ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ತಾಲೂಕಿನ ತೂಬಗೆರೆ ಹೋಬಳಿ ಕೊಂಡಸಂದ್ರ ಗ್ರಾಮದಲ್ಲಿ ಅಳುವಿನಲ್ಲಿರುವ ಕಲ್ಯಾಣಿಗಳ ಸ್ವಚ್ಚತೆ ಹಾಗು ಕಾಣದ ದೇವಾಲಯಗಳ ಸ್ವಚ್ಚತೆಯನ್ನು ಕಾಪಾಡುವ ಸಲುವಾಗಿ ದೊಡ್ಡಬಳ್ಳಾಪುರ ದೇವಾಲಯಗಳ ಸ್ವಚ್ಚತಾ ಸಮಿತಿಯಿಂದ ಐತಿಹಾಸಿಕ ಹಿನ್ನೆಲೆಯುಳ್ಳ ಕೊಂಡಸಂದ್ರ ಗ್ರಾಮದ ಕಾಶಿವಿಶ್ವನಾಥ ದೇವಾಲಯದ ಕಲ್ಯಾಣಿ ಸ್ವಚ್ಚತೆ ಹಾಗೂ ದೇವಾಲಯದ ಸ್ವಚ್ಚತಾ ಕಾರ್ಯವನ್ನ ದೊಡ್ಡಬಳ್ಳಾಪುರ ಭಾಗದ ಪತ್ರಕರ್ತರು, ಕಾಶಿವಿಶ್ವನಾಥ ದೇವಾಲಯದ ಅಭಿವೃದ್ಧಿ ಸಮಿತಿ, ಹಾಗೂ ದೊಡ್ಡಬಳ್ಳಾಪುರ ಭಾಗದ ಹಲವಾರು ಹಿಂದೂ ಕಾರ್ಯಕರ್ತರೊಡನೆ ಸೇರಿ ಸ್ವಚ್ಚತಾ ಕಾರ್ಯವನ್ನು ಮಾಡಲಾಯಿತು.
ದೊಡ್ಡಬಳ್ಳಾಪುರ ಸ್ವಚ್ಛತಾ ಸಮಿತಿಯ ಸ್ವಚ್ಛತಾ ಕಾರ್ಯವೈಖರಿ ಮುಂದೆಯೂ ಮುಂದುವರೆದಿದ್ದು ಮುಂದಿನ ಭಾನುವಾರ ಆಯುಧ ಪೂಜಾ ವಿಶೇಷ ದೊಡ್ಡಬಳ್ಳಾಪುರ ತಾಲ್ಲೂಕಿನ ಲಿಂಗನಹಳ್ಳಿಯ ಪ್ರಸಿದ್ದ ಚೋಳರ ಕಾಲದ ಶ್ರೀ ಆಂಜನೇಯ ದೇಗುಲದಲ್ಲಿ ನಡೆಯಲಿದ್ದು ದೊಡ್ಡಬಳ್ಳಾಪುರದ ಹಿಂದೂ ಕಾರ್ಯಕರ್ತರು ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಬಹುದಾಗಿದೆ.
ಕಾಶಿ ವಿಶ್ವನಾಥ ದೇವಾಲಯದ ಸ್ವಚ್ಛತಾ ಕಾರ್ಯದಲ್ಲಿ ತೂಬಗೆರೆ ಭಾಗದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಸಹ ಕೈ ಜೋಡಿಸಿದ್ದು ವಿಶೇಷವಾಗಿತ್ತು.
ಸ್ವಚ್ಛತೆ ಕಾರ್ಯಕ್ರಮದಲ್ಲಿ ವಕೀಲ ಪ್ರತಾಪ್ ಹಾಗೂ ಟಿ.ಎನ್. ಕೃಷ್ಣಪ್ಪ, ರಾಮಕೃಷ್ಣಪ್ಪ, ವಿಜಯಕುಮಾರ್, ಸಿ.ಎಂ.ಕೃಷ್ಣಪ್ಪ, ಮುನಿ ಕೃಷ್ಣಾಚಾರ್, ಕೇಬಲ್ ಮಂಜು, ಗೋಪಾಲ್, ಶ್ರೀನಿವಾಸ ಗುರೂಜಿ, ಘನ ಶ್ಯಾಮ್, ಕೆಂಪರಾಜು, ಮಲ್ಲೇಶ್, ಶ್ರೀನಿವಾಸ್, ಮಧು, ನರಸಿಂಹಮೂರ್ತಿ, ಉದಯ ಅರಾಧ್ಯ, ಹಳ್ಳಿ ರೈತ ಅಂಬರೀಶ್, ಶಿವಕುಮಾರ್ ಸ್ವಾಮಿ, ಗಂಗರಾಜು, ರಾಜೇಶ್ ಸೇರಿದಂತೆ ತೂಬಗೆರೆ ಭಾಗದ ಸುತ್ತಮುತ್ತಲಿನ ಗ್ರಾಮಗಳ ಹಲವಾರು ಹಿಂದೂ ಕಾರ್ಯಕರ್ತರು ಭಾಗವಹಿಸಿದ್ದರು.
ಸ್ವಚ್ಛತೆ ಎಂದರೆ ಕೇವಲ ಹೊರಗಿನ ಶೌಚವಲ್ಲ ಅದು ಆಂತರಿಕ ಶುದ್ಧತೆ, ದೈಹಿಕ ಆರೈಕೆ, ಗೃಹ ನಿರ್ವಹಣೆ, ಸಾಮಾಜಿಕ ಹೊಣೆಗಾರಿಕೆ ಹಾಗೂ ಧಾರ್ಮಿಕ ಭಕ್ತಿಯ ಸಮಗ್ರ ರೂಪವಾಗಿದೆ. ನಮ್ಮ ಸಂಸ್ಕೃತಿ ಸದಾ “ಶೌಚಂ ತಪಸ್ಸಿ” ಎಂಬ ಆದರ್ಶ ಪ್ರತಿಪಾದಿಸಿದೆ. ಈ ಹಿನ್ನೆಲೆಯಲ್ಲಿ ದೇವಾಲಯ ಮಟ್ಟದಲ್ಲಿ ಸ್ವಚ್ಛತೆ ಮರೀಚಿಕೆಯಾಗಿದೆ ಅದರಿಂದ ಅಳಿವಿನ ಅಂಚಿನಲ್ಲಿರುವ ಕಲ್ಯಾಣಿ ಸ್ವಚ್ಚತೆ ಗಾಗಿ ಶ್ರಮದಾನ ದಿಂದ ಅರೋಗ್ಯ ಮಾನಸಿಕ ಮನಃಶಾಂತಿ ಸಿಗುತ್ತದೆ.
ಕೆ ಗುರುದೇವ, ಪರಿಸರ ವಾದಿಗಳು, ದೊಡ್ಡಬಳ್ಳಾಪುರ.

