ನಂದಿನಿ ಬೇಕರಿ ಮುಂದೆ ಕಸ ಮತ್ತು 2 ಸಾವಿರ ದಂಡ ಹಾಕಿದ ನಗರಸಭೆ

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ನಗರ ವ್ಯಾಪ್ತಿಯ ವಾರ್ಡ್ ನಂ 26 ಹುಳಿಯಾರ್ ರಸ್ತೆಯಲ್ಲಿರುವ ನಂದಿನಿ ಬೇಕರಿಯವರು ಹೀಗಾಗಲೇ 3 ರಿಂದ 4 ಬಾರಿ ಎಚ್ಚರಿಕೆ ನೀಡಿದ್ದರೂ ಸಹ ಕಸವನ್ನು ರಸ್ತೆಗೆ ಹಾಕುತ್ತಿರುವುದನ್ನು ನಗರಸಭೆಯ ಆರೋಗ್ಯ ನೀರಿಕ್ಷಕರಾದ ಸಂಧ್ಯಾ, ಅಶೋಕ್ ಕುಮಾರ್,

ನಯಾಜ್ ಷರೀಫ್ ರವರು ಗಮನಿಸಿ ಅದೇ ಕಸವನ್ನು ಅವರ ಅಂಗಡಿ ಮುಂದೆಯೇ ಹಾಕಿಸಿ ಅವರ ಕೈಯಲ್ಲಿ ತುಂಬಿಸುವ ಕಾರ್ಯಾಚರಣೆ ಕೈಗೊಂಡಿದ್ದು ಇದರ ಉದ್ದೇಶ ಬೇರೆ ಸಾರ್ವಜನಿಕರಿಗೂ ಅರಿವು ಮೂಡಿಸುವಂತದ್ದಾಗಿರುತ್ತದೆ ಜೊತೆಗೆ 2000 ರೂ. ದಂಡ ವಿಧಿಸಲಾಯಿತು ಎಂದು ನಗರಸಭೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

- Advertisement - 

ಸಾರ್ವಜನಿಕರಲ್ಲಿ ಕೇಳಿಕೊಳ್ಳುವುದೇನೆಂದರೆ ದಯವಿಟ್ಟು ಕಸವನ್ನು ರಸ್ತೆಗೆ ಚಲ್ಲದೆ ನಗರಸಭೆ ಗಾಡಿಗೆ ನೀಡಲು ಕೋರುತ್ತೇವೆ. ತಪ್ಪಿದ್ದಲ್ಲಿ ಮುಂದೆ ಇನ್ನೂ ಕಠಿಣ ರೀತಿಯ ವಿವಿಧವಾದ ಕಾರ್ಯಾಚರಣೆಗಳನ್ನು ಕೈಗೊಳ್ಳಲಾಗುವುದು, ದಂಡ ವಿಧಿಸಲಾಗುವುದು ಮತ್ತು ಕಾನೂನು ರಿತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ನಗರಸಭೆ ಪೌರಾಯುಕ್ತ ಎ.ವಾಸೀಂ ಎಚ್ಚರಿಸಿದ್ದಾರೆ.

 

- Advertisement - 

 

Share This Article
error: Content is protected !!
";