ಫೋಟೋ-ಶೋ ‌ಗಳಿಗಾಗಿ ಮುಖ್ಯಮಂತ್ರಿಯನ್ನು ಆಯ್ಕೆ ಮಾಡಿಲ್ಲ-ನಿಖಿಲ್

News Desk

ಚಂದ್ರವಳ್ಳಿ ನ್ಯೂಸ್, ಬೆಂಗಳೂರು :
ಆರ್‌ಸಿಬಿಯ ಗೆಲುವಿಗಾಗಿ ಎರಡು ಕಾರ್ಯಕ್ರಮಗಳು ಆಯೋಜನೆ ಮಾಡಲಾಗಿತ್ತು
, ಒಂದು ವಿಐಪಿಗಳಿಗಾಗಿ ವಿಧಾನಸೌಧದಲ್ಲಿ, ಇನ್ನೊಂದು ಜನಸಾಮಾನ್ಯರಿಗಾಗಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಆರೋಪಿಸಿದ್ದಾರೆ.

- Advertisement - 

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರದ ಸಿಂಹಾಸನವನ್ನು ಆರಿಸಿಕೊಂಡರೆ ಹೊರತು ಜನಸಾಮಾನ್ಯರನಲ್ಲ. 11 ಅಭಿಮಾನಿಗಳು ಕಾಲ್ತುಳಿತದಲ್ಲಿ ಸಾವನ್ನಪ್ಪಿದಾಗ, ಸಚಿವರ ಕುಟುಂಬಗಳು ಸೆಲ್ಫಿ ತೆಗೆದುಕೊಳ್ಳುವದರಲ್ಲಿ ನಿರತರಾಗಿದ್ದರು.

- Advertisement - 

ಆದರೂ ಕೂಡ! ಮುಖ್ಯಮಂತ್ರಿಗಳ  ಪ್ರತಿಕ್ರಿಯೆ? “ಅದು ನಮ್ಮ ಕಾರ್ಯಕ್ರಮವಾಗಿರಲಿಲ್ಲ.” ಎಂದು ಹೇಳುವ ಮೂಲಕ ಸಿಎಂ ನುಣುಚಿಕೊಳ್ಳುತ್ತಿದ್ದಾರೆಂದು ನಿಖಿಲ್ ಆರೋಪಿಸಿದರು.

ಕ್ರೀಡಾಂಗಣವು ವಿಧಾನಸೌಧದಿಂದ ಕೂಗಳತೆಯ ದೂರದಲ್ಲಿದೆ. ಅದು ಪಾಕಿಸ್ತಾನವಲ್ಲ. ಇದು ನಿಮ್ಮ ರಾಜ್ಯ, ನಿಮ್ಮ ನಗರ. ನಿಮ್ಮ ಜನರು. ನೀವು ರಾಜ್ಯವನ್ನು ಮುನ್ನಡೆಸಲು ಆಯ್ಕೆಯಾದವರು, ಕಾರ್ಯಕ್ರಮದಲ್ಲಿ ಅತಿಥಿಯಂತೆ ವರ್ತಿಸುವುದನ್ನು ಮೊದಲು ನಿಲ್ಲಿಸಿ. ಫೋಟೋ-ಶೋ ‌ಗಳಿಗಾಗಿ ನಿಮ್ಮನ್ನು ನೇಮಿಸಲಾಗಿಲ್ಲ ಎಂದು ನಿಖಿಲ್ ಹರಿಹಾಯ್ದರು.

- Advertisement - 

ಜನರ ಜೀವಗಳನ್ನು ರಕ್ಷಿಸಲು ನಿಮ್ಮನ್ನು ನೇಮಿಸಲಾಗಿದೆ. ಆದರೆ ನೀವು ಮಾತ್ರ ಜನರ ಜೀವಗಳನ್ನು ರಕ್ಷಿಸಲು ವಿಫಲರಾಗಿದ್ದಿರಿ ಎಂದು ನಿಖಿಲ್ ದೂರಿದರು.

Share This Article
error: Content is protected !!
";