ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಸ್ವಚ್ಛತಾ ಹೀ ಸೇವಾ ಕಾರ್ಯಕ್ರಮದಡಿ ‘ಏಕ್ ದಿನ್ ಏಕ್ ಸಾತ್ ಏಕ್ ಘಂಟಾ’ ಎನ್ನುವ ಧ್ಯೇಯ ವಾಕ್ಯದೊಂದಿಗೆ ಚಿತ್ರದುರ್ಗ ನಗರಸಭೆ ವತಿಯಿಂದ ಗುರುವಾರ ಐತಿಹಾಸಿಕ ಚಂದ್ರವಳ್ಳಿ ಸೇರಿದಂತೆ ನಗರದ ವಿವಿಧಡೆ ಸ್ವಚ್ಚತಾ ಕಾರ್ಯ ನಡೆಸಲಾಯಿತು.
ಮುಂಜಾನೆ ಚಂದ್ರವಳ್ಳಿಯಲ್ಲಿ ವಾಯುವಿಹಾರಿಗಳೊಂದಿಗೆ ನಗರ ಸಭೆ ಅಧ್ಯಕ್ಷೆ ಅನಿತಾ ರಮೇಶ್, ಸದಸ್ಯರಾದ ಶಶಿಧರ್, ನಗರ ಸಭೆ ಸಹಾಯಕ ಕಾರ್ಯಪಾಲಕ ಅಭಿಯಂತರ ಜಾಫರ್ ಸೇರಿದಂತೆ ನಗರ ಸಭೆ ಸಿಬ್ಬಂದಿ ಸ್ವಚ್ಛತಾ ಕಾರ್ಯ ನಡೆಸಿದರು.
ರಂಗಯ್ಯನಬಾಗಿಲು ಬಳಿ ಹಾಗೂ ಜೋಗಿಮಟ್ಟಿ ರಸ್ತೆಯ ಮಾಸ್ತಮ್ಮ ದೇವಸ್ಥನಾದ ಬಳಿ ನಗರ ಸಭೆ ಸಿಬ್ಬಂದಿ ಸ್ವಚ್ಛತೆ ಕಾರ್ಯಕೈಗೊಂಡು ರಂಗೋಲಿ ಬಿಡಿಸುವ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.
ಈ ವೇಳೆ ಆರೋಗ್ಯ ನಿರೀಕ್ಷರಾದ ಬಾಬು ರೆಡ್ಡಿ, ನಿರ್ಮಿಲ.ಹೆಚ್.ಆರ್, ರುಕ್ಮಿಣಿ, ಭಾರತಿ.ಕೆ. ಹೀನಾ ಕೌಸರ್, ಜಯಪ್ರಕಾಶ್ ಸೇರಿದಂತೆ ಪೌರ ಕಾರ್ಮಿಕರು, ಸಮುದಾಯ ಪ್ರೇರಕರು ಇದ್ದರು.

