ಸರ್ಕಾರಿ ಕಚೇರಿಗಳ ಆವರಣದಲ್ಲಿ ಸ್ವಚ್ಛತೆ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ನಗರದ ಎಲ್ಲಾ ಸರ್ಕಾರಿ ಕಚೇರಿಗಳ ಆವರಣಗಳಲ್ಲಿ ಪ್ಲಾಸ್ಟಿಕ್ ಬಾಟಲಿ
, ಎಳೆ ನೀರಿನ ಚಿಪ್ಪು, ಇತರೆ ತ್ಯಾಜ್ಯವನ್ನು ಕಾಲಕಾಲಕ್ಕೆ ಶುಚಿತ್ವ ಕಾಪಾಡುವ ಮೂಲಕ ಡೆಂಗ್ಯೂ ತಡೆಗಟ್ಟಲು ಸಹಕರಿಸಬೇಕು ಎಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಕೃಷ್ಣನಾಯ್ಕ್ ತಿಳಿಸಿದರು.

ಡೆಂಗ್ಯೂ ವಿರೋಧಿ ಮಾಸಚಾರಣೆ ಪ್ರಯುಕ್ತ ಬುದ್ದ ನಗರ ಆರೋಗ್ಯ ಕೇಂದ್ರ ವ್ಯಾಪ್ತಿಯ ಸರ್ಕಾರಿ ಕಚೇರಿಗಳಲ್ಲಿ ಡೆಂಗ್ಯೂ ಬಗ್ಗೆ ಅರಿವು ಮೂಡಿಸುವ ಪೋಸ್ಟರ್ ಗಳನ್ನು ವಿತರಿಸುತ್ತಿದ್ದು ಅದರಂತೆ ಇಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕಚೇರಿಯಲ್ಲಿ ಪೋಸ್ಟರ್ ನೀಡಲಾಯಿತು ಎಂದು ಅವರು ತಿಳಿಸಿದರು.

- Advertisement - 

ಎಸಿಡಿಪಿಒ ಮಂಜುಳ ವಿ. ಮತನಾಡಿ ಈ ಕಚೇರಿಯ ಅಧೀನದ ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿ ಮತ್ತು ಅವರಣಗಳಲ್ಲಿ ಘನತ್ಯಾಜ್ಯ ವಿಲೇವಾರಿಗೆ ಸೂಕ್ತ ಮಾರ್ಗದರ್ಶನ ಮಾಡಲಾಗುವುದು ಎಂದು ತಿಳಿಸಿದರು.

ಡಿ.ಹೆಚ್.ಒ ಕಚೇರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಎ.ಗಂಗಾಧರ, ಎಸ್. ಅಶೋಕ್ ಹಾಗೂ ಆರೋಗ್ಯ ಇಲಾಖೆಯ ಹೆಚ್.ಐ.ಒ ಪಾರ್ವತಿ, ಕೇಶವ್ ಅವರ ತಂಡ ಬಾಲಭವನದ ಆವರಣ, ಕ್ರೀಡಾಂಗಣ ಹಾಗೂ ಇನ್ನಿತರ ಸರ್ಕಾರಿ ಕಚೇರಿಗಳ ಅವರಣಗಳಲ್ಲಿ ಡೆಂಗ್ಯೂ ಲಾರ್ವ ಸಮೀಕ್ಷೆ‌ ಹಾಗೂ ಮೇಲ್ವಿಚಾರಣೆ ಮಾಡಿದರು.

- Advertisement - 

ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಚೇರಿಯ ಮೇಲ್ವಿಚಾರಕಿ ನಿರ್ಮಲ, ಎಫ್ ಡಿಎ ಲಕ್ಷ್ಮೀ ಹಾಗೂ ಕಚೇರಿ ಸಿಬ್ಬಂದಿ ಹಾಜರಿದ್ದರು.

 

Share This Article
error: Content is protected !!
";