ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ನಗರಸಭೆ ವತಿಯಿಂದ ಇದೇ ಮೇ.10 ರಿಂದ 12 ರವರೆಗೆ ನಗರದ ಚೋಳಗುಡ್ಡ ಹಾಗೂ ಮಹೇಶ್ವರಿ ಲೇಔಟ್ನಲ್ಲಿ ಬಿ ಖಾತಾ ಅಭಿಯಾನ ನಡೆಯಲಿದೆ.
ನಗರದ ಅಗಸನಕಲ್ಲು, ಚೋಳಗುಡ್ಡ ಜನರಿಗೆ ಅನುಕೂಲವಾಗಲು ಅಗಸನಕಲ್ಲು ಅಂಜುಮಾನ್ ಬಳಿ ಹಾಗೂ ಮಹೇಶ್ವರಿ ಲೇಔಟ್ನ ಶನಿಮಹಾತ್ಮ ದೇವಸ್ಥಾನದ ಬಳಿ ಮೇ.10 ರಿಂದ 12 ರವರೆಗೆ ಮೂರು ದಿನ ಅಂದೋಲನ ಮಾಡುತ್ತಿದ್ದು,
ಸಾರ್ವಜನಿಕರು ಅಲ್ಲೇ ಬಂದು ಅರ್ಜಿಗಳನ್ನು ನೀಡಿ, ಬಿ ಖಾತಾವನ್ನು ಪಡೆಯಬಹುದಾಗಿದೆ. ಸಾರ್ವಜನಿಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ನಗರಸಭೆ ಪೌರಾಯುಕ್ತೆ ಎಂ.ರೇಣುಕಾ ತಿಳಿಸಿದ್ದಾರೆ.