ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ನಗರದ ಶ್ರೀನಗರ ಬಡಾವಣೆಯ ಇಮ್ಯಾನುಯಲ್ ಕಾನ್ವೆಂಟ್ ಶಾಲೆಯಲ್ಲಿ ಮಾಜಿ ಪ್ರಧಾನಿ ಪಂಡಿತ್ ಜವಾಹರ ಲಾಲ್ ನೆಹರು ಜಯಂತಿ, ಮಕ್ಕಳ ದಿನಾಚರಣೆ ಹಾಗೂ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಚಲನಚಿತ್ರ ಹಾಗೂ ಕಿರುತೆರೆ ನಟ ಸಾಗರ್ ಬಿಳಿಗೌಡ ಭಾಗವಹಿಸಿ ಮಾತನಾಡಿ ನೆಹರು ಎಂದರೆ ಮಕ್ಕಳಿಗೆ ಅಚ್ಚು ಮೆಚ್ಚು ಹಾಗಾಗಿ ನೆಹರು ಜನ್ಮ ದಿನಾಚರಣೆಯನ್ನು ಮಕ್ಕಳ ದಿನಾಚರಣೆ ಎಂದೇ ದೇಶದ ಎಲ್ಲೆಡೆ ಆಚರಿಸುವುದು ವಿಶೇಷ. ಆದುನಿಕ ಭಾರತದ ಕನಸು ಕಂಡಿದ್ದ ನೆಹರು ರವರ ಕೊಡುಗೆ ಭಾರತಕ್ಕೆ ಅಪಾರ ಎಂದು ಹೇಳಿದರು.
ಕನ್ನಡಪರ ಹೋರಾಟಗಾರ ಹಾಗೂ ಪತ್ರಕರ್ತ ಚೌಡರಾಜ್ ಮಾತನಾಡಿ ಕಾನ್ವೆಂಟ್ ಶಾಲೆಗಳು ಆಂಗ್ಲ ಭಾಷೆ ಜೊತೆಗೆ ಕನ್ನಡ ಭಾಷೆ ಬಗ್ಗೆ ಆಸಕ್ತಿ ಮೂಡಿಸುವ ಕೆಲಸ ಮಾಡಬೇಕು. ಎಳೆಯ ವಯಸ್ಸಿನ ಮಕ್ಕಳಿಗೆ ಕನ್ನಡ ಭಾಷೆ ಕಲಿಸುವುದು ಆಂಗ್ಲ ಶಾಲೆಗಳ ಪ್ರಮುಖ ಜವಾಬ್ದಾರಿಯಾಗಬೇಕಿದೆ ಎಂದರು.
ಶಾಲೆಯ ಪ್ರಾಮ್ಶುಪಾಲೆ ಸಲ್ಮಾ, ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಸುಭಾಷ್, ನರಸಿಂಹ ರಾಜು, ಸೇರಿದಂತೆ ಶಾಲಾ ಶಿಕ್ಷಕ ವೃಂದ ಕಾರ್ಯಕ್ರಮ ದಲ್ಲಿ ಹಾಜರಿದ್ದರು.

