ವಿದ್ಯಾರ್ಥಿನಿ ವರ್ಷಿತಾ ಕೊಲೆ ಆರೋಪಿ ಚೇತನ್ ಬಂಧನ, ಪೊಲೀಸರಿಗೆ ಬಹುಮಾನ ಘೋಷಣೆ

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗದಲ್ಲಿ 2ನೇ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ವರ್ಷಿತಾ(19) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ಮತ್ತಷ್ಟು ಸುಳಿವುಗಳು ಸಿಕ್ಕಿವೆ.

ಆರೋಪಿ ಚೇತನ್ ಎಂಬ ಯುವಕನನ್ನು ಈಗಾಗಲೇ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದು ಅವನು ಕೊಲೆ ಮಾಡಿರೋದನ್ನು ಒಪ್ಪಿಕೊಂಡಿದ್ದಾನೆ. ಆಗಸ್ಟ್ 14 ರಂದು ವರ್ಷಿತಾ ಮತ್ತು ಚೇತನ್ ರಸ್ತೆಯ ಮೇಲೆ ನಡೆದು ಹೋಗುತ್ತಿರುವುದು ಸಿಸಿಟಿವಿಯೊಂದರಲ್ಲಿ ಸೆರೆಯಾಗಿದೆ.

- Advertisement - 

ಮುಂದೆ ನಡೆದು ಹೋಗುತ್ತಿರುವವನೇ ಚೇತನ್ ಮತ್ತು ಅವನನ್ನು ವರ್ಷಿತಾ ಹಿಂಬಾಲಿಸುತ್ತಿದ್ದಾಳೆ. ಅವರಿಬ್ಬರು ದ್ವಿಚಕ್ರವಾಹನವೊಂದಕ್ಕೆ ಪೆಟ್ರೋಲ್ ಬಂಕೊಂದರಲ್ಲಿ ಇಂಧನ ತುಂಬಿಸಿಕೊಂಡಿರುವ ದೃಶ್ಯ ಕೂಡ ಅಲ್ಲಿನ ಸಿಸಿಟಿವಿ ಕೆಮೆರಾದಲ್ಲಿ ಸೆರೆಯಾಗಿದೆ. ಪೂರ್ವನಿಯೋಜಿತವಾಗಿ ಸಂಚು ಮಾಡಿ ವರ್ಷಿತಾ ಅವಳನ್ನು ಚೇತನ್​ ಬಲಿತೆಗೆದುಕೊಂಡಿದ್ದಾನೆಂದು ಹೇಳಲಾಗುತ್ತಿದೆ.

ಈ ಕುರಿತು ಚಿತ್ರದುರ್ಗದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಸುದ್ದಿಗೋಷ್ಠಿ ನಡೆಸಿ, ಗೋನೂರು ಬಳಿ ರಾಷ್ಟ್ರೀಯ ಹೆದ್ದಾರಿ ಪಕ್ಕ ಸುಟ್ಟ ಸ್ಥಿತಿಯಲ್ಲಿ ಯುವತಿ ಶವ ಪತ್ತೆಯಾಗಿದ್ದ ಪ್ರಕರಣದ ಆರೋಪಿ ಪತ್ತಾಗಾಗಿ ಡಿವೈಎಸ್ಪಿ ದಿನಕರ್, ಪಿಐ ಮುದ್ದುರಾಜ್ ನೇತೃತ್ವದಲ್ಲಿ ನಾಲ್ಕು ತಂಡ ರಚನೆ ಮಾಡಲಾಗಿತ್ತು. ಆರೋಪಿ ಗೋನೂನು ಗ್ರಾಮದ ಚೇತನ್ ನನ್ನು ಈಗಾಗಲೇ ಬಂಧಿಸಲಾಗಿದೆ ಎಂದು ಅವರು ತಿಳಿಸಿದರು.

- Advertisement - 

ಗುರುವಾರ ಬೆಳಗಿನ ಜಾವ ಆರೋಪಿ ಚೇತನ್ ಎಂಬಾತನ ಬಂಧಿಸಿದ್ದೇವೆ. ಆರೋಪಿ ಗಂಗಾವತಿ ಪಟ್ಟಣದಲ್ಲಿ ಕೆಲಸ ಮಾಡುತ್ತಿದ್ದು ಇನ್ಟಾಗ್ರಾಂ ನಲ್ಲಿ ಉದ್ಯೋಗ ವಿಚಾರಕ್ಕೆ ಯುವತಿ ವರ್ಷಿತಾ ಪರಿಚಯ ಆಗುತ್ತದೆ, SC-ST ಹಾಸ್ಟೆಲ್ ನಲ್ಲಿ ವರ್ಷಿತಾ ಓದುತ್ತಿರುತ್ತಾರೆ. ಇಬ್ಬರ ಮಧ್ಯ ಪರಸ್ಪರ ಪ್ರೀತಿ ಬೆಳೆಯುತ್ತದೆ. ಚೇತನ್ ಗೆ ಕ್ಯಾನ್ಸರ್ ಕಾಯಿಲೆ ಇರುತ್ತದೆ. ಇದೇ ಕಾರಣಕ್ಕೆ ವರ್ಷಿತಾ ಆರೋಪಿ ಚೇತನ್ ಗೆ ಅವೈಡ್ ಮಾಡುತ್ತಾಳೆ.

ಬಳಿಕ ವರ್ಷಿತಾ ಬೇರೆ ಯುವಕನ ಜೊತೆ ಪರಿಚಯ ವಾಗಿರುತ್ತದೆ. ಇದೇ ವಿಚಾರಕ್ಕೆ ಗೆಳತಿ ಮೇಲೆ ಚೇತನ್ ಗೆ ಸಿಟ್ಟು ಇರುತ್ತದೆ. ಆಗಸ್ಟ್-18 ರಂದು ವರ್ಷಿತಾ ಚಿಕ್ಕಮ್ಮ ಚೇತನ್ ಗೆ ಫೋನ್ ಮಾಡಿ ವರ್ಷಿತಾ ಪ್ರಗ್ನೇಂಟ್ ಇದ್ದಾಳೆ ಮದುವೆ ಆಗು ಎಂದು ಹೇಳುತ್ತಾರೆ.

ಮದುವೆ ಆಗುವಂತೆ ಬಲವಂತ ಮಾಡಿದ್ದಕ್ಕೆ ಆರೋಪಿ ಚೇತನ್ ವರ್ಷಿತಾಳನ್ನ ಮುಗಿಸುವ ಪ್ಲಾನ್ ಮಾಡುತ್ತಾನೆ. ಗೋನೂರು ಬಳಿ ಹೆದ್ದಾರಿ ಪಕ್ಕ ಕರೆದೊಯ್ದು ಕುತ್ತುಗೆ ಇಸುಕಿ ಸಾಯಿಸುತ್ತಾನೆ. ಬಳಿಕ ಪೆಟ್ರೋಲ್ ಹಾಕಿ ಸುಟ್ಟು ಹಾಕುತ್ತಾನೆ.

ಡಿವೈಎಸ್ಪಿ ದಿನಕರ್ ನೇತೃತ್ವದ ತಂಡ ಒತ್ತಡದಲ್ಲಿ ಕೂಡಾ ಉತ್ತಮ ಕೆಲಸ ಮಾಡಿದೆ. ಪೊಲೀಸರ ಕಾರ್ಯಕ್ಕೆ ಬಹುಮಾನ ಘೋಷಿಸಿ ಅಭಿನಂದಿಸುತ್ತೇನೆ ಎಂದು ಎಸ್ಪಿ ತಿಳಿಸಿದರು.

ಸಾಮಾಜಿಕ ಜಾಲತಾಣದಲ್ಲಿ ಕೆಲ ಊಹಾಪೋಹಗಳು ಹರಿದಾಡುತ್ತಿವೆ. ಪೊಲೀಸ್ ಇಲಾಖೆ ಸುಳ್ಳುಗಳನ್ನು ಹರಿ ಬಿಟ್ಟರೆ ಕಠಿಣ ಕ್ರಮ ವಹಿಸುತ್ತೇವೆ ಎಂದು ಎಸ್ಪಿ ಬಂಡಾರು ಎಚ್ಚರಿಸಿದ್ದಾರೆ.

 

 

 

Share This Article
error: Content is protected !!
";