ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಜಿಲ್ಲೆಯ ಹಿರಿಯೂರಿನಲ್ಲಿ ನಡೆದ ಪಿಎಂ ಧನ ಧಾನ್ಯ ಕೃಷಿ ಯೋಜನೆ ಹಾಗೂ ದ್ವಿದಳ ಧಾನ್ಯಗಳ ರಾಷ್ಟ್ರೀಯ ಯೋಜನೆಗಳ ಚಾಲನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನೂತನ ಯೋಜನೆಗಳಿಗೆ ವಿದ್ಯುಕ್ತವಾಗಿ ಚಿತ್ರದುರ್ಗ ಲೋಕಸಭಾ ಸಂಸದ ಗೋವಿಂದ ಎಂ.ಕಾರಜೋಳ ಅವರು ಚಾಲನೆ ನೀಡಿದರು.
ಪ್ರಧಾನಿ ನರೇಂದ್ರ ಮೋದಿಯವರು ನವದೆಹಲಿ ಕೃಷಿ ವಿಜ್ಞಾನ ಪರಿಷತ್‌ನಲ್ಲಿ ನಡೆದ ಕಾರ್ಯಕ್ರಮದ ಮೂಲಕ ಈ ಯೋಜನೆಗಳಿಗೆ ಅಧಿಕೃತ ಚಾಲನೆ ನೀಡಿದ್ದು, ಈ ಕಾರ್ಯಕ್ರಮದ ನೇರಪ್ರಸಾರವನ್ನು ಜಿಲ್ಲೆಯ ರೈತರೊಂದಿಗೆ ವೀಕ್ಷಣೆ ಮಾಡಲಾಯಿತು.
ದೇಶದ ರೈತರ ಆದಾಯ ದ್ವಿಗುಣಗೊಳಿಸುವ ಮೂಲಕ ಅವರನ್ನು ಸಬಲೀಕರಣಗೊಳಿಸುವ, ಸ್ವಾವಲಂಬನೆಗೊಳಿಸುವ ಯೋಜನೆಯಡಿ ದೇಶದ 100 ಜಿಲ್ಲೆಗಳೊಂದಿಗೆ ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳು ಸೇರಿದಂತೆ ರಾಜ್ಯದ ಆರು ಜಿಲ್ಲೆಗಳು ಆಯ್ಕೆಯಾಗಿದ್ದು ಸಂತಸದ ಸಂಗತಿ. ಈ ಯೋಜನೆಗಳ ಮೂಲಕ ಜಿಲ್ಲೆಯ ರೈತರ ಅಭಿವೃದ್ಧಿಗೆ ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗುತ್ತದೆ ಎಂದು ಸಂಸದರು ತಿಳಿಸಿದರು.
ಸಮಾರಂಭದಲ್ಲಿ ಬಿಜೆಪಿ ಹಿರಿಯ ಮುಖಂಡ ಎನ್ ಆರ್ ಲಕ್ಷ್ಮಿಕಾಂತ್, ಜಿಲ್ಲಾ ಮಾಜಿ ಅಧ್ಯಕ್ಷ ಮುರುಳಿ, ಬಿಜೆಪಿ ನಿಕಟ ಪೂರ್ವ ಮಂಡಲ ಅಧ್ಯಕ್ಷ ವಿಶ್ವನಾಥ್, ಮುಖಂಡರುಗಳಾದ ಮಾಧುರಿ ಗಿರೀಶ್, ಮಾಜಿ ಜಿಪಂ ಉಪಾಧ್ಯಕ್ಷ ಕೆ.ದ್ಯಾಮೇ ಗೌಡ, ರಾಘವೇಂದ್ರ, ಹರ್ಷ, ರಾಮದಾಸ್,
ಜೆಡಿಎಸ್ ನಾಯಕರಾದ ರವೀಂದ್ರಪ್ಪ, ಪಿಲಾಜನಹಳ್ಳಿ ಜಯಣ್ಣ, ಹನುಮಂತರಾಯಪ್ಪ, ಅಸ್ಗರ್ .ಹೆಚ್.ಎಂ.ಎಸ್. ಮಿಲ್ಟ್ರಿ ರಾಜು, ಸೋಮಣ್ಣ, ಪ್ರಜ್ವಲ್ ಪಾಳೆಗಾರ್, ಯೋಗೇಶ್, ನಿತಿನ್ ಗೌಡ್ರು, ಪಾರ್ಥ ಯಾದವ್, ವೇದಮೂರ್ತಿ, ನಾಗೇಂದ್ರಪ್ಪ, ಜಗದೀಶ್ ಎಲ್ಲಾ ತೋಟಗಾರಿಕೆ ಅಧಿಕಾರಿಗಳು ಪ್ರಮುಖ ನಾಯಕರು ಮಹಿಳೆಯರು ಹಾಗೂ ರೈತರು ಉಪಸ್ಥಿತರಿದ್ದರು.

