ಚಂದ್ರವಳ್ಳಿ ನ್ಯೂಸ್, ಚಿಕ್ಕಮಗಳೂರು:
ಅನಸೂಯಾ ಗರ್ಭರತ್ನಂ
ಅತ್ರಿಗೋತ್ರ ಸಮುದ್ಭವಂ |
ವಿರಮ್ಯ ಯೋಗಿನಾ ಸರ್ವಂ
ದತ್ತಾತ್ರೇಯ ನಮೋಸ್ತುತೇ
ಮಹರ್ಷಿ ಅತ್ರಿ ಮತ್ತು ಮಹಾಸತಿ ಅನಸೂಯಾ ಗರ್ಭ ಸಂಜಾತರಾಗಿ ಅವತಾರ ಮಾಡಿದ ಶ್ರೀ ಗುರು ದತ್ತಾತ್ರೇಯರು ತ್ರಿಮೂರ್ತಿಗಳ ತತ್ವಸಾಕ್ಷಾತ್ಕಾರ, ಭಕ್ತಿ ಮತ್ತು ಜ್ಞಾನವನ್ನು ಅರ್ಥೈಸುವ, ಅಜ್ಞಾನ ಅಂಧಕಾರವನ್ನು ತೊಲಗಿಸುವ ಜ್ಞಾನಜ್ಯೋತಿ ಎಂದು ಬಿಜೆಪಿ ನಾಯಕ, ವಿಪ ಶಾಸಕ ಸಿ.ಟಿ.ರವಿ ತಿಳಿಸಿದ್ದಾರೆ.
ಗುರು ದತ್ತಾತ್ರೇಯರ ಪಾವನ ಪುಣ್ಯ ಭೂಮಿ ದತ್ತಪೀಠದಲ್ಲಿ ನಡೆಯುವ ದತ್ತಜಯಂತಿಯ ಪ್ರಯುಕ್ತ ದತ್ತಮಾಲಾ ಅಭಿಯಾನದ ಭಾಗವಾಗಿ ದತ್ತಮಾಲೆ ಧಾರಣೆ ಮಾಡಿ ಸಂಕಲ್ಪ ಮಾಡಲಾಯಿತು ಎಂದು ಅವರು ತಿಳಿಸಿದ್ದಾರೆ.