ಶೂನ್ಯ ಪೀಠದ ಅವಿರಳ ಜ್ಞಾನಿ: ಅಪ್ರತಿಮ ಸಾಧಕ ಚೆನ್ನಬಸವಣ್ಣ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ
ಅವಿರಳ ಜ್ಞಾನಿ ಎಂದೇ ಶರಣರಿಂದ ಅಂದು ಕರೆಸಿಕೊಂಡಿದ್ದ ಪ್ರಕಾಂಡ ಪಂಡಿತ ಎಂಬಿತ್ಯಾದಿ ವಿಶೇಷಗಳಿಗೆ ಬಾಜನರಾಗಿದ್ದ ಚಿನ್ಮಯ ಮೂರ್ತಿ ಚೆನ್ನಬಸವಣ್ಣನವರ ಜಯಂತ್ಯುತ್ಸವ (ಶರಣೋತ್ಸವ) ನಡೆಯಲಿದೆ. “ಇದೇ ದೀಪಾವಳಿ ಪಾಡ್ಯ
22-10-2025ರ ಬುಧವಾರ ನಡೆಯಲಿದೆ.” ಅ ನಿಮಿತ್ತ ಸಂಕ್ಷಿಪ್ತ ಮಾಹಿತಿ.”
ಶೂನ್ಯ ಪೀಠದ ದ್ವಿತೀಯಾಧ್ಯಕ್ಷ; ಅವಿರಳ ಜ್ಞಾನಿ: ಅಪ್ರತಿಮ ಸಾಧಕ ಚೆನ್ನಬಸವಣ್ಣರುದ್ರಮೂರ್ತಿ ಎಂ.ಜೆ

ಹನ್ನೆರಡನೆಯ ಶತಮಾನದ ಶರಣ ಸಮೂಹದಲ್ಲಿ ಅಗ್ರಗಣ್ಯವಾದ ಹೆಸರುಗಳಲ್ಲಿ, ಚನ್ನಬಸವಣ್ಣನವರದು ಬಹು ಪ್ರಮುಖವಾದುದು. ಇವರ ಜೀವಿತ ಕಾಲಾವಧಿ ತೀರಾ ಕಡಿಮೆಯಾದರೂ ಸಾಧನೆ ಅಪರಿಮಿತ; ಚನ್ನಬಸವಣ್ಣನವರು ಬದುಕಿದ್ದುದು ಕೇಲವೇ  ವರ್ಷಗಳು ಮಾತ್ರ. ಹನ್ನೆರಡನೆಯ ಶತಮಾನದ ಯುಗಪುರುಷನೂ; ಸಾಮಾಜಿಕ ಬದಲಾವಣೆಗಳ ಹರಿಕಾರನೂ ; ಅಸಮಾನತೆಯ ವಿರುದ್ದ ದನಿಯೆತ್ತಿ,

- Advertisement - 

ವ್ಯವಸ್ಠೆಯ ಆಕ್ರೋಶಕ್ಕೆ ಗುರಿಯಾದ, ಬಸವಣ್ಣನವರ ಸೋದರಳಿಯ ಚನ್ನಬಸವಣ್ಣ. ಬಸವಣ್ಣನವರ ಸೋದರಳಿಯನೆಂಬುದಕ್ಕಿಂತಲೂ, ಸ್ವ -ಸಾಮರ್ಥ್ಯ ಮತ್ತು ಸಾಧನೆಗಳಿಂದ ಪ್ರತಿಭಾನ್ವಿತ  ವ್ಯಕ್ತಿತ್ವವಾಗಿ ರೂಪಿತಗೊಂಡವರು ಚನ್ನಬಸವಣ್ಣನವರು.

ಚೆನ್ನಬಸವಣ್ಣನವರ ತಾಯಿ ಅಕ್ಕನಾಗಾಯಿ ಅಥವಾ ನಾಗಲಾಂಬಿಕೆ ಸ್ವತಃ ಚೆನ್ನಬಸವಣ್ಣನವರ ವಚನಗಳಿಂದ, ಇತರ ವಚನಕಾರರ ಉಕ್ತಿಗಳಿಂದ ಮತ್ತು ಪುರಾಣಗಳಿಂದ ಚೇನ್ನಬಸವಣ್ಣನವರ ತಾಯಿಯ ಬಗ್ಗೆ ವಿವರಗಳು ಸಾಕಷ್ಟು ದೊರಕುತ್ತವೆ…  ಚೆನ್ನಬಸವಣ್ಣನವರ ತಂದೆಯ ಬಗ್ಗೆ ಸಿಗುವ ವಿವರಗಳು ಕಡಿಮೆ ಎಂದೇಳುತ್ತಾರೆ ಇತಿಹಾಸಕಾರರು.

- Advertisement - 

ಕಾಲಜ್ಞಾನದ ವಚನಗಳ ಪ್ರಕಾರ, ಚೆನ್ನಬಸವಣ್ಣನ ಜನನ, ನಂದನ ನಾಮ ಸಂವತ್ಸರದ ವೈಶಾಖ ಶುದ್ದ ಪಾಡ್ಯ ಮಂಗಳವಾರ ಪ್ರಾತಃಕಾಲ ಕೃತ್ತಿಕಾ ನಕ್ಷತ್ರದಲ್ಲಿ (ಕ್ರಿ.ಶ. ೧೧೪೪) ಎಂದು ತಿಳಿದು ಬರುತ್ತದೆ. ಕಾರ್ತೀಕ ಮಾಸದಲ್ಲಿ ಉಳವಿಯಲ್ಲಿ ಲಿಂಗೈಕ್ಯ (ಕ್ರಿ.ಶ.೧೧೬೮)ಈ ಎರಡರ ನಡುವಣ ಕಾಲಾವಧಿ ಕೇವಲ ೨೪ ವರ್ಷಗಳು.
ಅಕ್ಕನಾಗಮ್ಮಳನ್ನು ಇಂಗಳೇಶ್ವರ ಮಾದಲಾಂಬಿಕೆಯ ಸಹೋದರ ಶಿವಸ್ವಾಮಿಯವರಿಗೆ ಕೊಟ್ಟು ಮದುವೆ ಮಾಡಲಾಗಿತ್ತು. ಕಲ್ಯಾಣಕ್ಕೆ ಹೋಗುವ ಮುನ್ನ ಚೆನ್ನಬಸವಣ್ಣ ಇದೇ ಇಂಗಳೇಶ್ವರದಲ್ಲಿ ಜನಿಸಿದ್ದರು.

ಚೆನ್ನಬಸವಣ್ಣನವರು ಬಸವಣ್ಣನವರಿಂದ ಸ್ಥಾಪಿಸಲಾದ ಅನುಭವ ಮಂಟಪದಲ್ಲಿ ಸಕ್ರಿಯವಾಗಿ ಪಾತ್ರ ವಹಿಸುತ್ತಾರೆ. ಆಗ ಅವರಿಗೆ ಕೇವಲ ಹನ್ನೆರಡು ವರ್ಷ ಇರಬಹುದು.ಲಿಂಗಾಯತ ಧರ್ಮದ ಸಾಂಪ್ರದಾಯಕ ವಚನಗಳನ್ನು ಪರಿಷ್ಕರಿಸಿ, [[ಷಟ್ ಸ್ಥಲಾಸುಸಾರವಾಗಿ ನೆಲೆಯನ್ನು ಕಲ್ಪಿಸಿದ ಪ್ರಮುಖರಲ್ಲಿ, ಚೆನ್ನಬಸವಣ್ಣನವರ ಹೆಸರು ಮೊದಲನೆಯದು.ಚೆನ್ನಬಸವಣ್ಣನವರ ವಚನಗಳು(ಲಭ್ಯವಾಗಿರುವ ವಚನಗಳು- 1763)ಇವು ತುಂಬಾ ಅನುಭಾವಪೂರ್ಣವಾಗಿ, ಲಿಂಗಾಯತದ ಧರ್ಮ ಸಿದ್ದಾಂತವನ್ನು ವಿವರಿಸುತ್ತವೆ.

ಕಲ್ಯಾಣದ ಕ್ರಾಂತಿಯ ನಂತರ ಕಲ್ಯಾಣದಲ್ಲಿದ್ದ ಶರಣರಿಗೆ ನೆಲೆ ತಪ್ಪಿ, ದಿಕ್ಕು ದಿಕ್ಕಿಗೆ ಚದುರಿ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಸೊನ್ನಲಾಪುರ, ಶ್ರೀಶೈಲ ಹೀಗೆ ವಿವಿಧ ಸ್ಥಳಗಳಿಗೆ,ಶರಣರ ತಂಡಗಳು ತೆರಳಿದವು. ಶರಣರ ಬಹು ದೊಡ್ಡ ಗುಂಪು, ಚೆನ್ನಬಸವಣ್ಣನವರ ನೇತೃತ್ವದಲ್ಲಿ, ಉಳವಿಯ ಕಡೆಗೆ ಹೊರಟಿತು. ಚಿಕ್ಕ ವಯಸ್ಸಿನ ಚೆನ್ನಬಸಣ್ಣನವರ ಹೆಗಲ ಮೇಲೆ ಇಂಥ ಗುರುತರವಾದ ಹೊಣೆಗಾರಿಕೆ ಬಿದ್ದುದನ್ನು, ತುಂಬಾ ಕಷ್ಟದಿಂದ ಅವರು ನಿಭಾಯಿಸಿದರು.

ಮಾರ್ಗ ಮಧ್ಯದಲ್ಲಿ,ಕಲ್ಯಾಣದ ಸೈನ್ಯ ಶರಣರನ್ನು ಅಡ್ಡಗಟ್ಟಿ ಮಾರಣ ಹೋಮವನ್ನು ನಡೆಸಿತು.ಆಗ ಶರಣರಿಗೆ ಅನಿರೀಕ್ಷಿತವದ  ಸಹಾಯ ಒದಗಿ,ಘೋರ ಯುದ್ದದಲ್ಲಿ ಕಲ್ಯಾಣದ ಸೈನ್ಯ ಸೋತು ಹಿಮ್ಮೆಟ್ಟಿತು.

ಡಾ.ಎಚ್.ತಿಪ್ಪೇರುದ್ರಸ್ವಾಮಿಯವರು ತಮ್ಮ ಅಳಿವಿನಿಂದ ಉಳಿವಿಗೆ ಕಾದಂಬರಿಯಲ್ಲಿ ಕೆಲವು ವಿವರಣೆಗಳನ್ನು ಒದಗಿಸಲು ಪ್ರಯತ್ನಿಸಿದ್ದಾರೆ. ನಂತರ ಚೆನ್ನಬಸವಣ್ಣನವರು ಹೆಚ್ಚುಕಾಲ ಬದುಕಲಿಲ್ಲ ಉಳವಿಯಲ್ಲಿಯೇ  ಲಿಂಗೈಕ್ಯ ಹೊಂದಿದರು. ಹೀಗೆ ಚೆನ್ನಬಸವಣ್ಣನವರು ಬದುಕಿದ್ದು ಸ್ವಲ್ಪ ಕಾಲವೇ ಆದರೂ; ಸಾಧಿಸಿದ್ದು, ಕೀರ್ತಿಶಾಲಿಯಾದದ್ದು ತುಂಬಾ ಹೆಚ್ಚು ಅದು ಪ್ರಭಾವ ಬೀರುವಂತಹುದಾಗಿದೆ.

ವಚನಃ
ಎನ್ನ ಕಾಯದ ಕದಳಿಯೆ ಸಂಗನಬಸವಣ್ಣನು,
ಎನ್ನ ಜೀವದ ಸುಮನವೆ ಚೆನ್ನಬಸವಣ್ಣನು.

ಎನ್ನ ಭಾವದ ಬಲುಹೆ ಪ್ರಭುದೇವರು,
ಎನ್ನ ತನುವಿನ ಮೂರ್ತಿಯೆ ಚಂದಯ್ಯನು
,
ಎನ್ನ ಮನದ ನಿಶ್ಚಯವೆ ಮಡಿವಾಳಯ್ಯನು
,
ಎನ್ನ ಪ್ರಾಣದ ಪರಿಣಾಮವೆ ಹಡಪದಪ್ಪಣ್ಣನು
,
ಎನ್ನ ಅರುಹಿನ ನೈಷ್ಠೆಯೆ ಸೊಡ್ಡಳ ಬಾಚರಸನು
,
ಎನ್ನಾಚಾರದ ದೃಢವೇ ಮೋಳಿಗೆಯ ಮಾರಯ್ಯನು
,
ಎನ್ನ ನೋಟದ ನಿಬ್ಬೆರಗೆ ಅನುಮಿಷದೇವರು
,
ಎನ್ನ ಶ್ರೋತ್ರದ ಕೇಳಿಕೆಯೆ ಮರುಳಶಂಕರದೇವರು
,
ಎನ್ನ ಹೃದಯದ ಜ್ಯೋತಿಯೆ ಘಟ್ಟಿವಾಳಯ್ಯನು
,
ಎನ್ನಂತರಂಗದ ಬೆಳಗೆ ಅಜಗಣ್ಣಯ್ಯನು
,
ಎನ್ನ ಬಹಿರಂಗದ ನಿರಾಳವೆ ನಿಜಗುಣದೇವರು
,
ಎನ್ನ ಸರ್ವಾಂಗದ ಕಳೆಯೆ ಸಿದ್ಧರಾಮಯ್ಯನು
,
ಎನ್ನ ಗತಿಮತಿಚೈತನ್ಯವೇ ಏಳ್ನೂರೆಪ್ಪತ್ತಮರಗಣಂಗಳು.

ಭೋಗಬಂಕೇಶ್ವರಾ, ನಿಮ್ಮ ಶರಣರ ಶ್ರೀಪಾದಕ್ಕೆ ನಮೋ ನಮೋ ಎನುತಿರ್ದೆನು”.
ಶಿವಶರಣ ಅಂಗಸೋಂಕಿನ ಲಿಂಗತಂದೆ.
ಲೇಖನ-ರುದ್ರಮೂರ್ತಿ ಎಂ.ಜೆ, ವಚನ ಚಿಂತಕರು, ಚಿತ್ರದುರ್ಗ.

Share This Article
error: Content is protected !!
";