ ಪ್ರೆಸ್ ರೈಲು ಬೆಂಗಳೂರಿನಿಂದ 75 ನಿಮಿಷ ತಡವಾಗಿ ಹೊರಡಲಿದೆ ಎಂದು ರೈಲ್ವೆ ಅಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This Article
error: Content is protected !!
";