ಚಿತ್ರದುರ್ಗ ನಗರಸಭೆ: ಡಿ.21ರಂದು ಆಯ-ವ್ಯಯ ಸಲಹಾ ಸೂಚನಾ ಸಭೆ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ನಗರಸಭೆಯ 2025-26ನೇ ಸಾಲಿನ ಆಯ-ವ್ಯಯ ತಯಾರಿ ಬಗ್ಗೆ ಸಾರ್ವಜನಿಕ ಸಲಹಾ ಸೂಚನಾ ಸಭೆಯನ್ನು ನಗರಸಭೆ ಅಧ್ಯಕ್ಷೆ ಬಿ.ಎನ್.ಸುಮಿತ ಅಧ್ಯಕ್ಷತೆಯಲ್ಲಿ ಇದೇ ಡಿ.21ರಂದು ಬೆಳಿಗ್ಗೆ 11ಕ್ಕೆ ನಗರಸಭೆ ಸಭಾಂಗಣದಲ್ಲಿ ಆಯೋಜಿಸಲಾಗಿದೆ.

ನಗರಸಭೆಯ ಆಯ-ವ್ಯಯ ತಯಾರಿಸಲು, ಅಭಿವೃದ್ಧಿ ಯೋಜನೆಗಳ ಕುರಿತು  ನಗರಸಭಾ ಸದಸ್ಯರು, ನಗರದ ಗಣ್ಯವ್ಯಕ್ತಿಗಳು, ಸಂಘಸಂಸ್ಥೆ ಪದಾಧಿಕಾರಿಗಳು, ವರ್ತಕರು, ನಿವೃತ್ತ ಅಧಿಕಾರಿಗಳು,

ನೌಕರರು, ಪತ್ರಕರ್ತರು, ಹಿರಿಯ ನಾಗರೀಕರು, ಸಾರ್ವಜನಿಕರು ಆಗಮಿಸಿ ಸಲಹೆ ಸೂಚನೆಗಳನ್ನು ಲಿಖಿತ ರೂಪದಲ್ಲಿ ಕಚೇರಿಯ ವೇಳೆಯಲ್ಲಿ ನೀಡಬಹುದು ಎಂದು ನಗರಸಭೆ ಪೌರಾಯುಕ್ತೆ ಎಂ.ರೇಣುಕಾ ತಿಳಿಸಿದ್ದಾರೆ.

- Advertisement -  - Advertisement - 
Share This Article
error: Content is protected !!
";