ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಕರ್ನಾಟಕ ರಾಜ್ಯದ ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಡಾ ಬಾಲಾಜಿ ಮತ್ತು ಚಿತ್ರದುರ್ಗ ಜಿಲ್ಲಾಧ್ಯಕ್ಷರಾದ ಬಿ ಮೈಲಾರಪ್ಪ ಅವರು
ಚಳ್ಳಕೆರೆ ತಾಲೂಕಿನ ಗಡಿ ಗ್ರಾಮ ಪರಶುರಾಮಪುರ ಹೋಬಳಿ ವ್ಯಾಪ್ತಿಯ ಐವತ್ತೆರೆಡು ಗ್ರಾಮಗಳಲ್ಲೂ ಕಳೆದ ಇಪ್ಪತ್ತು ವರ್ಷಗಳಲ್ಲಿ ಜನಪದ ಕಲೆ ಮತ್ತು ಸಾಹಿತ್ಯದ ಉಳಿವು ಮತ್ತು ಬೆಳವಣಿಗೆಗೆ ಶ್ರಮಿಸಿದ ಶಿಕ್ಷಕ ಓ ಚಿತ್ತಯ್ಯ ಅವರ ಅನನ್ಯ ಸೇವೆಯನ್ನು ಪರಿಗಣಿಸಿ ಚಳ್ಳಕೆರೆ ತಾಲೂಕು ಕನ್ನಡ ಜಾನಪದ ಪರಿಷತ್ನ ತಾಲೂಕು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಂಧ್ರಪ್ರದೇಶಕ್ಕೆ ಹೊಂದಿಕೊಂಡ ಗಡಿ ಗ್ರಾಮ ಪರಶುರಾಮಪುರ ಹೋಬಳಿ ವ್ಯಾಪ್ತಿಗೆ ಸುಮಾರು ಹತ್ತು ಗ್ರಾಪಂ ಸೇರಿಕೊಂಡು ತಾಲೂಕಿನ ಇನ್ನುಳಿದ ಮೂವತ್ತು ಗ್ರಾಪಂ ವ್ಯಾಪ್ತಿಯ ಹಳ್ಳಿಗಳಲ್ಲಿನ ಜನಪದ ಕಲಾವಿದರು ಸಾಹಿತಿಗಳು ಹಳ್ಳಿಗಾಡಿನ ವಿವಿಧ ಕಲಾ ತಂಡಗಳ ಕಲಾವಿದರಲ್ಲಿನ ಸಾಹಿತ್ಯ ಕಲೆಗಳನ್ನು ಉಳಿಸಿ ಬೆಳೆಸುವ ಮೂಲಕ ನಮ್ಮ ದೇಶೀ ಕಲೆ ಮತ್ತು ಸಾಹಿತ್ಯವನ್ನು ಅಭಿವೃಧ್ದಿಗೊಳಿಸುವ ಹೊಣೆಯನ್ನೂ ನೂತನ ತಾಲೂಕು ಅಧ್ಯಕ್ಷರಿಗೆ ವಹಿಸಲಾಗಿದೆ ಎಂದು ತಿಳಿಸಿದ್ದಾರೆ.

