ಎದೆಯ ಹಣತೆ ನಾಟಕ ಹಾಸನದಲ್ಲಿ ಜು.11ಕ್ಕೆ ಪ್ರದರ್ಶನ

News Desk

ಚಂದ್ರವಳ್ಳಿ ನ್ಯೂಸ್, ಹಾಸನ:
ಅಂತಾರರಾಷ್ಟ್ರೀಯ ಬುಕರ್ ಪ್ರಶಸ್ತಿ ಪುರಸ್ಕೃತರಾದ ಬಾನುಮುಷ್ತಾಕ್ ಅವರ ಎದೆಯ ಹಣತೆ ಕಥೆಯನ್ನು ಆಧರಿಸಿದ ನಾಟಕ ಪ್ರದರ್ಶನವನ್ನು ಜುಲೈ 11ರಂದು ಹಾಸನದ ಕಲಾಭವನದಲ್ಲಿ ಹಾಸನದ ರಂಗಸಿರಿ ಕಲಾ ತಂಡ ಆಯೋಜಿಸಿದೆ.

ನೀನಾಸಮ್ ರಂಗಶಿಕ್ಷಣ ಕೇಂದ್ರದ ಪ್ರಾಂಶುಪಾಲ ಡಾ.ಎಂ.ಗಣೇಶ್ ಹೆಗ್ಗೋಡು ನಿರ್ದೇಶನ ಮಾಡಿರುವ ಈ ನಾಟಕವನ್ನು ಹೆಗ್ಗೋಡಿನ ಸತ್ಯಶೋಧನ ರಂಗಸಮುದಾಯದ ನೇತೃತ್ವದಲ್ಲಿ ಜನಮನದಾಟ ರಂಗ ತಂಡ ಅಭಿನಯಿಸಲಿದೆ.

- Advertisement - 

ನೂತನ ಜಿಲ್ಲಾಧಿಕಾರಿ ಲತಾಕುಮಾರಿ ಅವರನ್ನು ಭೇಟಿ ಮಾಡಿದ್ದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮತ್ತು ರಂಗಸಿರಿ ಗೌರವಾಧ್ಯಕ್ಷ ಶಿವಾನಂದ ತಗಡೂರು ಅವರು  ಕಾರ್ಯಕ್ರಮಕ್ಕೆ ಆಹ್ವಾನಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷರುಗಳಾದ ಕೆ.ಆರ್.ಮಂಜುನಾಥ್, ಬಿ.ಆರ್.ಉದಯ ಕುಮಾರ್, ರವಿ ನಾಕಲಗೂಡು, ಹಿರಿಯ ಪತ್ರಕರ್ತರಾದ ಜಿ.ಪ್ರಕಾಶ್, ವಿಜಯಕುಮಾರ್, ರಂಗಸಿರಿ ಕಾರ್ಯದರ್ಶಿ ಪಿ.ಶಾಡ್ರಾಕ್, ಸುರೇಶ್ ಇದ್ದರು.

- Advertisement - 

Share This Article
error: Content is protected !!
";