ಎನ್ ಪಿಎಸ್ ನೌಕರರ ಸಂಘದ ಜಿಲ್ಲಾಧ್ಯಕ್ಷರಾಗಿ ಚೇತನ್ ಆಯ್ಕೆ

News Desk

ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ :
ಅಖಿಲ ಕರ್ನಾಟಕ
NPS ನೌಕರರ ಸಂಘದ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷರಾಗಿ ಚೇತನ್.ಕೆ ಆಯ್ಕೆಯಾಗಿದ್ದಾರೆ, ನೂತನ ಜಿಲ್ಲಾಧ್ಯಕ್ಷರಿಗೆ ಸರ್ಕಾರಿ ನೌಕರ ವರ್ಗ ಅಭಿನಂದನೆ ಸಲ್ಲಿಸಿದೆ. 

- Advertisement - 

 ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ಉಪ ವಿಭಾಗಾಧಿಕಾರಿಗಳ ಕಛೇರಿಯ ನೌಕರರಾದ ಚೇತನ್.ಕೆ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ, ನೂತನ ಜಿಲ್ಲಾಧ್ಯಕ್ಷರಿಗೆ ರಾಜ್ಯ ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್, ಗೌರವಾಧ್ಯಕ್ಷರಾದ ರಮೇಶ್ ಸಂಗಾ, ಗೌರವ ಸಲಹೆಗಾರರಾದ ರುದ್ರಪ್ಪ.ಎಂ.ವಿ, ಕಾರ್ಯಾಧ್ಯಕ್ಷ ಡಾ.ನೆಲ್ಕುದ್ರಿ ಸದಾನಂದಪ್ಪ, ರಾಜ್ಯಾಧ್ಯಕ್ಷ ನಾಗನಗೌಡ.ಎಂ.ವಿ ಅಭಿನಂದನೆ ಸಲ್ಲಿಸಿದರು. 

- Advertisement - 

ಸದ್ಯ ಜಾರಿಯಲ್ಲಿರುವ ರಾಷ್ಟ್ರೀಯ ಪಿಂಚಣಿ ಯೋಜನೆ (NPS) ಅನ್ನು ರದ್ದು ಮಾಡಿ ಹಿಂದಿನ ಹಳೇ ಪಿಂಚಣಿ ಯೋಜನೆ (OPS) ಜಾರಿ ಮಾಡುವ ಕಾರಣಕ್ಕೆ ಅಖಿಲ ಕರ್ನಾಟಕ NPS ನೌಕರ ಸಂಘ ಹೋರಾಟ ಮಾಡುತ್ತಿದೆ.

 

- Advertisement - 

 

 

Share This Article
error: Content is protected !!
";