ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಪೌರಕಾರ್ಮಿಕರು ನಗರಸಭೆಯ ಸೌವಲತ್ತುಗಳನ್ನು ಬಳಸಿಕೊಳ್ಳಲು ಪೌರಾಯುಕ್ತ ಕಾರ್ತಿಕೇಶ್ವರ್ ಮನವಿ ಮಾಡಿದರು.
ಅವರು ನಗರಸಭೆ ವತಿಯಿಂದ ಆಯೋಜನೆ ಮಾಡಿದ್ದ ಪೌರ ಕಾರ್ಮಿಕರ ದಿನಾಚಾರಣೆಯನ್ನು ಉದ್ಘಾಟಿಸಿ ಮಾತನಾಡಿ ನಗರಸಭೆಯ ಪ್ರಮುಖ ಕರ್ತವ್ಯವೆಂದರೆ ಊರು ಸ್ವಚ್ಚತೆ ಕಾಪಾಡುವುದು ಸ್ವಚ್ಚತಾ ಕಾರ್ಯದಲ್ಲಿ ಪ್ರತಿಯೊಬ್ಬರು ತಪ್ಪದೆ ಬೂಟು ಗ್ಲೌಸ್ ಗಳನ್ನು ಬಳಸಿ ಸ್ವಚ್ಚತಾ ಕಾರ್ಯಗಳಿಗೆ ಇಳಿಯಬೇಕು ಇದರಿಂದ ಕಾರ್ಮಿಕರಿಗೆ ಅರೋಗ್ಯ ಸುಸ್ತಿಯಲ್ಲಿರಲು ಸಹಕಾರಿಯಾಗುತ್ತದೆ.
ಪೌರ ಕಾರ್ಮಿಕರಿಗೆ ಸರ್ಕಾರದ ಸೌಲಭ್ಯ ಕೊಡಿಸುವಲ್ಲಿ ನಗರಸಭಾ ಅಧ್ಯಕ್ಷರು/ಉಪಾಧ್ಯಕ್ಷರು ಸ್ಥಾಯಿ ಸಮಿತಿ ಅಧ್ಯಕ್ಷರು ಹಾಗು ಎಲ್ಲಾ ನಗರಸಭಾ ಸದಸ್ಯರುಗಳ ಜೊತೆಯಲ್ಲಿ ಶ್ರಮಿಸಲಾಗುತ್ತಿದೆ ಎಂದರು.ನಗರದಲ್ಲಿ ಸಾಕಷ್ಟು ಜನೋಪಯೋಗಿ ಕೆಲಸಗಳನ್ನು ಮಾಡುತಿದ್ದೇವೆ.ಪೌರ ಕಾರ್ಮಿಕರು ತಮ್ಮ ಮಕ್ಕಳಿಗೆ ಉತ್ತಮ ವಿದ್ಯಾಬ್ಯಾಸ ಕೊಡಿಸಿ ಉನ್ನತ ಸ್ಥಾನಕ್ಕೆ ಏರಲು ಪೋಷಕರ ಸಹಕಾರ ಅತಿಮುಖ್ಯ ಎಂದರು.
ಪೌರ ಕಾರ್ಮಿಕರು ದುಶ್ಚಟಗಳಿಗೆ ಬಲಿಯಾಗದೆ ಉತ್ತಮ ಆರೋಗ್ಯದಿಂದಿರಲು ಮನವಿ ಮಾಡಿದರು. ನಗರಸಭಾ ಉಪಾಧ್ಯಕ್ಷ ಮಲ್ಲೇಶ್ ರವರು ಮಾತನಾಡಿ ನವರಾತ್ರಿಯ 2ನೇದಿನವಾದ ಇಂದು ಎರಡೆರಡು ಸಂಭ್ರಮಾಚರಣೆಗಳು ನಡೆಯುತ್ತಿದ್ದು ಪೌರ ಕಾರ್ಮಿಕರ ದಿನಾಚಾರಣೆ ಜೊತೆಗೆ 34 ಪೌರಕಾರ್ಮಿಕರ ಬಹುದಿನದ ಕನಸಾಗಿದ್ದ ಗೃಹಭಾಗ್ಯ ಯೋಜನೆ ನನಸಾಗಿದ್ದು ಗೃಹಭಾಗ್ಯ ದಕ್ಕಿರುವುದು ಸಂತಸ ತಂದಿದ್ದು
ಈ ಕಾರ್ಯಕ್ಕೆ ಪೌರಾಯುಕ್ತರಾದ ಕಾರ್ತಿಕೇಶ್ವರ್ ಎಇಇ ರಾಮೇಗೌಡ ಹಾಗು ರಮೇಶ್ ರವರ ಸತತ ಪರಿಶ್ರಮದಿಂದ ಪೌರ ಕಾರ್ಮಿಕರ ಗೃಹಬಾಗ್ಯ ಯೋಜನೆ ಸಫಲವಾಗಿದೆ. ಪೌರಕಾರ್ಮಿಕರ ದಿನಾಚಾರಣೆಯನ್ನು ಪೌರಕಾರ್ಮಿಕರು ತಮ್ಮ ಕುಟುಂಬದೊಂದಿಗೆ ಆಚರಣೆ ಮಾಡಿದರೆ ಮತ್ತಷ್ಟು ಮೆರಗು ಬರುವುದು.ಮಳೆ ಚಳಿ ಯನ್ನದೆ ಪ್ರತಿನಿತ್ಯ ನಗರ ಸ್ವಚ್ಛಗೊಳಿಸುವ ಕಾರ್ಯ ಶ್ಲಾಘನೀಯ ಎಂದರು.
ಈ ಸಂದರ್ಭದಲ್ಲಿ ನಗರಸಭೆಯ ಪೌರಾಯುಕ್ತ ಕಾರ್ತಿಕೇಶ್ವರ್ ರವರಿಗೆ ಪೌರಕಾರ್ಮಿಕರ ಸಂಘದಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ನಗರಸಭಾ ಅದ್ಯಕ್ಷೆ ಸುಮಿತ್ರಾ ಅನಂದ್ ಉಪಾಧ್ಯಕ್ಷ ಮಲ್ಲೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ವಡ್ಡರಹಳ್ಳಿ ರವಿ, ನಗರಸಭಾ ಸದಸ್ಯರಾದ ಶಿವು ನಾಗರಾಜ್, ಆನಂದ್, ಲಕ್ಷ್ಮಿಪತಿ, ನಾಗರತ್ನ, ಪ್ರಭಾ, ಆದಿಲಕ್ಷ್ಮೀ, ವತ್ಸಲಾ, ಸಹಾಯಕ ಅಭಿಯಂತರಾದ ರಾಮೇಗೌಡ, ಪೌರಾಕಾರ್ಮಿಕ ಸಂಘದ ಮುಖಂಡರಾದ ತಿಪ್ಪಣ್ಣ, ಮೆಡಿಕಲ್ ವೆಂಕಟೇಶ್ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಿದ್ದರು.

