ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷರಾಗಿ ಚಿಗಳಿಕಟ್ಟೆ ಸಿ.ಹೆಚ್.ಕಾಂತರಾಜ್ ಅವಿರೋಧ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಪಿ.ಎಸ್ ಪಾತಯ್ಯ ಜೆ.ಜಿ ಹಳ್ಳಿ, ಪ್ರಧಾನ ಕಾರ್ಯದರ್ಶಿಯಾಗಿ ಎಂ.ಡಿ ರವಿ, ಖಜಾಂಚಿಯಾಗಿ ಮೊಹಮದ್ ಫಕೃದ್ದಿನ್, ಜಿಲ್ಲಾ ಪ್ರತಿನಿಧಿಯಾಗಿ ಕೆ. ಜಗದೀಶ್ ಕಂದಿಕೆರೆ ಇವರುಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಹಿರಿಯೂರು ತಾಲ್ಲೂಕು ಕೃಷಿಕ ಸಮಾಜಕ್ಕೆ ೨೦೨೪-೨೫ ರಿಂದ ೨೦೨೯-೩೦ರ ವರಗೆ ಕಾರ್ಯಕಾರಿ ಸಮಿತಿಯ ಚುನಾವಣೆ ದಿನಾಂಕ: ೧೫-೧೨-೨೦೨೪ರಂದು ನಡೆದು ೧೫ ಜನ ಕಾರ್ಯಕಾರಿ ಸಮಿತಿಯ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದರು.
ದಿನಾಂಕ: ೧೨-೧೨-೨೦೨೪ರಂದು ಆಯ್ಕೆಯಾದಂತಹ ಎಲ್ಲಾ ಕಾರ್ಯಕಾರಿ ಸಮಿತಿಯ ಸದಸ್ಯರಿಗೆ ಚುನಾವಣಾಧಿಕಾರಿಗಳು ನೋಟೀಸ್ ಜಾರಿ ಮಾಡಿ ದಿನಾಂಕ: ೩೦-೧೨-೨೦೨೪ರ ಬೆಳಿಗ್ಗೆ ೧೧ ಗಂಟೆಗೆ ಜಿ ಪಾತಯ್ಯ ಇವರನ್ನು ಸಭೆಯು ಒಮ್ಮತದಿಂದ ಸಭಾಧ್ಯಕ್ಷರನ್ನಾಗಿ ಮಾಡಿ ಪ್ರಥಮ ಸಭೆ ನಡೆಸಿ ಸದರಿ ಸಭೆಯಲ್ಲಿ
ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷರು, ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಹಾಗೂ ಜಿಲ್ಲಾ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಬಗ್ಗೆ ಸಭೆಗೆ ಮಂಡಿಸಿದಾಗ ಸದರಿ ಸಭೆಯಲ್ಲಿ ಹಾಜರಿದ್ದ ೧೫ ಜನ ನಿರ್ದೇಶಕರುಗಳು ವಿವಿಧ ಪದಾಧಿಕಾರಿಗಳ ಹುದ್ದೆಗಳನ್ನು ಅವಿರೋಧವಾಗಿ ಆಯ್ಕೆ ಮಾಡುವುದು ಸೂಕ್ತವೆಂದು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಸದರಿ ನಿರ್ಣಯದನ್ವಯ ಸೋಮವಾರ ಮಧ್ಯಾಹ್ನ ೧೨.೩೦ಕ್ಕೆ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಹಿರಿಯೂರು ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷರಾಗಿ ಚಿಗಳಿಕಟ್ಟೆ ಸಿ.ಹೆಚ್.ಕಾಂತರಾಜ್ ಅವಿರೋಧ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಪಿ.ಎಸ್ ಪಾತಯ್ಯ ಜೆ.ಜಿ ಹಳ್ಳಿ, ಪ್ರಧಾನ ಕಾರ್ಯದರ್ಶಿಯಾಗಿ ಎಂ.ಡಿ ರವಿ, ಖಜಾಂಚಿಯಾಗಿ ಮೊಹಮದ್ ಫಕೃದ್ದಿನ್, ಜಿಲ್ಲಾ ಪ್ರತಿನಿಧಿಯಾಗಿ ಕೆ. ಜಗದೀಶ್ ಕಂದಿಕೆರೆ ಇವರುಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ, ಪದನಿಮಿತ್ತ ಕಾರ್ಯದರ್ಶಿ ಹಾಗೂ ಸಹಾಯಕ ಕೃಷಿ ನಿರ್ದೇಶಕ ಹಿರಿಯೂರು ಎಂ.ವಿ ಮಂಜುನಾಥ್ ಅವರು ಫಲಿತಾಂಶ ಘೋಷಣೆ ಮಾಡಿದರು.
ಈ ಸಂದರ್ಭದಲ್ಲಿ ಸಹಾಯಕ ಚುನಾವಣಾಧಿಕಾರಿ ಕೆ. ಚಂದ್ರಶೇಖರ್, ಅಧೀಕ್ಷಕರು ಕೃಷಿ ಅಧಿಕಾರಿ ಎನ್.ಸಿ. ಉಮೇಶ್, ಎ. ಋಷಿಕೇಶ್, ದ್ವಿತೀಯ ದರ್ಜೆ ಸಹಾಯಕರು, ಹಿರಿಯೂರು ರವರು ಹಾಜರಿದ್ದರು.
ಚುನಾವಣೆ ಪ್ರಕ್ರಿಯೆ ಪೂರ್ಣಗೊಂಡ ನಂತರ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಮುಂಭಾಗದಲ್ಲಿ ಕೃಷಿಕ ಸಮಾಜಕ್ಕೆ ಆಯ್ಕೆಯಾದ ಎಲ್ಲ ಪದಾಧಿಕಾರಿಗಳನ್ನು ಅವರ ಬೆಂಬಲಿಗರು ಅಭಿನಂದಿಸಿದ್ದಾರೆ.
ಇದರ ಜೊತೆಯಲ್ಲಿ ಕಾಂಗ್ರೆಸ್ ಪಕ್ಷದ ಬಾವುಟಗಳು ರಾರಾಜಿಸುತ್ತಿದ್ದವು. ಹಿರಿಯೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾದಿ ರಮೇಶ್, ಮಾಜಿ ನಗರಸಭಾಧ್ಯಕ್ಷ ಚಂದ್ರಶೇಖರ್, ವಕೀಲ ಮಹೇಶ್, ಶ್ರೀನಿವಾಸ್, ಕಾಂಗ್ರೆಸ್ ಮುಖಂಡರಾದ ಕಂದಿಕೆರೆ ಸುರೇಶ್, ದಾದಾಪೀರ್ ಸೇರಿದಂತೆ ಕೃಷಿಕ ಸಮಾಜದ ನಿರ್ದೇಶಕರು, ಪದಾಧಿಕಾರಿಗಳು ಹಾಜರಿದ್ದರು.