ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಲಾವಣ್ಯ ಪದವಿ ಪೂರ್ವ ಕಾಲೇಜು ಮತ್ತು ಪದವಿ ಕಾಲೇಜಿನಲ್ಲಿ ಪಂಡಿತ್ ಜವಾಹರಲಾಲ್ ನೆಹರು ( ಮಕ್ಕಳ ದಿನಾಚರಣೆ) ರವರ ದಿನಾಚರಣೆಯನ್ನು ನೆಹರೂ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಆಚರಿಸಲಾಯಿತು ನಂತರ ಮಾತನಾಡಿದ ಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ವಿಶ್ವಾಸ್ ಹನುಮಂತೇಗೌಡ ರವರು ನೆಹರೂ ಆಧುನಿಕ ಭಾರತದ ಶಿಲ್ಫಿ.
ಹಾಗೂ ನೆಹರು ಅವರು ಶಿಕ್ಷಣ ಕ್ಷೇತ್ರಕ್ಕೆ ಅಪಾರವಾದ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.ಬಿಎಡ್ ಕಾಲೇಜು ಪ್ರಾಂಶುಪಾಲ ಪ್ರೊ. ಜಿ. ಕೃಷ್ಣಮೂರ್ತಿ ಮಾತನಾಡಿ ನೆಹರೂ ಅವರು ಉತ್ತಮ ಬರಹಗಾರರೂ ಕವಿಹೃದಯದ ವ್ಯಕ್ತಿ ಯಾಗಿದ್ದರು ಎಂದು ಹೇಳಿದರು.
ಪದವಿ ಪೂರ್ವ ಕಾಲೇಜು ಮತ್ತು ಪದವಿ ಕಾಲೇಜು ಪ್ರಾಂಶುಪಾಲ ಎಂ. ಸಿ.ಮಂಜುನಾಥ್ ಮಾತನಾಡಿ ಪಂಚವಾರ್ಷಿಕ ಯೋಜನೆ ವಾರ್ಷಿಕ ಯೋಜನೆ ವಿಶ್ವವಿದ್ಯಾಲಯಗಳ ಸ್ಥಾಪನೆ ಐಐಟಿ ಐಎಎಂ ಮೊದಲಾದ ಶಿಕ್ಷಣ ಸಂಸ್ಥೆಗಳ ಸ್ಥಾಪನೆಗೆ ಹೆಚ್ಚು ಮಹತ್ವ ಕೊಟ್ಟ ದೇಶದ ಏಕೈಕ ಪ್ರದಾನ ಮಂತ್ರಿಗಳು ಎಂದರೆ ನೆಹರೂ ರವರು ಮಾತ್ರ ಜೊತೆಗೆ ಕೈಗಾರಿಕೆಗಳನ್ನು ಹೆಚ್ಚು ಹೆಚ್ಚು ಸ್ಥಾಪಿಸಿ ಉದ್ಯೋಗ ಸೃಷ್ಟಿಸುವಲ್ಲಿ ನೆಹರೂ ಪ್ರಮುಖ ಪಾತ್ರ ವಹಿಸಿದ್ದರು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಕಾರ್ತಿಕ್ ಮಹಾದೇವ್,ಎನ್ ರಶ್ಮಿ, ಹರ್ಷಿತಾ,ಗಂಗಮೂರ್ತಿ, ರಾಕೇಶ್, ಪರಿಮಳ, ಅನುಷಾ, ಅನು,ಮೀನಾ,ಆಶಾ, ತ್ರಿಭುವನ್, ಗುರುಪ್ರಸಾದ್ ಯತೀಂದ್ರ ಮೀನಾ,ಚಂದನ, ಗ್ರಂಥಪಾಲಕ ಸತೀಶ್, ವಿದ್ಯಾಸೇರಿದಂತೆ ಎಲ್ಲಾ ವಿಭಾಗಗಳ ವಿದ್ಯಾರ್ಥಿ ವಿದ್ಯಾರ್ಥಿನಿಯರು ಕಾರ್ಯಕ್ರಮ ದಲ್ಲಿ ಭಾಗವಹಿಸಿದ್ದರು.

